ಬಾಲಿವುಡ್ ಸೇರಿದಂತೆ ಭಾರತದ ಚಿತ್ರೋದ್ಯಮದಲ್ಲಿ ಸದ್ಯ ಸದ್ದು ಮಾಡ್ತಿರೋ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmiri Files). 20 ಬಂಡವಾಳ ಹೂಡಿ 120 ಕೋಟಿಗೂ ಅಧಿಕ ಗಳಿಸಿದ ಈ ಸಿನಿಮಾ ದೇಶದಲ್ಲಿ ಸಂಚಲನ ಮೂಡಿಸಿದೆ. 1990 ರ ದಶಕದಲ್ಲಿ ಕಾಶ್ಮೀರಿಗಳ ಹತ್ಯಾಕಾಂಡದ ಕತೆಯೇಂದೇ ಬಣ್ಣಿಸಲ್ಪಟ್ಟ ಈ ಕತೆಗೆ ಆಕ್ಷ್ಯನ್ ಕಟ್ ಹೇಳಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಈಗ ಮತ್ತೊಂದು ರಿಯಲ್ ಕತೆ ಟೈಗರ್ ನಾಗೇಶ್ವರ್ ರಾವ್ (Tiger Nageshwar Rao) ಜೊತೆಗೆ ತೆರೆಗೆ ಬರಲು ಸಿದ್ಧವಾಗುತ್ತಿದ್ದಾರೆ.

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾರ್ಚ್ 11 ರಂದು ತೆರೆ ಕಂಡಿತ್ತು. ಆದರೆ ತೆರೆಕಂಡ ಎರಡು ದಿನಗಳ ಕಾಲ ಸಿನಿಮಾ ಅಂತಹ ಸದ್ದುಮಾಡಿರಲಿಲ್ಲ. ಆದರೆ ಈಗ ಸಿನಿಮಾ ಹೊಸ ಅಲೆಯನ್ನೇ ಸೃಷ್ಟಿಸಿದೆ. ಪಕ್ಷಗಳ ನಡುವೆ ಹಂಚಿಹೋಗಿರುವ ಈ ಸಿನಿಮಾವನ್ನು ಬಿಜೆಪಿ ತನ್ನ ಅಜೆಂಡಾದಂತೆ ಬಳಸಲು ಸಿದ್ಧವಾಗಿದ್ದು, ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲಿ ಸಿನಿಮಾಗೆ ತೆರಿಗೆ ವಿನಾಯ್ತಿ ಸಹ ಘೋಷಿಸಿದೆ.
ಈ ಗೆಲುವಿನ ಖುಷಿಯೊಂದಿಗೆ ನಿರ್ದೇಶಕ ಅಗ್ನಿಹೋತ್ರಿ ಮತ್ತೊಂದು ರಿಯಲಿಸ್ಟಿಕ್ ಕತೆ ಹೇಳಲು ಸಜ್ಜಾಗಿದ್ದಾರೆ. ದಿ ಕಾಶ್ಮೀರಿ ಫೈಲ್ಸ್ ನಿರ್ಮಾಣಮಾಡಿದ್ದ ಅಭಿಷೇಕ್ ಅರ್ಗವಾಲ್ ಇದಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ ರಿಯಲ್ ಕತೆಯನ್ನು ಹೊಂದಿದ್ದರೂ ಅದನ್ನು ಮತ್ತಷ್ಟು ವಿಭಿನ್ನತೆಗಳೊಂದಿಗೆ ತೆರೆಗೆ ತರಲು ಅಗ್ನಿಹೋತ್ರಿ ಸಿದ್ದವಾಗಿದ್ದಾರಂತೆ.
ಟೈಗರ್ ನಾಗೇಶ್ವರ್ ರಾವ್ ಎಂಬ ಫೇಮಸ್ ಕಳ್ಳನ ಸತ್ಯ ಕತೆಯನ್ನು ತೆರೆಗೆ ತರಲು ಹೊರಟಿದ್ದಾರಂತೆ ಅಗ್ನಿಹೋತ್ರಿ, ಟೈಗರ್ ನಾಗೇಶ್ವರ್ ರಾವ್ ಒಬ್ಬ ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳ. ೧೯೭೦ ರ ದಶಕದ ಈ ಕಳ್ಳನ ಸ್ಟೋರಿಯೇ ಕತೆಯ ಜೀವಾಳ. ಆತನ ಬುದ್ಧಿವಂತಿಕೆ ಹೇಗಿತ್ತು ಬದುಕು ಹೇಗಿತ್ತು ಅನ್ನೋದನ್ನು ತೆರೆಗೆ ತರ್ತಿದ್ದಾರಂತೆ ವಿವೇಕ್ ಅಗ್ನಿಹೋತ್ರಿ.
Congratulations @AbhishekOfficl & @AAArtsOfficial on the grand launch of #TigerNageswaraRao
— Vivek Ranjan Agnihotri (@vivekagnihotri) April 3, 2022
You are a tiger producer. Best. Love. Always. pic.twitter.com/vO6EETGoME
ಇದನ್ನೂ ಓದಿ : ನಾನು ನಿಮಗಾಗಿ ಬೆತ್ತಲಾಗ್ತೇನೆ : ಅಭಿಮಾನಿಗಳಿಗೆ ಬಾಲಿವುಡ್ ನಟಿ ಪೂನಂ ಪಾಂಡೆ ಆಫರ್
ತೆಲುಗಿನ ಮಾಸ್ ನಟ ಮಹಾರಾಜ ರವಿತೇಜ್ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಲಿದ್ದಾರೆ. ಅಗ್ನಿಹೋತ್ರಿ ಅವರ ಸಿನಿಮಾಗಾಗಿ ರವಿತೇಜ ತಮ್ಮ ಸಂಪೂರ್ಣ ಗೆಟ್ಅಪ್ ಬದಲಾಯಿಸಿ ಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ನಟ ರವಿತೇಜ್ ಗೆ ನಟಿ ಕೃತಿ ಸನೂನ್ ಸಹೋದರಿ ನೂಪುರಸನೂನ್ ನಾಯಕಿಯಾಗಲಿದ್ದಾರಂತೆ. ಇನ್ನು ಈ ಕಳ್ಳನ ಕತೆಗೆ ಟೈಗರ್ ನಾಗೇಶ್ವರ್ ರಾವ್ ಎಂದೇ ಹೆಸರಿಡಲಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಕನ್ನಡ ಹಿಂದಿ ತೆಲುಗು ತಮಿಳು ಕನ್ನಡದಲ್ಲಿ ಈ ಸಿನಿಮಾ ಮೂಡಿಬರಲಿದೆ.
ಇದನ್ನೂ ಓದಿ : Sai Pallavi : ನಟನೆ ಬಿಟ್ಟು ಕೃಷಿಗೆ ಇಳಿದ ಸ್ಟಾರ್ ನಟಿ ಸಾಯಿಪಲ್ಲವಿ
Tiger Nageshwar Rao after The Kashmiri Files, Vivek Agnihotri new movie