Yash – Radhika : ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ಎಲ್ಲಾ ಕಡೆಗಳಲ್ಲಿ ಪಟಾಕಿ ಸದ್ದು, ಹಣತೆಯ ಪ್ರಕಾಶ ಹಾಗೂ ಆಕಾಶಬುಟ್ಟಿಗಳ ಹಾರಾಟ ಮೈ ಮನ ತಣಿಸುವಂತಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ರಾಕಿ ಭಾಯ್ ಯಶ್ ಕೂಡ ತಮ್ಮ ನಿವಾಸದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ.
ಕೆಜಿಎಫ್ 2 ಖ್ಯಾತಿಯ ನಟ ಯಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಾವಳಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ . ಫೋಟೋಗಳಲ್ಲಿ ನಟಿ ರಾಧಿಕಾ ಪಂಡಿತ್, ನಟ ಯಶ್, ಮಕ್ಕಳಾದ ಯಥರ್ವ್ ಹಾಗೂ ಆಯ್ರಾ ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮವನ್ನು ಆಚರಿಸುತ್ತಿರೋದನ್ನು ಕಾಣಬಹುದಾಗಿದೆ. ತುಂಬಾ ಮುಖ್ಯ ಎನಿಸುವ ಕ್ಷಣಗಳಿವು ಎಂದು ಈ ಫೋಟೋಗಳಿಗೆ ನಟ ಯಶ್ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಫೋಟೋಗಳ ಮೂಲಕ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ .
ಈ ಫೋಟೋದಲ್ಲಿ ನಟ ಯಶ್ ಹಸಿರು ಬಣ್ಣದ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದರೆ, ನಟಿ ರಾಧಿಕಾ ಪಂಡಿತ್ ಕ್ರೀಮ್ ಬಣ್ಣದ ಕುರ್ತಾ ಧರಿಸಿದ್ದಾರೆ. ಆಯ್ರಾ ಗುಲಾಬಿ ಬಣ್ಣದ ಫ್ರಾಕ್ನಲ್ಲಿ ಮುದ್ದು ಮುದ್ದಾಗಿ ಕಂಡರೆ ಯಥರ್ವ ಹಸಿರು ಹಾಗೂ ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದಾನೆ.
ಕೆಜಿಎಫ್ 2 ಸಿನಿಮಾದ ಬಳಿಕ ಸ್ಯಾಂಡಲ್ವುಡ್ ಹಾಗೂ ಯಶ್ರ ಕೀರ್ತಿ ಮುಗಿಲೆತ್ತರಕ್ಕೆ ಚಾಚಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ 2 ಸಿನಿಮಾ ಯಶ್ರ 18ನೇ ಸಿನಿಮಾವಾಗಿತ್ತು. ಇದಾದ ಬಳಿಕ ಯಶ್ ತಮ್ಮ 19ನೇ ಸಿನಿಮಾವನ್ನ ಯಾವಾಗ ಘೋಷಿಸ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಸಧ್ಯ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ಮಾಹಿತಿ ನೀಡದ ನಟ ಯಶ್ ಪತ್ನಿಯೊಂದಿಗೆ ವಿದೇಶ ಪ್ರವಾಸ ಮಾಡುತ್ತಾ, ಮಕ್ಕಳೊಂದಿಗೆ ಮನೆಯಲ್ಲಿ ಎಂಜಾಯ್ ಮಾಡುತ್ತಾ ಫ್ಯಾಮಿಲಿ ಟೈಮ್ ಕಳೆಯುತ್ತಿದ್ದಾರೆ.
ಇದನ್ನು ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ
ಇದನ್ನೂ ಓದಿ : Vijaya Raghavendra : ‘ಮರೀಚಿ’ಯಾದ ಚಿನ್ನಾರಿ ಮುತ್ತ- ಸಿದ್ಧ್ರುವ್ ಚೊಚ್ಚಲ ಚಿತ್ರಕ್ಕೆ ಹೀರೋ ಆದ ವಿಜಯ ರಾಘವೇಂದ್ರ
The celebration of the festival of lights at Yash – Radhika’s residence is loud