Rishi Sunak Lifestyle : ಹೋಟೆಲ್ ಸಪ್ಲೈಯರ್, ವೈದ್ಯರ ಮಗ ಬ್ರಿಟನ್ ಪ್ರಧಾನಿ ಆಗಿದ್ದು ಹೇಗೆ ? ಇಲ್ಲಿದೆ ರಿಷಿ ಸುನಕ್ ಬದುಕಿನ ರೋಚಕ ಕಹಾನಿ

ಲಂಡನ್ : (Rishi Sunak Lifestyle) ಬ್ರಿಟನ್ ರಾಜಕೀಯ ಇತಿಹಾಸದಲ್ಲಿಯೇ ರಿಷಿ ಸುನಕ್ ಹೊಸ ಮೈಲಿಗಲ್ಲು ಸಾದಿಸಿದ್ದಾರೆ. ಬ್ರಿಟನ್ ಪ್ರಧಾನಿ ಪಟ್ಟ ಏರುತ್ತಿರುವ ಮೊದಲ ಭಾರತೀಯ, ಮಾತ್ರವಲ್ಲ ಮೊದಲ ಹಿಂದೂ ಪ್ರಧಾನಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪಂಜಾಬ್ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿರುವುದರಿಂದ ಹಿಂದೆ ರೋಚಕ ಕಹಾನಿ(Rishi Sunak Lifestyle) ಇದೆ. ಸಾಮಾನ್ಯ ವೈದ್ಯನ ಮಗನಾಗಿರುವ ರಿಷಿ ಸುನಕ್ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವುದು ಹೇಗೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

1960ರ ಆಸುಪಾಸಿನಲ್ಲಿ ಪೂರ್ವ ಆಫ್ರಿಕಾ ಪ್ರಾಂತ್ಯದಿಂದ ಬ್ರಿಟನ್‌ಗೆ ರಿಷಿ ಅವರ ಪೂರ್ವಜರು ವಲಸೆ ಬಂದ್ದಿದವರು. ರಿಷಿ ಅವರ ತಂದೆ ಇಂಗ್ಲೆಂಡ್‌ನ ಬಂದರು ನಗರಿ ಸೌತ್ಆಂಪ್ಟನ್‌ನಲ್ಲಿ ವೈದ್ಯರಾಗಿದ್ದರು. ಅವರ ತಾಯಿ ಔಷಧಿ ಕೇಂದ್ರವೊಂದನ್ನು ನಡೆಸುತ್ತಿದ್ದರು. ರಿಷಿ(Rishi Sunak Lifestyle) ಆಕ್ಸಫರ್ಡ್‌ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವುದಕ್ಕೂ ಮುನ್ನ ಸ್ಥಳೀಯ ಭಾರತೀಯ ರೆಸ್ಟೊರೆಂಟ್‌ನಲ್ಲಿ ವೇಯ್ಟರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಎಂಬಿಎ ಓದಿ ಹಣಕಾಸು ಸಚಿವರಾದ್ರು

ಬ್ರಿಟನ್ ನೂತನ ಪ್ರಧಾನಿ 42ವರ್ಷದ ರಿಷಿ ಸುನಕ್ ಅವರ ಪೋಷಕರು ಭಾರತದ ಮೂಲದವರು. ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ 1960ರಲ್ಲಿ ವಲಸೆ ಹೋದರು. ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿ ನಂತರ, ಇನ್‌ವೆಸ್ಟ್‌ ಬ್ಯಾಂಕ್‌ ಕಂಪನಿಯೊಂದರಲ್ಲಿ ಅವರು ಅನಾಲಿಸ್ಟ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಹಲವು ಕಂಪೆನಿಗಳಲ್ಲಿ ಅವರು ಕೆಲಸ ನಿರ್ವಹಿಸಿದ್ದಾರೆ. ಬ್ರಿಟನ್ ಪ್ರಧಾನಿ ಆಗುವ ಮೊದಲು ತನ್ನ ತಾಯಿ ನಡೆಸುತ್ತಿದ್ದ ಔಷಧಾಲಯದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ಅಮ್ಮನ ವ್ಯವಹಾರವನ್ನು ದೊಡ್ಡಮಟ್ಟಕ್ಕೆ ವಿಸ್ತರಣೆ ಮಾಡುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜಕೀಯ ರಂಗಕ್ಕೆ ಧುಮುಕಿದ ರಿಷಿ ಸುನಕ್ ಕೆಲವೇ ಸಮಯದಲ್ಲಿ ಪ್ರಧಾನಿಯ ಮನ ಗೆದ್ರು. ಬೋರಿಸ್ ಜಾನ್ಸನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿಯೂ ರಿಷಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲಾ ತಾನೊಬ್ಬ ಬ್ರಿಲಿಯಂಟ್ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ.

