totapuri : ನವರಸ ನಾಯಕ ಜಗ್ಗೇಶ್ ಹಾಗೂ ಮಠ ವಿಜಯ್ ಪ್ರಸಾದ್ ಕಾಂಬಿನೇಷನ್ನ ಸಿನಿಮಾಗಳು ಅಂದರೆ ಅದಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಮಠ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದಾದ ಬಳಿಕ ತೋತಾಪುರಿ ಸಿನಿಮಾದಲ್ಲಿ ಈ ಜೋಡಿ ಮತ್ತೆ ಒಂದಾಗಿತ್ತು. ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹಾಗೂ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾದ ರಿಲೀಸ್ ಡೇಟ್ ಇದೀಗ ಹೊರ ಬಿದ್ದಿದೆ.
ತೋತಾಪುರಿ ಸಿನಿಮಾದ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ನಟಿ ಅದಿತಿ ಪ್ರಭುದೇವ ಹಾಗೂ ನಟ ಜಗ್ಗೇಶ್ ಕಾಣಿಸಿಕೊಂಡಿದ್ದ ಈ ಸಿನಿಮಾದ ಹಾಡು ಬಾಗ್ಲು ತೆರಿ ಮೇರಿ ಜಾನ್ ಹಾಡಂತೂ ಪಡ್ಡೆ ಹುಡುಗರ ಹಾಟ್ ಫೇವರಿಟ್ ಎನಿಸಿತ್ತು. ಸಿನಿಮಾದ ಹಾಡು, ಟೀಸರ್ ಹಾಗೂ ಟ್ರೈಲರ್ಗಳ ಮೂಲಕವೇ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ದಸರಾ ಹಬ್ಬದಂದು ರಿಲೀಸ್ ಆಗಲಿದೆ. ಈ ಮೂಲಕ ದಸರಾ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡೋಕೆ ಜಗ್ಗೇಶ್ & ಟೀಂ ಬೆಳ್ಳಿ ತೆರೆ ಮೇಲೆ ಕಮಾಲ್ ಮಾಡಲಿದ್ದಾರೆ ಎನ್ನಲಾಗಿದೆ.
#ತೋತಾಪುರಿ ದಸರಹಬ್ಬಕ್ಕೆ ನಿಮ್ಮ ಮುಂದೆ🙏 pic.twitter.com/9Z55A7c3GA
— ನವರಸನಾಯಕ ಜಗ್ಗೇಶ್ (@Jaggesh2) July 1, 2022
ಸೆಪ್ಟೆಂಬರ್ 30ರಂದು ಈ ಸಿನಿಮಾ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ನಟ ಜಗ್ಗೇಶ್, ಅದಿತಿ ಪ್ರಭುದೇವ, ಸುಮನಾ ರಂಗನಾಥ್, ಡಾಲಿ ಧನಂಜಯ್, ದತ್ತಣ್ಣ ಸೇರಿದಂತೆ ಪ್ರಮುಖ ತಾರಾಗಣ ಈ ಸಿನಿಮಾದಲ್ಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಧ್ಯ ಸಾಲು ಸಾಲು ಹಿಟ್ ಸಿನಿಮಾಗಳೇ ಬರ್ತಿರೋದ್ರಿಂದ ಈ ವರ್ಷ ರಿಲೀಸ್ ಆಗುತ್ತಿರುವ ಎಲ್ಲಾ ಸಿನಿಮಾಗಳ ಮೇಲೂ ಸಿನಿ ರಸಿಕರಿಗೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.
ಜಗ್ಗೇಶ್ರ ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್ಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಕರೆಕ್ಟ್ ಟೈಮ್ಗೆ ಸೂಕ್ತ ಡೈಲಾಗ್ ಡೆಲಿವರಿ ಮೂಲಕ ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ಕಚಗುಳಿಯನ್ನು ಇಡುತ್ತಾರೆ. ತೋತಾಪುರಿ ಸಿನಿಮಾದ ಬಳಿಕ ವಿಜಯ್ ಕಿರಂಗದೂರು ಬಂಡವಾಳ ಹೂಡಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕೂಡ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿಯೇ ನಿರ್ಮಾಣವಾಗ್ತಿದೆ. ಜಗ್ಗೇಶ್ರ ತೋತಾಪುರಿ ಸಿನಿಮಾ ಕೂಡ ಸ್ಯಾಂಡಲ್ವುಡ್ನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಲಿ ಎನ್ನುವುದೇ ಸಿನಿ ರಸಿಕರ ಆಶಯ .
ಇದನ್ನು ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ
ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !
totapuri is coming for dussehra