Ashneer Grover BharatPe: ತಾವೇ ಸ್ಥಾಪಿಸಿದ ಕಂಪನಿಯಿಂದ ಹೊರನಡೆಯಲು 4,000 ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಸಹ ಸಂಸ್ಥಾಪಕ

ಹಲವರು ತಮ್ಮ ಕಲ್ಪನೆಗೆ ರೂಪುರೇಷೆ ನೀಡಿ ಸಂಸ್ಥೆಗಳನ್ನು, ಕಂಪನಿಗಳನ್ನು ಹುಟ್ಟುಹಾಕುತ್ತಾರೆ. ಜೊತೆಗೆ ತಮ್ಮ ಕಂಪನಿಯನ್ನು ಬೆಳೆಸಲು ವಿಧವಿಧವಾಗಿ ಪ್ರಯತ್ನಿಸುತ್ತಾರೆ ಆದರೆ ಇಲ್ಲೊಂದು ಸುದ್ದಿ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಪ್ರಸಿದ್ಧ ಡಿಜಿಟಲ್ ಪೆಮೆಂಟ್ ಅಪ್ಲಿಕೇಶನ್ ಭಾರತ್‌ಪೇ ಸಹಸ್ಥಾಪಕ ಅಶ್ನೀರ್ ಗ್ರೋವರ್ ಅವರು ತಮ್ಮದೇ ಕಂಪನಿಯನ್ನು ತೊರೆಯುವ ನಿರ್ಧಾರಕ್ಕೆ (Ashneer Grover BharatPe) ಬಂದಿದ್ದಾರೆ. ಅವರು ತಾವೆ ಸಂಸ್ಥಾಪಕರಾಗಿರುವ ಭಾರತ್‌ಪೇ ಕಂಪನಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಆದರೆ ತಮ್ಮ ಹೂಡಿಕೆಯ ಬದಲಿಗೆ 4,000 ಕೋಟಿ ರೂ.ಗಳನ್ನು ತಮಗೆ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಪ್ರಸ್ತುತ ಭಾರತ್‌ಪೇ ಕಂಪನಿಯನ್ನು ಅಶ್ನೀರ್ ಗ್ರೊವರ್ ಅವರು ಶೇ. 9.5ರಷ್ಟು ಷೇರುಗಳನ್ನು ಹೊಂದಿದ್ದಾರೆ. ತಮಗೆ ಈ ಷೇರಿಗೆ ಸರಿಹೊಂದುವ ಹಣವನ್ನು ನೀಡಿದಲ್ಲಿ ಕಂಪನಿಯನ್ನು ತೊರೆಯುವುದಾಗಿ ಅವರು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಈಮುನ್ನ ಕಂಪನಿಯಲ್ಲಿ ಆಂತರಿಕವಾಗಿ ಸಂಸ್ಥಾಪಕರಾದ ಅಶ್ನೀರ್ ಗ್ರೋವರ್ ಅವರ ವಿರುದ್ಧವೇ ಹಲವು ಆರೋಪಗಳು ಕೇಳಿಬಂದಿದ್ದವು. ಈಕುರಿತು ಖಾಸಗಿ ಆಂಗ್ಲ ಸುದ್ದಿಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಭಾರತ್‌ಪೇ ಸಹಸ್ಥಾಪಕ ಅಶ್ನೀರ್ ಗ್ರೋವರ್ ಅವರು, ಕಂಪನಿಯಿಂದ ನಿರ್ಗಮಿಸಲು ಬಯಸಿದರೆ ಹೂಡಿಕೆದಾರರಿಂದ ತಮ್ಮ ಪಾಲನ್ನು ಖರೀದಿಸಲು 4,000 ಕೋಟಿ ರೂ.ಗಳನ್ನು ಬೇಡಿಕೆಯಿಡುವುದಾಗಿ ತಿಳಿಸಿದ್ದಾರೆ. ನನ್ನ ವಿರುದ್ಧ ಆರೋಪಗಳನ್ನು ಮಾಡಿ ರಾಜೀನಾಮೆ ನೀಡುವಂಗತೆ ಒತ್ತಾಯಿಸಿದರೆ ಇದು ವಿಚಾರಣೆಗೆ ಮುನ್ನ ಮರಣದಂಡನೆ ಶಿಕ್ಷೆ ಘೋಷಿಸಿದಂತೆ. ನಾನು ಭಾರತ್‌ಪೇ ಕಂಪನಿಯ ಎಂಡಿ (ವ್ಯವಸ್ಥಾಪಕ ನಿರ್ದೇಶಕ). ಈ ಕಂಪನಿಯನ್ನು ನಾನೇ ನಡೆಸುತ್ತಿದ್ದೇನೆ. ಒಂದುವೇಳೆ ನಾನು ಭಾರತ್‌ಪೇ ಕಂಪನಿಯ ಎಂಡಿ ಆಗುವ ಅಗತ್ಯವಿಲ್ಲ, ಬೇರೆಯವರು ಕಂಪನಿಯನ್ನು ನಡೆಸಬೇಕು ಎಂದು ಆಡಳಿಯ ಮಂಡಳಿಯು ಭಾವಿಸಿದರೆ ದಯವಿಟ್ಟು ನನ್ನ ಪಾಲಿನ 4,000 ಕೋಟಿ ಹಣವನ್ನು ನನಗೆ ನೀಡಿ. ಆನಂತರ ನೀವು ಕಂಪನಿಯ ಸಂಪೂರ್ಣ ಒಡೆತನವನ್ನು ಪಡೆದುಕೊಳ್ಳಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತ್‌ಪೇ ಅಪ್ಲಿಕೇಶನ್‌ನ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರ ನಡುವೆ ಎಲ್ಲವು ಸರಿಯಾಗಿಲ್ಲ ಎಂದು ವರದಿಯಾಗಿದೆ. ಆಡಿಯೋ ಒಂದು ವೈರಲ್ ಆದ ನಂತರ ಅಶ್ನೀರ್ ಗ್ರೋವರ್ ವಿರುದ್ಧ ಕೆಲವು ತನಿಖೆಗಳನ್ನು ನಡೆಸುವಂತೆ ಕಂಪನಿಯ ಆಡಳಿತ ಮಂಡಳಿಯು  (ಬೋರ್ಡ್) ಸೂಚನೆ ನೀಡಿದೆ. ಸಹ ಸಂಸ್ಥಾಪಕರೇ ಆದ ಅಶ್ನೀರ್ ಗ್ರೋವರ್ ಭಾರತ್‌ಪೇಯಿಂದ ಹೊರಬರುವರೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

(Ashneer Grover BharatPe demands 4 thousand crores to leave company)

Comments are closed.