Glenn Maxwell : RCB ಪಾಳಯ ಸೇರಿಕೊಂಡ ವಿಶ್ವ ಶ್ರೇಷ್ಟ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌

ರಾಯಲ್‌ ಜಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ದದ ಮೊದಲ ಪಂದ್ಯವನ್ನು ಸೋತಿರುವ ಬೆಂಗಳೂರು ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ವಿರುದ್ದದ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಗೆಲುವಿನ ಅಭಿಯಾನ ಆರಂಭಿಸಿದೆ. ಇದೀಗ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಇನ್ನೊಂದು ಗುಡ್‌ನ್ಯೂಸ್‌ ಇದೆ. ವಿಶ್ವದ ಖ್ಯಾತ ಆಲ್‌ರೌಂಡರ್‌, ಸ್ಪೋಟಕ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಇದೀಗ ಆರ್‌ಸಿಬಿ ಪಾಳಯ ಸೇರಿಕೊಂಡಿದ್ದಾರೆ.

World top big hitter Glenn Maxwell enter RCB for IPL 2022

ಈಗಾಗಲೇ ಆರ್‌ಸಿಬಿ ಕ್ಯಾಂಪ್‌ ಸೇರಿಕೊಂಡಿರುವ ಮ್ಯಾಕ್ಸ್‌ವೆಲ್‌ ಮೂರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಉಳಿಯಬೇಕಾಗಿದೆ. ಹೀಗಾಗಿ ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಯ ಮುಂದಿನ IPL 2022 ಪಂದ್ಯಕ್ಕೆ ಸ್ಟಾರ್ ಆಟಗಾರ ಲಭ್ಯವಾಗುವ ಸಾಧ್ಯತೆಯಿದೆ. ಮ್ಯಾಕ್ಸ್‌ವೆಲ್ ಪ್ರಸ್ತುತ ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಿರುವ ಆಸ್ಟ್ರೇಲಿಯಾದ ಹಿರಿಯ ರಾಷ್ಟ್ರೀಯ ತಂಡದ ಭಾಗವಾಗದಿದ್ದರೂ ಆರ್‌ಸಿಬಿ ಗಾಗಿ IPL 2022 ರ ಋತುವಿನ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡರು.

World top big hitter Glenn Maxwell enter RCB for IPL 2022
ಆರ್‌ಸಿಬಿ ತಂಡ ಚಿತ್ರ ಕೃಪೆ : ಬಿಸಿಸಿಐ

ಮ್ಯಾಕ್ಸ್‌ವೆಲ್ ಈ ವಾರದ ಆರಂಭದಲ್ಲಿ ಚೆನ್ನೈನಲ್ಲಿ ದೀರ್ಘ ಕಾಲದ ಗೆಳತಿ ವಿನಿ ರಾಮನ್ ಅವರೊಂದಿಗೆ ಭಾರತೀಯ ಸಾಂಪ್ರದಾಯಿಕ ವಿವಾಹವಾಗಿದ್ದಾರೆ. ಮ್ಯಾಕ್ಸ್‌ವೆಲ್ 3 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅಲ್ಲದೇ ಮುಂಬೈನಲ್ಲಿ RCB ಬಯೋ ಬಬಲ್‌ಗೆ ಸೇರುವ ಮೊದಲು 4 ನೇ ದಿನದಂದು ಋಣಾತ್ಮಕ RT-PCR ಪರೀಕ್ಷೆ ಒಳಪಡಬೇಕಾಗಿದೆ. ಆರ್‌ಸಿಬಿ ಮ್ಯಾಕ್ಸ್‌ವೆಲ್‌ ಆಗಮನದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

World top big hitter Glenn Maxwell enter RCB for IPL 2022
ವಿರಾಟ್‌ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್ ವೆಲ್‌ ಚಿತ್ರ : ಬಿಸಿಸಿಐ

ಗ್ಲೆನ್ ಮ್ಯಾಕ್ಸ್‌ವೆಲ್ ಈಗಾಗಲೇ ಆರ್‌ಸಿಬಿ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಲ್ಲಿ, RCB ತನ್ನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತು ಆದರೆ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಕಂಡಿದೆ. ಫಾಫ್ ಡು ಪ್ಲೆಸಿಸ್ (ನಾಯಕ), ವನಿಂದು ಹಸರಂಗ, ಡೇವಿಡ್ ವಿಲ್ಲಿ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಸೇರಿದಂತೆ ಒಟ್ಟು ವಿದೇಶಿ ಆಟಗಾರರು ಆರ್‌ಸಿಬಿ ತಂಡದಲ್ಲಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಆಗಮನದ ಹಿನ್ನೆಲೆಯಲ್ಲಿ ಓರ್ವ ಆಟಗಾರ ತನ್ನ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ.

World top big hitter Glenn Maxwell enter RCB for IPL 2022

ಹೊಸ ನಾಯಕನೊಂದಿಗೆ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕಪ್‌ ಗೆಲ್ಲುವ ನಿರೀಕ್ಷೆಯನ್ನು ಹುಟ್ಟಿಸಿದೆ. ಈಗಾಗಲೇ ವಿರಾಟ್‌ ಕೊಹ್ಲಿ, ಡುಪ್ಲೆಸಿಸ್‌, ದಿನೇಶ್‌ ಕಾರ್ತಿಕ್‌, ವನಿಂದು ಹಸರಂಗ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಸೇರ್ಪಡೆಯಿಂದ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪಡೆ ಇನ್ನಷ್ಟು ಬಲಿಷ್ಠ ವಾದಂತಾಗಿದೆ.

ಇದನ್ನೂ ಓದಿ : ಕೆಕೆಆರ್ ತಂಡಕ್ಕೆ ಆಘಾತ, ಖ್ಯಾತ ಆಲ್‌ರೌಂಡರ್‌ ಆಂಡ್ರೆ ರೆಸೆಲ್‌ಗೆ ಗಾಯ

ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸೋಲು : ಎಂಎಸ್ ಧೋನಿಯನ್ನು ಟೀಕಿಸಿದ ಅಜಯ್ ಜಡೇಜಾ

(World top big hitter Glenn Maxwell enter RCB for IPL 2022 )

Comments are closed.