Lata Mangeshkar Love Story: ಲತಾ ಮಂಗೇಶ್ಕರ್ ಮದುವೆಯಾಗದೇ ಇದ್ದಿದ್ದೇಕೆ? ಪವಿತ್ರ ಪ್ರೇಮಕ್ಕಾಗಿ ಜೀವನವಿಡೀ ಅವಿವಾಹಿತೆಯಾಗಿ ಉಳಿದಿದ್ದ ಗಾನ ಕೋಗಿಲೆ

ಗಾನ ಕೋಗಿಲೆ, ಭಾರತದ ನಿಜವಾದ ಧ್ವನಿಯಂತಿದ್ದ ಲತಾ ಮಂಗೇಶ್ಕರ್ ಅವರು ಇನ್ನಿಲ್ಲ ಎಂಬ ಸುದ್ದಿ ಇಂದು (ಫೆಬ್ರುವರಿ 6) ಹೊರಬೀಳುತ್ತಿದ್ದಂತೆ ಇಡೀ ದೇಶಕ್ಕೆ ದೇಶವೆ ಬೇಸರದಲ್ಲಿ ಮುಳುಗಿತು. ಲತಾ ಮಂಗೇಶ್ಕರ್ (Lata Mangeshkar) ಹಾಡುಗಳ ಮಾಧುರ್ಯದಲ್ಲಿ ಸಿಲುಕಿ ಅವರನ್ನು ಸ್ಮರಿಸುವ ಹಂಬಲಕ್ಕೀಡಾಯಿತು. ಆಧುನಿಕ ಯುವಕ ಯುವತಿಯರು ಗಾನ ಕೋಗಿಲೆಯ ಜೀವನಗಾಥೆಗಾಗಿ ಹುಡುಕಿದರು. ಮೇರು ವ್ಯಕ್ತಿತ್ವದ, ಮಹಾನ್ ಸಾಧನೆ ಮಾಡಿದ ಲತಾ ಮಂಗೇಶ್ಕರ್ ಅವರು ಅವಿವಾಹಿತರಾಗಿಯೇ (Lata Mangeshkar Love Story) ಉಳಿದಿದ್ದೇಕೆ ಎಂಬ ಪ್ರಶ್ನೆ ಹಲವರ ಮನದಲ್ಲಿ ಸುಳಿದುಹೋಯಿತು. ಈ ಪ್ರಶ್ನೆಗೆ ಉತ್ತರ ಹುಡುಕಿ ನೀಡಿದ ಕುತೂಹಲಕರ ಮಾಹಿತಿ ನಿಮ್ಮ ಓದಿಗಾಗಿ ಇಲ್ಲಿದೆ.

ಲತಾ ಮಂಗೇಶ್ಕರ್ ( Lata Mangeshkar Profile ) ಅವರು ಮಧ್ಯಪ್ರದೇಶ ರಾಜ್ಯದ ಇಂದೋರ್‌ನ ಸಿಖ್ ಮೊಹಲ್ಲಾದಲ್ಲಿ ಮಹಾರಾಷ್ಟ್ರದ ಕುಟುಂಬದಲ್ಲಿ 1929 ರಲ್ಲಿ ಜನಿಸಿದರು. ಆಕೆಯ ತಂದೆ, ಗೋವಾದಿಂದ ಕೊಂಕಣಿ ಮಾತನಾಡುವ ಕಲಾವಂತ ಕುಟುಂಬಕ್ಕೆ ಸೇರಿದ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರು ಶಾಸ್ತ್ರೀಯ ಗಾಯಕ ಮತ್ತು ರಂಗಭೂಮಿ ನಟರಾಗಿದ್ದರು. ಥಲ್ನೇರ್‌ನ ತಾಯಿ ಶುದ್ಧಮತಿ ದೀನನಾಥನ ಎರಡನೇ ಹೆಂಡತಿ. ಇವರಿಗೆ ಆಶಾ, ಉಷಾ ಮೀನಾ ಹಾಗೂ ಹೃದಯನಾಥ್ ಹೀಗೆ ಐದು ಮಕ್ಕಳು. ಲತಾ ಅವರ ಮೊದಲ ಹೆಸರು “ಹೇಮಾ”. ಭಾವ ಬಂಧನ್ ನಾಟಕದಲ್ಲಿ ಅವರು ಮಾಡಿದ ಅಭಿನಯದ ನಂತರ ಲತಾ ಎಂಬ ಹೆಸರು (Indian Playback Singer Lata Mangeshkar) ಪ್ರಸಿದ್ಧಿಯಾಯಿತು. ಇದುವರೆಗೂ ಲತಾ ಮಂಗೇಶ್ಕರ್ ಅವರು ಹಿಂದಿ ಸೇರಿದಂತೆ ಒಟ್ಟು 20 ಪ್ರಾದೇಶಿಕ

ಲತಾ ಮಂಗೇಶ್ಕರ್ ಅವರಿಗೆ ಪ್ರೇಮ ವೈಫಲ್ಯವಾಗಿತ್ತಂತೆ
ಬಹಳ ಚಿಕ್ಕಂದಿನಲ್ಲೇ ಲತಾ ಮಂಗೇಶ್ಕರ್ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಆನಂತರ ತಮ್ಮ ಕುಟುಂಬ, ಅಂದರೆ ಅಮ್ಮ ಮತ್ತು ತಮ್ಮ ತಂಗಿಯರನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಬಿತ್ತು. ಈ ಜವಾಬ್ದಾರಿಯಲ್ಲೇ ಅವರು ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಕಳೆಯುವಂತಾಯಿತು. ಅಲ್ಲದೇ ಅವರ ಜೀವನದಲ್ಲಿ ಪ್ರೇಮ ವೈಫಲ್ಯವೂ ಸಹ ಆಗಿದ್ದು ಎನ್ನಲಾಗಿದೆ. ಹೀಗಾಗಿ ಅವರು ಜೀವನದಲ್ಲಿ ಮದುವೆಯಾಗಲೆ ಇಲ್ಲ.

ಕ್ರಿಕೆಟ್ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದ ಲತಾ ಮಂಗೇಶ್ಕರ್ ಅವರು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಕ್ರಿಕೆಟಿಗರಾಗಿದ್ದ ರಾಜ ಮನೆತನದ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್ ಅವರನ್ನು ಲತಾ ಮಂಗೇಶ್ಕರ್ ಇಷ್ಟಪಟ್ಟು ಪ್ರೀತಿಸುತ್ತಿದ್ದರು. ಆದರೆ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್ ಅವರು ರಾಜ ಮನೆತನದವರು ಎಂಬ ಕಾರಣಕ್ಕೆ ಅವರ ಕುಟುಂಬ ಲತಾ ಮಂಗೇಶ್ಕರ್ ಜೊತೆ ಮದುವೆಯಾಗಲು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್ ಮತ್ತು ಲತಾ ಮಮಗೇಶ್ಕರ್ ಇಬ್ಬರೂ ತಮ್ಮ ಜೀವಮಾನದಲ್ಲಿ ಮದುವೆಯನ್ನೇ ಆಗಲಿಲ್ಲ. ಇಬ್ಬರೂ ಉತ್ತಮ ಸ್ನೇಹಿತರಾಗಿ ಬಾಳ್ವೆ ನಡೆಸಿದರು.

ಇದನ್ನೂ ಓದಿ: Lata Mangeshkar Profile: ಹಾಡು ನಿಲ್ಲಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಸಂಗೀತ ಜೀವನದ ಮೆಲುಕು

(Lata Mangeshkar love story why lata mangeshkar did not married)

Comments are closed.