Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಬೆಂಗಳೂರು: (Dhoni and Kohli ) ಕ್ರಿಕೆಟ್ ದುನಿಯಾದಲ್ಲೀಗ ವಿರಾಟ್ ಕೊಹ್ಲಿ (Virat Kohli) ಅವರದ್ದೇ ಸದ್ದು. ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ (T20 World Cup 2022) ಪಂದ್ಯದಲ್ಲಿ ಕಿಂಗ್ ಕೊಹ್ಲಿ(Dhoni and Kohli) ಆಡಿದ್ದ ಅತ್ಯಮೋಘ ಇನ್ನಿಂಗ್ಸ್’ಗೆ ಇಡೀ ಕ್ರಿಕೆಟ್ ಜಗತ್ತೇ ಬಹುಪರಾಕ್ ಹೇಳುತ್ತಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾನುವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ (India Vs Pakistan) ಹೈಪ್ರೆಶರ್ ಮ್ಯಾಚ್’ನಲ್ಲಿ 53 ಎಸೆತಗಳಲ್ಲಿ 82 ರನ್ ಸಿಡಿಸಿ ಅಬ್ಬರಿಸಿದ್ದ ಕೊಹ್ಲಿ, ಭಾರತಕ್ಕೆ 4 ವಿಕೆಟ್’ಗಳ ರೋಚಕ ಗೆಲುವು ತಂದುಕೊಟ್ಟಿದ್ದರು.
ಪಾಕ್ ವಿರುದ್ಧ ಕೊಹ್ಲಿ ಆಡಿದ ಅದ್ಭುತ ಇನ್ನಿಂಗ್ಸ್ ಬೆನ್ನಲ್ಲೇ ಐಸಿಸಿಗೆ ಕೊಹ್ಲಿ ನೀಡಿದ್ದ ಸಂದರ್ಶನವೊಂದು ವೈರಲ್ ಆಗಿದೆ. ಆ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ (T20 World Cup 2022)ನಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮಾಜಿ ನಾಯಕ ಎಂ.ಎಸ್ ಧೋನಿ (Dhoni and Kohli) ನೀಡಿದ ನೆರವನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Kohli reveals secret of success Vs Pak : ಪಾಕಿಸ್ತಾನ ವಿರುದ್ಧದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಸೀಕ್ರೆಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Vijaya Raghavendra : ‘ಮರೀಚಿ’ಯಾದ ಚಿನ್ನಾರಿ ಮುತ್ತ- ಸಿದ್ಧ್ರುವ್ ಚೊಚ್ಚಲ ಚಿತ್ರಕ್ಕೆ ಹೀರೋ ಆದ ವಿಜಯ ರಾಘವೇಂದ್ರ

“ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಧೋನಿ ಅವರು ನೀಡಿದ ಬೆಂಬಲ ನನ್ನನ್ನು ಇವತ್ತು ಇಲ್ಲಿವರೆಗೆ ತಂದು ನಿಲ್ಲಿಸಿದೆ. ಅವರು ನೀಡಿದ ಸಲಹೆಗಳು ನನ್ನನ್ನು ಒಬ್ಬ ಒಳ್ಳೆಯ ಕ್ರಿಕೆಟಿಗನನ್ನಾಗಿ ರೂಪಿಸಿವೆ. ಧೋನಿ ಅವರ ಜೊತೆ ನನ್ನ ಸ್ನೇಹ ಮತ್ತು ಸಂಬಂಧವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಯಾಕಂದ್ರೆ ಅದು ನಂಬಿಕೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಿಂದ ಬೆಸೆಯಲಾಗಿರುವ ಬಾಂಧವ್ಯ. ನಾವಿಬ್ಬರೂ ಜೊತೆಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಗ್ಯಾಪ್’ಗೆ ಹೋಯಿತು ಎಂದರೆ ಇಬ್ಬರೂ ಯಾವುದೇ ಸನ್ನೆಗಳನ್ನು ನೀಡದೆ 2 ರನ್ ಓಡುತ್ತಿದ್ದೆವು. ಧೋನಿ ಎರಡು ರನ್ ಓಡುತ್ತಾರೆ ಎಂಬುದು ನನಗೆ ಸದಾ ತಿಳಿದಿತ್ತು. 10-12 ವರ್ಷಗಳಲ್ಲಿ ನಮ್ಮ ಆ ನಂಬಿಕೆ ಕೈಕೊಟ್ಟದ್ದು ಕೇವಲ ಒಮ್ಮೆ ಅಥವಾ 2 ಬಾರಿ ಇರಬಹುದು ಅಷ್ಟೇ” ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ : Kantara breaks KGF record : ಕೆಜಿಎಫ್ ದಾಖಲೆ ಮುರಿದ ಕಾಂತಾರ: ಹೊಂಬಾಳೆ ಫಿಲ್ಮ್ಸ್ ನಿಂದ ಅಧಿಕೃತ ಮಾಹಿತಿ

ಇದನ್ನೂ ಓದಿ : Rishi Sunak UK PM : ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ

2011ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಪಂದ್ಯವೊಂದರ ಪ್ಲೇಯಿಂಗ್ XIನಿಂದ ಕೈಬಿಡುವ ಸನ್ನಿವೇಶ ಸೃಷ್ಠಿಯಾಗಿದ್ದಾಗ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ನಾಯಕ ಧೋನಿ, ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ. ಅದೇ ಟೆಸ್ಟ್ ಸರಣಿಯ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದರು.

Virat Kohli is the voice of the cricket world right now. The whole cricketing world is praising King Kohli’s brilliant innings in the T20 World Cup 2022 match against Pakistan.

Comments are closed.