ಬುಧವಾರ, ಮೇ 14, 2025
HomeCinemaMandya Ravi passes away : ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ವಿಧಿವಶ

Mandya Ravi passes away : ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ವಿಧಿವಶ

- Advertisement -

ಮಂಡ್ಯ/ ಬೆಂಗಳೂರು : Mandya Ravi passes away : ಕನ್ನಡ ಕಿರುತೆರೆಯಲ್ಲಿ ಭಾರೀ ಹೆಸರನ್ನು ಗಳಿಸಿದ್ದ ಮನೋಜ್ಞ ಕಲಾವಿದ ಮಂಡ್ಯ ರವಿ ಬಾರದ ಲೋಕಕ್ಕೆ ತೆರಳಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಂಡ್ಯ ರವಿಗೆ 42 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಮಂಡ್ಯ ರವಿಯನ್ನು ದಾಖಲಿಸಲಾಗಿತ್ತು. ವೈದ್ಯರು ಆಸ್ಪತ್ರೆಯಿಂದ ಮಂಡ್ಯಕ್ಕೆ ಕರೆದೊಯ್ಯುವಂತೆ ಹೇಳಿದ್ದರು ಎನ್ನಲಾಗಿದೆ.

ಮಂಡ್ಯ ರವಿ ನಿಧನದ ಬಗ್ಗೆ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್​ ಸೀತಾರಾಮ್​ ಫೇಸ್​ಬುಕ್​ ಪೋಸ್ಟ್​ ಮೂಲಕ ಮಾಹಿತಿ ನೀಡಿದ್ದಾರೆ. ಮಗಳು ಜಾನಕಿಯ ಚಂದು ಭಾರ್ಗಿ ರವಿ ಅಸ್ತಂಗತ, ಇನ್ನೂ 42, ಜನ್ಮಕ್ಕಾಗುವಷ್ಟು ಪ್ರತಿಭೆ,, ಅತ್ಯಂತ ಆಘಾತಕಾರಿ ಎಂದು ಟಿ.ಎನ್​ ಸೀತಾರಾಮ್​ ಬರೆದುಕೊಂಡಿದ್ದಾರೆ.


ರವಿ ಪ್ರಸಾದ್​ ಎಂ, ಕಿರುತೆರೆಯ ಪಾಲಿಗೆ ಮಂಡ್ಯ ರವಿ ಎಂದೇ ಚಿರಪರಿಚಿತರಾಗಿದ್ದವರು. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮೀ ಸ್ಟೋರ್ಸ್, ಮಗಳು ಜಾನಕಿ ಹಾಗೂ ನಮ್ಮನೆ ಯುವರಾಣಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಮಂಡ್ಯ ರವಿ ನಟಿಸಿದ್ದರು. ಕಾಫಿತೋಟ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ಮಂಡ್ಯ ರವಿ ಅಭಿನಯಿಸಿದ್ದರು.

ರಂಗಭೂಮಿಯ ಜೊತೆಯಲ್ಲಿ ನಂಟನ್ನು ಹೊಂದಿದ್ದ ಮಂಡ್ಯ ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸಿದ್ದರು. ಇಂಗ್ಲೀಷ್​ ಭಾಷೆಯಲ್ಲಿ ಮಾಸ್ಟರ್ಸ್ ಹಾಗೂ ಎಲ್​ಎಲ್​ಬಿ ವ್ಯಾಸಂಗ ಮಾಡಿರುವ ರವಿಪ್ರಸಾದ್​ ಆಯ್ಕೆ ಮಾಡಿಕೊಂಡಿದ್ದು ಬಣ್ಣದ ಬದುಕನ್ನು. ಮೊಟ್ಟ ಮೊದಲ ಬಾರಿಗೆ ಟಿ.ಎಸ್​ ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಮಹಾಮಾಯಿ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸುವ ಮೂಲಕ ರವಿ ಕಿರುತೆರೆಗೆ ಕಾಲಿಟ್ಟಿದ್ದರು.

ರವಿಗೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ತಂದುಕೊಟ್ಟ ಧಾರವಾಹಿ ಮಿಂಚು. ಇದಾದ ಬಳಿಕ ಮುಕ್ತ ಮುಕ್ತ ಹಾಗೂ ಕೆಲವೇ ವರ್ಷಗಳ ಹಿಂದೆ ಪ್ರಸಾರ ಕಾಣುತ್ತಿದ್ದ ಟಿ. ಎಸ್​ ಸೀತಾರಾಮ್​ ನಿರ್ದೇಶನದ ಮಗಳು ಜಾನಕಿ ಚಂದು ಭಾರ್ಗಿ ಪಾತ್ರ ಕೂಡ ರವಿಗೆ ಅಪಾರ ಅಭಿಮಾನಿಗಳನ್ನು ಹುಟ್ಟು ಹಾಕಿತ್ತು. ಪ್ರಸ್ತುತ ತೆರೆ ಕಾಣುತ್ತಿರುವ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ನೆಗಟಿವ್​ ಪಾತ್ರದಲ್ಲಿ ನಟಿಸುತ್ತಿದ್ದ ರವಿ ಸದ್ಯ ಈ ಶೂಟಿಂಗ್​ನಲ್ಲಿ ಭಾಗಿಯಾಗಿರಲಿಲ್ಲ. ಮಂಡ್ಯ ರವಿ ಅಂತ್ಯಕ್ರಿಯೆ ಬಗ್ಗೆ ಕುಟುಂಬಸ್ಥರು ಇನ್ನಷ್ಟೇ ಮಾಹಿತಿಯನ್ನು ನೀಡಬೇಕಿದೆ. ಅತ್ಯಂತ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡ ಕನ್ನಡ ಕಿರುತೆರೆ ಲೋಕದಲ್ಲಿಂದು ಸ್ಮಶಾನ ಮೌನ ಆವರಿಸಿದೆ.

ಇದನ್ನು ಓದಿ : TV artist Mandya Ravi :ಕಿರುತೆರೆ ಕಲಾವಿದ ಮಂಡ್ಯ ರವಿ ಸಾವು ವದಂತಿ ಬಗ್ಗೆ ತಂದೆಯಿಂದ ಸ್ಪಷ್ಟನೆ

ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

TV artist Mandya Ravi passes away

RELATED ARTICLES

Most Popular