KS Eshwarappa :‘ಜೋರಾಗಿ ವಾಗ್ದಾಳಿ ಮಾಡಿದಾಕ್ಷಣ ಜನತೆ ಸಿದ್ದರಾಮಯ್ಯನನ್ನು ನಂಬೋದಿಲ್ಲ ’ :ಈಶ್ವರಪ್ಪ ಗುಡುಗು

ಶಿವಮೊಗ್ಗ : KS Eshwarappa : ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗುಡುಗಿದ್ದಾರೆ. ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡ್ತಿದ್ದಾರೆ ಅಂತಾ ರಾಜ್ಯದ ಜನತೆಗೆ ಎನಿಸುತ್ತಿಲ್ಲ. ಗಂಟಲಿನಿಂದ ಜೋರಾಗಿ ವಾಗ್ದಾಳಿ ನಡೆಸಿದಾಕ್ಷಣ ಅದನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.


ಕಾಂಗ್ರೆಸ್​ ಮುಂಚೆಯಿಂದಲೂ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಬಿಚ್ಚಿಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ದಾಖಲೆಯನ್ನು ಕೊಟ್ಟಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ಸಿಗರು ಈ ಕೆಲಸ ಮಾಡಿಲ್ಲ. 40 ಪರ್ಸೆಂಟ್​ ಸರ್ಕಾರ ಎಂದು ಕೆಂಪಣ್ಣ ಆರೋಪ ಮಾಡಿದ್ದರು. ಒಂದು ಇಲಾಖೆ, ಒಂದು ಮಂತ್ರಿಯ ಬಗ್ಗೆ ಒಂದೇ ಒಂದು ದಾಖಲೆಯನ್ನು ಸಹ ಕೊಡಲಿಲ್ಲ. ಸುಮ್ಮನೇ ಬೊಂಬಡ ಹೊಡೆದರೆ ಅದಕ್ಕೆ ಯಾವುದೇ ಅರ್ಥ ಇರೋದಿಲ್ಲ. ಕೆಂಪಣ್ಣ ಕಾಂಗ್ರೆಸ್​ನ ಏಜೆಂಟ್​ ಎಂಬ ಭಾವನೆ ರಾಜ್ಯದ ಜನತೆಗೆ ಮೂಡಿದೆ ಎಂದು ಈಶ್ವರಪ್ಪ ಗುಡುಗಿದ್ದಾರೆ.


ಇನ್ನು ಸದನಕ್ಕೆ ಈಶ್ವರಪ್ಪ ಗೈರಾಗಿರುವ ವಿಚಾರವಾಗಿಯೂ ಇದೇ ವೇಳೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ, ನನಗೆ ಕಾಲು ನೋವಿನಿಂದಾಗಿ ಅಧಿವೇಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಷಟಲ್​ ಆಡುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಸ್ವಲ್ಪ ಗಾಯವಾಗಿದೆ. ನನಗೆ ಹೆಚ್ಚಾಗಿ ಓಡಾಡಲು ಆಗೋದಿಲ್ಲ. ಇದೊಂದೆ ಕಾರಣದಿಂದಾಗಿ ನಾನು ಸದನಕ್ಕೆ ಹೋಗಿಲ್ಲ ಅಷ್ಟೇ . ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶ ಇದರ ಹಿಂದಿಲ್ಲ. ನೀವು ಹುಡುಕಿದರೂ ಸಿಗೋದಿಲ್ಲ ಎಂದು ಹೇಳಿದರು.


ಬೋಟ್​ನಲ್ಲಿ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದ ವಿಚಾರವಾಗಿಯೂ ಮಾತನಾಡಿದ ಅವರು, ಸಿದ್ದರಾಮಯ್ಯ ಬೋಟ್​ನಲ್ಲಿ ಹೋಗಿದ್ದನ್ನು ನಾನೂ ನೋಡಿದೆ. ಅಲ್ಲಿ ಎಷ್ಟು ಅಡಿ ನೀರಿತ್ತು..? ಒಂದೂವರೆ ಅಡಿ ನೀರಿತ್ತು. ಆ ನೀರಲ್ಲಿ ನನ್ನ ಮೊಮ್ಮಗ ನಡೆದುಕೊಂಡು ಹೋಗಿ ಬಿಡ್ತಾನೆ. ವಿಪಕ್ಷ ನಾಯಕನಾಗಿ ನಾನು ನೆರೆ ವೀಕ್ಷಣೆ ಮಾಡಿದೆ ಎಂಬುದನ್ನು ತೋರಿಸಲು ಈ ನಾಟಕ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನು ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

ಇದನ್ನೂ ಓದಿ : TV artist Mandya Ravi :ಕಿರುತೆರೆ ಕಲಾವಿದ ಮಂಡ್ಯ ರವಿ ಸಾವು ವದಂತಿ ಬಗ್ಗೆ ತಂದೆಯಿಂದ ಸ್ಪಷ್ಟನೆ

Former minister KS Eshwarappa outraged against Siddaramaiah

Comments are closed.