ಇದನ್ನೂ ಓದಿ :Kohli reveals secret of success Vs Pak : ಪಾಕಿಸ್ತಾನ ವಿರುದ್ಧದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಸೀಕ್ರೆಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಲಂಡನ್ ಪ್ರೀತಿ, ಬೆಂಗಳೂರಲ್ಲಿ ಮದುವೆ; ರಿಷಿ- ಅಕ್ಷತಾ ಆದರ್ಶ ಬದುಕು
ಭಾರತದ ಸಿರಿವಂತರ ಸಾಲಿನಲ್ಲಿರುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಅಳಿಯನೇ ಈ ರಿಷಿ ಸುನಕ್. ಇನ್ಫೋಸಿಸ್‌ ಸಹ-ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಮಗಳು, ಫ್ಯಾಷನ್ ಡಿಸೈನರ್ ಅಕ್ಷತಾ ಮೂರ್ತಿ ಓದಿದ್ದು ಲಂಡನ್ ನಲ್ಲಿ. ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವಾಗಲೇ ಇಬ್ಬರಿಗೂ ಪರಿಚಯವಾಗಿತ್ತು. ನಂತರ ಪ್ರೀತಿಯ ವಿಚಾರವನ್ನು ತನ್ನ ತಂದೆಯ ಬಳಿಯಲ್ಲಿ ಅಕ್ಷತಾ ಹೇಳಿಕೊಂಡಿದ್ದರು. ಆರಂಭದಲ್ಲಿ ಮದುವೆಗೆ ಸಮ್ಮತಿ ಸೂಚಿಸಿದ ನಾರಾಯಣ ಮೂರ್ತಿ ಅವರು ನಂತರದಲ್ಲಿ ರಿಷಿ ಸುನಕ್ ಅವರನ್ನು ಖುದ್ದು ಭೇಟಿಯಾದ್ರು. ರಿಷಿ ಸುನಕ್ ಅವರ ಬುದ್ದಿವಂತಿಕೆ, ಪ್ರಾಮಾಣಿಕತೆ ನಾರಾಯಣ ಮೂರ್ತಿ ಅವರಿಗೆ ಖುಷಿಕೊಟ್ಟಿತ್ತು. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ 2009ರ ಆಗಸ್ಟ್‌ನಲ್ಲಿ ರಿಷಿ-ಅಕ್ಷತಾ ಅವರ ಮದುವೆಯನ್ನು ನೆರವೇರಿಸಲಾಗಿತ್ತು. ರಿಷಿ ಸುನಕ್‌ ಅಕ್ಷತಾ ಮೂರ್ತಿ ದಂಪತಿಗಳಿಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ : Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಹೂಡಿಕೆ ಕಂಪೆನಿ ವ್ಯವಹಾರ, ರಾಜಕೀಯಕ್ಕೆ ಎಂಟ್ರಿ

