ರಸ್ತೆ ಅಪಘಾತದಲ್ಲಿ ಅಭಿಮಾನಿ ನಿಧನ : ಸಂತಾಪ ಸೂಚಿಸಿದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರೋಬ್ಬರಿ ಇಪ್ಪತ್ತೆರಡು ತಿಂಗಳುಗಳ ಬಳಿಕ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಗಣರಾಜ್ಯೋತ್ಸವದ ದಿನದಂದು ಕ್ರಾಂತಿ ಬಿಡುಗಡೆಯಾಗಲಿದ್ದು, ದರ್ಶನ್ ಅಭಿಮಾನಿಗಳು ಬಹಳ ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ. ಇದೇ ರೀತಿ ಕ್ರಾಂತಿ ಸಿನಿಮಾ ನೋಡಬೇಕು, ಕ್ರಾಂತಿ ಸಿನಿಮಾ ದಾಖಲೆಯನ್ನು ಮಾಡಬೇಕು ಎಂದು ಆಸೆಯನ್ನು ಇಟ್ಟುಕೊಂಡು ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಯೊಬ್ಬ ಮೃತಪಟ್ಟಿದ್ದು, (Actor Darshan Fan passes away) ದರ್ಶನ್ ಅಭಿಮಾನಿಗಳು ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹೌದು, ಅಭಿ ಎಂಬ ಅಪ್ಪಟ ದರ್ಶನ್ ಅಭಿಮಾನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಅಪಾರವಾದ ದರ್ಶನ್ ಅಭಿಮಾನಿಗಳು ಪೋಸ್ಟ್ ಹಂಚಿಕೊಂಡಿದ್ದು, ನಟ ದರ್ಶನ್ ಕೂಡ ಅಭಿ ಮರಣದ ಕುರಿತು ಟ್ವೀಟ್ ಮಾಡಿ ಸಂತಾಪ ಸೂಚಿಸುವುದರ ಜತೆಗೆ ಸಂದೇಶವೊಂದನ್ನು ಸಹ ರವಾನಿಸಿದ್ದಾರೆ. ಅಭಿಮಾನಿಯಾದ ಅಭಿ ಬಗ್ಗೆ ದರ್ಶನ್ ತಮ್ಮ ಟ್ವಟಿರ್‌ನಲ್ಲಿ “ಎಲ್ಲರಿಗೂ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ಅಭಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಧ್ರುವ 369 ಚಿತ್ರೀಕರಣ ಶ್ರೀಘ್ರದಲ್ಲೇ ಮುಕ್ತಾಯ

ಇದನ್ನೂ ಓದಿ : ನಟ ದರ್ಶನ್‌ ಹೇಳಿಕೆಯ ವಿಡಿಯೋವನ್ನು ಶೇರ್‌ ಮಾಡಿದ ಆಮ್ ಆದ್ಮಿ ಪಕ್ಷ

ಇದನ್ನೂ ಓದಿ : ನಟ ದರ್ಶನ್‌ ಜೊತೆ ನಟಿಸುವುದು ವಿಶೇಷ ಎಂದ ಬಹುಭಾಷಾ ನಟ ತರುಣ್‌ ರಾಜ್‌ ಅರೋರಾ

ಹೀಗೆ ಬೈಕ್ ಓಡಿಸುವಾಗ ಜಾಗರೂಕರಾಗಿರಿ ಎಂದು ದರ್ಶನ್ ಸಂದೇಶ ರವಾನಿಸಿದ್ದು, ಅವರ ಅಭಿಮಾನಿಗಳೂ ಸಹ ಇದಕ್ಕೆ ಸ್ಪಂದಿಸಿದ್ದು, ನೀವು ಹೇಳಿದ ಹಾಗೆ ನಿಧಾನವಾಗಿ ಗಾಡಿ ಓಡಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಇದೇ ಅಭಿ ಕ್ರಾಂತಿ ಸಿನಿಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಟ್ರೈಲರ್ ವೀಕ್ಷಿಸಿ ಟ್ರೈಲರ್ ತುಂಬಾ ಚೆನ್ನಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದ, ದರ್ಶನ್ ಅವರ ದೇವಸ್ಥಾನವನ್ನೂ ಸಹ ಕಟ್ಟಿಸುತ್ತೇವೆ ಎಂದಿದ್ದ, ಕ್ರಾಂತಿ ಬಿಡುಗಡೆ ದಿನ ಗಣರಾಜ್ಯೋತ್ಸವದ ಜತೆಗೆ ಕನ್ನಡ ರಾಜ್ಯೋತ್ಸವವನ್ನೂ ಸಹ ಮಾಡಲಿದ್ದೇವೆ ಎಂದು ಸಿನಿಮಾ ನೋಡುವುದಕ್ಕಾಗಿ ಕಾತರನಾಗಿರುವುದಾಗಿ ಹೇಳಿಕೊಂಡಿದ್ದಾನೆ. ಅಂದು ನೆಚ್ಚಿನ ನಟನ ಸಿನಿಮಾದ ಬಗ್ಗೆ ಇಷ್ಟೆಲ್ಲಾ ಆಸೆಯಿಂದ ಹೇಳಿಕೊಂಡಿದ್ದ ಅಭಿ ಈಗ ಇಹಲೋಕ ತ್ಯಜಿಸಿರುವುದು ಬೇರಸದ ಸಂಗತಿ ಆಗಿದೆ.

Actor Darshan Fan passes away in road accident: Actor Darshan expressed condolences

Comments are closed.