ಕಿರುತೆರೆಯಾಗಲಿ, ಹಿರಿ ತೆರೆಯಾಗಲಿ ನಟಿಮಣಿಯರು ಮಿಂಚೋದು ಪೋಟೋಶೂಟ್ ನಿಂದಲೇ. ಈಗಲೂ ಕಿರುತೆರೆಯ ನಟಿಮಣಿಯೊಬ್ಬರು ವಿಭಿನ್ನವಾದ ಪೋಟೋ ಶೂಟ್ ಮೂಲಕ ಗಮನಸೆಳೆದಿದ್ದಾರೆ. ಕನ್ನಡ ಕಿರುತೆರೆಯ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಗಮನಸೆಳೆದ ನಟಿ ಸುಕೃತಾ ನಾಗ್ (Sukrutha Nag). ಇದುವರೆಗೂ ಸ್ಟೈಲಿಶ್ ಡ್ರೆಸ್ ಮೂಲಕ ಮೆರಿತಿದ್ದ ಸುಕೃತಾ ಈಗ ಸುಂದರವಾದ ಅಚ್ಚಬಿಳುಪಿನಸೀರೆ ಮೂಲಕ ಕಣ್ಮನ ಸೆಳೆದಿದ್ದಾರೆ.
ಸದ್ಯ ಕನ್ನಡ ಕಿರುತೆರೆಯ ಲಕ್ಷಣ ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚ್ತಿರೋ ಸುಕೃತಾ ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹವಾ ಮೂಡಿಸಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ ಸುಕೃತಾ ಸ್ಟೈಲಿಶ್ ಬಟ್ಟೆಯಲ್ಲಿ ಪೋಸ್ ಕೊಡ್ತಿದ್ದರು. ಆದರೇ ಇದೇ ಮೊದಲ ಬಾರಿಗೆ ಸೀರೆಯಲ್ಲಿ ಪೋಸ್ ನೀಡಿದ್ದಾರೆ. ಅಚ್ಚ ಬಿಳುಪಿನ ಸೀರೆ, ದೊಡ್ಡದಾದ ಬಿಂದಿ ,ಒಫನ್ ಹೇರ, ಹಾಗೂ ದೊಡ್ಡದಾದ ಮೂಗಿನನತ್ತಿನ ಮೂಲಕ ಸುಕೃತಾ ಮೋಹಕ ಸೌಂದರ್ಯ ವತಿಯಂತೆ ಕಂಗೊಳಿಸಿದ್ದಾರೆ.
ಸೆಲೆಬ್ರೆಟಿಗಳು ಹೊಸ ಹೊಸ ಐಡಿಯಾ ಹಾಗೂ ಸ್ಟೈಲ್‌ನಲ್ಲಿ ಪೋಟೋಶೂಟ್ ಗಳಿಗೆ ಪೋಸ್ ಕೊಡೋದು ಕಾಮನ್. ಈ ಭಾರಿ ಸುಕೃತಾ ಕೂಡಾ ಇಂತಹುದೇ ಐಡಿಯಾವೊಂದನ್ನು ಅನುಸರಿಸಿದ್ದಾರೆ. ಸದಾ ಮಾಡರ್ನ್ ಡ್ರೆಸ್ ಗಳಲ್ಲಿ ಮಿಂಚುತ್ತಿದ್ದ ಸುಕೃತಾ, ಈ ಭಾರಿ ಸೀರೆ ಉಟ್ಟು ಕ್ಯಾಮರಾ ಎದುರು ಕಾಣಿಸಿಕೊಂಡಿದ್ದಾರೆ. ಆದರೆ ಬಿಳಿಸೀರೆಗೆ ಕೆಂಪು ಅಂಚಿನ ಸೀರೆ ಉಟ್ಟ ಸುಕೃತಾ ಬ್ಲೌಸ್ ಮಾತ್ರ ಧರಿಸಿಲ್ಲ. ಶಾಕುಂತಲೆ ಥೀಮ್ ನಲ್ಲಿ ಸುಕೃತಾ ನಡೆಸಿದ ಪೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸುಕೃತಾ ಭಾವ ಭಂಗಿಗಳಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
ಅಚ್ಚ ಬಿಳುಪಿನ ಕಾಟನ್ ಸೀರೆಯಲ್ಲಿ ದುಂಡು ಮೊಗದ ಸುಂದರಿ ಸುಕೃತಾ ವಯ್ಯಾರಕ್ಕೆ ಸಖತ್ ಕಮೆಂಟ್ ಗಳು ಹರಿದು ಬಂದಿದ್ದು ವಿಲನ್ ಪಾತ್ರದ ಸುಂದರಿಗೆ ಪಾಸಿಟಿವ್ ಪೋಸ್ ನ ಕಾಂಪ್ಲಿಮೆಂಟ್ ಖುಷಿ ತಂದಂತಿದೆ. ಇನ್ ಸ್ಟಾಗ್ರಾಂನಲ್ಲಿ ಸದಾ ರೀಲ್ಸ್ ವಿಡಿಯೋ ಪೋಟೋಗಳ ಮೂಲಕ ಗಮನಸೆಳೆಯೋ ಸುಕೃತಾ ಈಗ ಪೋಟೋಶೂಟ್ ಮೂಲಕವೂ ಗಮನ ಸೆಳೆದಿದ್ದಾರೆ. 166k ಫಾಲೋವರ್ಸ್ ಹೊಂದಿರೋ ಸುಕೃತಾ, ಇನ್ ಸ್ಟಾಗ್ರಾಂ ತುಂಬ ಹಾಟ್ ಹಾಟ್ ಪೋಟೋಗಳದ್ದೇ ಕಾರುಭಾರು. ಈಗ ಸೀರೆ ಪೋಟೋದಲ್ಲಿ ಮಿಂಚೋ ಮೂಲಕ ಕಿರುತೆರೆ ಮಂದಿಗೂ ಮೋಡಿ ಮಾಡಿದ್ದಾರೆ.
ಇದನ್ನೂ ಓದಿ : ಮೋಡಿ ಮಾಡಲು ರೆಡಿ ಆದ್ರು ರಚಿತಾ ರಾಮ್ – ರಾಣಾ ಜೋಡಿ : ಫೆ.24 ರಂದು ತೆರೆಗೆ ಬರಲಿದೆ ಏಕ್ ಲವ್ ಯಾ
ಇದನ್ನೂ ಓದಿ : ಇನ್‌ಸ್ಟಾಗ್ರಾಂ ನಿಂದ ನಾಪತ್ತೆಯಾದ್ರಾ ನೋರಾ ಫತೇಹಿ : ಅಭಿಮಾನಿಗಳ ಆತಂಕಕ್ಕೆ ಕೊನೆಗೂ ಸಿಕ್ತು ಉತ್ತರ
( Lakshana Serial Actress Sukrutha Nag as Shakuntala photoshoot viral)