2015ರಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಿಷಿ ಸುನಕ್ ಅವರು ಸಂಸದರಾಗುವ ಮೊದಲು ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಿಟನ್‌ನ ಸಣ್ಣ ಕಂಪನಿಗಳು ಹಾಗೂ ಉದ್ಯಮಗಳಿಗೆ ಚೇತರಿಕೆ ನೀಡಲು ಸಹಕಾರಿಯಾಗಿರುವ ಖಾಸಗಿ ಹೂಡಿಕೆ ಕಂಪನಿಯನ್ನು 2010ರಿಂದ ಆರಂಭಿಸಿದ್ದರು. 2018 ಮತ್ತು 2019ರಲ್ಲಿ ಸ್ಥಳೀಯ ಸರಕಾರಕ್ಕೆ ಸಂಸತ್ತಿನ ಅಧೀನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2019ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿ (ಖಜಾನೆ) ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : Cyclone Sitrang : ದೀಪಾವಳಿ ಬೆನ್ನಲ್ಲೇ ಅಪ್ಪಳಿಸಿದ ಸಿತ್ರಾಂಗ್‌ ಚಂಡಮಾರುತ ; 7 ಮಂದಿ ಬಲಿ

2020ರಲ್ಲಿ ಅವರು ಹಣಕಾಸು ಸಚಿವರಾಗಿ ಜವಾಬ್ದಾರಿ ವಹಿಸಿದ ಸುನಕ್‌ ಅವರು ಬ್ರಿಟನ್‌ ಸರಕಾರದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಹಣಕಾಸು ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು . ಆದರೆ, ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೊಂದಿಗೆ ಭಿನ್ನಾಭಿಪ್ರಾಯದಿಂದಾಗಿ 2022ರ ಜುಲೈನಲ್ಲಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದರು. ಅನಂತರ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು. ಇದೀಗ ಲಿಜ್‌ ಟ್ರಸ್‌ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಸುನಕ್‌ (42) ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್‌ ನಾಯಕರ ಪೈಕಿ ಅತಿಹೆಚ್ಚು ಸಂಸದರ ಬೆಂಬಲ ರಿಷಿ ಅವರಿಗೆ ಸಿಕ್ಕಿದೆ. ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಬ್ರಿಟನ್‌ಗೆ ಚೇತರಿಕೆ ನೀಡುವ ಸವಾಲು ಈಗ ರಿಷಿ ಸುನಕ್‌ ಅವರ ಮುಂದಿದೆ. ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರು ಕೋವಿಡ್‌ ಕಾಲಘಟ್ಟದಲ್ಲಿ ತೆಗೆದುಕೊಂಡ ಆರ್ಥಿಕ ನಿಲುವುಗಳು ಬೋರಿಸ್‌ ಜಾನ್ಸನ್‌ ಸರಕಾರವನ್ನು ಬಚಾವ್‌ ಮಾಡಿದ್ದು , ನಾಯಕತ್ವ ಚುನಾವಣೆಯಲ್ಲೂ ಕೂಡ ಅವರು 2ನೇ ಸ್ಥಾನ ಪಡೆದಿದ್ದರು.

ತಂದೆ ಹಾಗೂ ತಾಯಿ ಉಷಾ ಸುನಕ್ ಅವರ ಸೇವೆ ನೋಡಿಕೊಂಡು ನಾನು ಬೆಳೆದಿದ್ದೇನೆ ಎಂದು ರಿಷಿ ಸುನಕ್ ಅವರು ವೆಬ್‌ಸೈಟ್‌ ಒಂದರಲ್ಲಿ ಬರೆದುಕೊಂಡಿದ್ದಾರೆ.ರಿಷಿ ಸುನಕ್‌ ಅವರು ಬಿಡುವಿನ ವೇಳೆಯಲ್ಲಿ ದೈಹಿಕ ವ್ಯಾಯಾಮದ ಮೂಲಕ ಫಿಟ್ ಆಗಿರುವುದಕ್ಕೆ ಹೆಚ್ಚು ಆದ್ಯತೆ ನೀಡುವುದಲ್ಲದೆ , ಅವರಿಗೆ ಕ್ರಿಕೆಟ್, ಫುಟ್‌ಬಾಲ್ ಇಷ್ಟದ ಕ್ರೀಡೆಗಳಂತೆ.‌

Comments are closed.