ಇತ್ತೀಚಿಗೆ ಹೆಚ್ಚಿನ ಸಿನಿರಂಗದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನು ರೀ ರಿಲೀಸ್ ಮಾಡುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ನಟರ ಹುಟ್ಟುಹಬ್ಬದಂದು ಅಥವಾ ಸಿನಿಪ್ರೇಕ್ಷಷಕರ ಬೇಡಿಕೆಗೆ ಮೇರೆಗೆ ಹಿಟ್ ಸಿನಿಮಾಗಳನ್ನು ಪುನಃ ಸಿನಿಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದಾರೆ. ಆ ಸಾಲಿಗೆ ಇದೀಗ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie Re-release) ಸಿನಿಮಾವು ಸೇರಿಕೊಂಡಿದೆ.
ರಿ ರಿಲೀಸ್ ಟ್ರೆಂಡ್ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದಿನಿಂದಲೂ ಹಿಟ್ ಆದ ಚಿತ್ರಗಳನ್ನು ಮರು ಬಿಡುಗಡೆ ಮಾಡುವ ಅಭ್ಯಾಸ ಇದ್ದರೂ ಸಹ ಇತ್ತೀಚೆಗಿನ ದಿನಗಳಲ್ಲಿ ಈ ಹವ್ಯಾಸ ತುಸು ಜಾಸ್ತಿ ಎನ್ನಬಹುದು. ಇನ್ನು ಕಳೆದ ವರ್ಷ ತೆಲುಗಿನ ಸ್ಟಾರ್ ನಟ ಹುಟ್ಟುಹಬ್ಬಗಳ ಪ್ರಯುಕ್ತ ಹೆಚ್ಚಾದ ಈ ರಿ ರಿಲೀಸ್ ಹಾವಳಿ ದೊಡ್ಡ ಮಟ್ಟದ ಗಳಿಕೆ ಕಂಡ ನಂತರ ಇದೀಗ ಬಾಲಿವುಡ್‌ಗೂ ತಲುಪಿದೆ. ಹೌದು, ಬಾಲಿವುಡ್ ಸಿನಿರಂಗದ ಕಳೆದ ವರ್ಷದ ಬೆರಳೆಣಿಕೆ ಹಿಟ್‌ಗಳಲ್ಲಿ ಒಂದಾಗಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮರು ಬಿಡುಗಡೆಯಾಗಲು (The Kashmir Files Movie Re-release) ಸಜ್ಜಾಗಿದೆ.
ಭಾರೀ ಬೇಡಿಕೆ ಮೇರೆಗೆ ಜನರ ಅಚ್ಚುಮೆಚ್ಚಿನ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮರು ಬಿಡುಗಡೆ ಮಾಡಲಿದ್ದೇವೆ ಎಂದು ಸಿನಿತಂಡ ಪೋಸ್ಟರ್ ಹಂಚಿಕೊಂಡಿದೆ. ಈ ಸಿನಿಮಾ ನಾಳೆ ( ಜನವರಿ 19 ) ಹೆಚ್ಚಿನ ಸಿನಿಮಂದಿರಗಳಲ್ಲಿ ಪ್ರದರ್ಶನವನ್ನು ಕಾಣಲಿದೆ. ಇನ್ನು ಬೆಂಗಳೂರಿನಲ್ಲೂ ಸಹ ಸಿನಿಮಾ ಮರು ಬಿಡುಗಡೆಯಾಗುತ್ತಿದ್ದು, ಮೆಕ್ ಗ್ರಾ ರಸ್ತೆಯ ಗರುಡ ಮಾಲ್ ಐನಾಕ್ಸ್, ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಐನಾಕ್ಸ್ ಹಾಗೂ ರಾಯಲ್ ಮೀನಾಕ್ಷಿ ಮಾಲ್ ಸಿನಿಪೊಲಿಸ್ ಸಿನಿಮಂದಿರಗಳಲ್ಲಿ ತಲಾ ಒಂದೊಂದು ಪ್ರದರ್ಶನವನ್ನು ಕಾಣಲಿದೆ. ಇನ್ನು ಈ ಸಾಲಿಗೆ ಕನ್ನಡದ ಗಂಧದ ಗುಡಿ ಸಹ ಸೇರ್ಪಡೆಯಾಗಲಿದ್ದು, ಮಾರ್ಚ್ 17ರಂದು ಪುನೀತ್ ಹಬ್ಬದ ಪ್ರಯುಕ್ತ ಮರು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಅಭಿಮಾನಿ ನಿಧನ : ಸಂತಾಪ ಸೂಚಿಸಿದ ನಟ ದರ್ಶನ್
ಇದನ್ನೂ ಓದಿ : ನಟ ದರ್ಶನ್ ಹೇಳಿಕೆ ವಿಡಿಯೋವನ್ನು ಶೇರ್ ಮಾಡಿದ ಆಮ್ ಆದ್ಮಿ ಪಕ್ಷ
ಇದನ್ನೂ ಓದಿ : ಧ್ರುವ 369 ಚಿತ್ರೀಕರಣ ಶ್ರೀಘ್ರದಲ್ಲೇ ಮುಕ್ತಾಯ
ದಿ ಕಾಶ್ಮೀರ್ ಫೈಲ್ಸ್ 2022 ರಲ್ಲಿ ಬಿಡುಗಡೆಯಾದ ಈ ಬಾಲಿವುಡ್ ಸಿನಿಮಾವನ್ನು, ಝೀ ಸ್ಟುಡಿಯೋಸ್ ನಿರ್ಮಿಸಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಕಾಶ್ಮೀರಿ ಪಂಡಿತರ ಉಚ್ಚಾಟನೆಯೇ ಈ ಸಿನಿಮಾದ ಕಥಾಹಂದರವಾಗಿದೆ . ಇದರಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಷಿ ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ.
The Kashmir Files Movie Re-release : ‘The Kashmir Files’ movie will be released again