attacked for dancing to DJ :ಡಿ.ಜೆ ಹಾಕಿ‌ ಕುಣಿದಿದ್ದಕ್ಕೆ ಕೈ ಕಾಲು ಕಟ್ಟಿ ಯುವಕರ ತಂಡದ ಮೇಲೆ ಹಲ್ಲೆ

ಮಂಡ್ಯ : attacked for dancing to DJ : ಇತ್ತಿಚೇಗಷ್ಟೆ ವಿಘ್ನವಿನಾಶಕ ಗಣೇಶನ ಚತುರ್ಥಿಯನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಆದ್ರೆ ಇದೇ ಸಂಭ್ರಮದಲ್ಲಿ ಯುವಕರ ಕೈಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಾರದ ಬಳಿಕ‌‌ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಪಿ.ಬಿ ಮಂಚನಹಳ್ಳಿ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಣಪತಿ ಮೆರವಣಿಗೆ ಗಲಾಟೆಯ ಸೇಡಿಗೆ ಯುವಕರ ಮೇಲೆ ಹಲ್ಲೆ ನಡೆಸಿ ರೈತಸಂಘದ ನಾಗೇಗೌಡ ಸಹಚರರು ದರ್ಪ ಮೆರೆದಿದ್ದಾರೆ.

ಪಿ.ಬಿ ಮಂಚನಹಳ್ಳಿ ಗ್ರಾಮದಲ್ಲಿ ಯುವಕರು ಗಣಪತಿ ಮೆರವಣಿಗೆ ವೇಳೆಯಲ್ಲಿ ಡಿ.ಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದರು. ಆದ್ರೆ ಈ ರೀತಿ ಡಿ.ಜೆ ಹಾಕಿಕೊಂಡು ಡ್ಯಾನ್ಸ್ ಮಾಡೋದನ್ನ ನಾಗೇಗೌಡ ವಿರೋಧಿಸಿದ್ದ‌. ನಾಗೇಗೌಡ ಸೇರಿದಂತೆ ಆತನ ಸಹಚರರು ಈ ಬಗ್ಗೆ ಕ್ಯಾತೆ ತೆಗೆದು ಯುವಕರ ಜೊತೆ ಗಲಾಟೆ ನಡೆಸಿದ್ದರು. ಈ ಜಗಳದ ಬಳಿಕ ಇದೇ ವಿಚಾರದಲ್ಲಿ ಮಾತನಾಡೋಕೆಂದು ಯುವಕರನ್ನ ನಾಗೇಗೌಡ ತನ್ನ ಮನೆಗೆ ಕರೆಸಿಕೊಂಡಿದ್ದ.

ಮುತ್ತುರಾಜ್, ವಿನಯ್, ದರ್ಶನ್, ದೊರೆ, ಧರ್ಮರಾಜ್, ಅಮಿತ್‌ ಎಂಬ ಯುವಕರನ್ನು ಮನೆಗೆ ಕರೆಸಿದ ನಾಗೇಗೌಡ, ಮಾತುಕತೆ ನೆಪದಲ್ಲಿ ಯುವಕರ ಮೇಲೆ ದರ್ಪ ಮೆರೆದಿದ್ದಾನೆ. ಯುವಕರ ಕೈಕಾಲು ಕಟ್ಟಿ ನಾಗೇಗೌಡ ಹಾಗೂ ಸಹಚರರು ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಆದ್ರೆ ಇದಾದ ಬಳಿಕ ನಾಗೇಗೌಡನೇ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಯುವಕರ ವಿರುದ್ಧ ದೂರು ನೀಡಿದ್ದಾನೆ. ಪೊಲೀಸರ ಮುಂದೆ ಯುವಕರ ವಿರುದ್ಧ
ಕಳ್ಳತನದ ಆರೋಪ ಮಾಡಿ ನಾಗೇಗೌಡ ದೂರು ನೀಡಿದ್ದ. ಆದ್ರೆ ದೂರು ನೀಡಿದ ಬಳಿಕ ಯುವಕರ ಮೇಲೆ ಹಲ್ಲೆ ನಡೆಸಿರೊ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಈ ವಿಡಿಯೋ ಸಿಗುತ್ತಿದ್ದಂತೆ ನಾಗೇಗೌಡ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿನಾಗೇಗೌಡ ಹಾಗೂ ಸಹಚರರನ್ನು ಕೆ.ಆರ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಊರಲ್ಲಿ ತಾನು ನಡೆಸಿದ್ದೆ ಆಟ ಎಂದು ಪುಂಡಾಟ ಮೆರೆಯಲು ಹೋಗಿ ನಾಗೇಗೌಡ ಸೇರಿದಂತೆ ಸಹಚರರು ಇದೀಗ ಅಂದರ್ ಆಗಿದ್ದಾರೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನು ಓದಿ : Mandya Ravi passes away :ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ವಿಧಿವಶ

ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

A group of youths were tied up and attacked for dancing to DJ hockey

Comments are closed.