ಟ್ವಿಟರ್‌ ಬ್ಲೂ ಟಿಕ್‌ ಕಳೆದು ಕೊಳ್ತಾರಾ ಕೆಜಿಎಫ್‌ ಸ್ಟಾರ್‌ ಯಶ್‌ ?

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಸಿನಿಮಾ ರಂಗದ ದಿಗ್ಗಜರಿಗೆ ಟ್ವೀಟರ್‌ ಬ್ಲೂಟಿಕ್‌ ನೀಡುವ ಮೂಲಕ ಖಾತೆಯನ್ನು ಅಧಿಕೃತಗೊಳಿಸುವ ಜೊತೆಗೆ ಗೌರವ ನೀಡುತ್ತಿತ್ತು. ಆದ್ರೀಗ ಬ್ಲೂಟಿಕ್‌ ಪಡೆಯಬೇಕಾದ್ರೆ (Twitter Blue Tick chargers) ಹಣ ಪಾವತಿ ಮಾಡುವಂತೆ ಟ್ವೀಟರ್‌ ಘೋಷಿಸಿದ್ದು, ಹಲವರು ಸಿನಿಮಾ ತಾರೆಯರು ಬ್ಲೂಟಿಕ್‌ ಕಳೆದುಕೊಂಡಿದ್ದಾರೆ. ಇದೀಗ ಕೆಜಿಎಫ್‌ ಸ್ಟಾರ್‌ ಯಶ್‌ ಕೂಡ ಬ್ಲೂಟಿಕ್‌ ಕಳೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಬ್ಯಾಲೆನ್ಸ್‌ ಪಾವತಿಸುವಂತೆ ಟ್ವೀಟರ್‌ ಸೂಚಿಸಿದ್ದು, ಹಣ ಪಾವತಿ ಮಾಡದೇ ಇದ್ರೆ ಯಶ್‌ ಬ್ಲೂಟಿಕ್‌ ಕಳೆದುಕೊಳ್ಳಲಿದ್ದಾರೆ.

ಟ್ವಿಟರ್ ಸಂಸ್ಥೆಯು ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂ ಟಿಕ್‌ ನ್ನು ತೆಗೆದುಹಾಕಿದೆ. ಈ ಹಿಂದೆಯೇ ಸಂಸ್ಥೆಯು ಚೆಕ್ ಮಾರ್ಕ್ ಕುರಿತು ಪ್ರಕಟಣೆಯನ್ನು ನೀಡಿದೆ. ಈ ಹಿಂದೆ ಅನೇಕ ಬಾರೀ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ಮೊದಲಿನಂತೆಯೇ ಉಳಿಯುತ್ತದೆ ಎನ್ನುವಮಾಹಿತಿಯನ್ನು ನೀಡಿದೆ. ಕೆಲವರು ಹಣ ಪಾವತಿಸಿ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಗೊಂದಲಕ್ಕೆ ಬಿದ್ದಿದ್ದಾರೆ.

ಇತ್ತೀಚೆಗಷ್ಟೇ ಹಣಪಾವತಿ ಮಾಡದ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಸ್ಯಾಂಡಲ್ ವುಡ್‌ನಲ್ಲಿ ಯಶ್, ಸುದೀಪ್, ರಮ್ಯಾ ಸೇರಿದಂತೆ ಬಹುತೇಕ ನಟ ನಟಿಯರ ಬ್ಲೂ ಟಿಕ್‌ ಮಾಯವಾಗಿದೆ. ಸತೀಶ್ ನೀನಾಸಂ ಸೇರಿದಂತೆ ಬೆರಳೆಣಿಕೆಯ ಕಲಾವಿದರ ಬ್ಲೂಟಿಕ್ ಉಳಿದುಕೊಂಡಿದೆ. ಕಾರಣ ಅವರು ಸಬ್ ಸ್ಕ್ರೈಬ್ ಮಾಡಿಸಿಕೊಂಡು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ : ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಸಂಪತ್‌ ಜಯರಾಮ್‌ ಇನ್ನಿಲ್ಲ

ಇದನ್ನೂ ಓದಿ : ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ಗೆ ಹುಟ್ಟು ಹಬ್ಬದ ಸಂಭ್ರಮ

ಕೆಲವರು ಬ್ಲೂಟಿಕ್ ಕಳೆದುಕೊಂಡು ಗೊಂದಲವಾಗಿದ್ದಾರೆ. ಬ್ಲೂಟಿಕ್ ಉಳಿಸಿಕೊಳ್ಳಬೇಕಾದರೆ, ಇಂತಿಷ್ಟು ಹಣವನ್ನು ಸಂದಾಯ ಮಾಡಿ ಸಬ್ ಸ್ಕ್ರೈಬ್ ಆಗಬೇಕು ಎನ್ನುವುದು ಎಲೋನ್ ಮಸ್ಕ್ ಅವರ ಉದ್ದೇಶವಾಗಿತ್ತು. ಉಚಿತವಾಗಿ ಈ ಸೇವೆಯನ್ನು ಕೊಡುವುದಿಲ್ಲ ಎಂದು ಅವರು ಈ ಹಿಂದೆಯೇ ಹೇಳಿದ್ದರು. ಅದರಂತೆ ಟ್ವೀಟರ್ ಸಂಸ್ಥೆ ಮಾಲೀಕ ಎಲೋನ್‌ ಮಸ್ಕ್‌ ನಡೆದುಕೊಂಡಿದ್ದಾರೆ.

ಇದನ್ನೂ ಓದಿ : ಪವಿತ್ರಾ ಲೋಕೇಶ್ -ನರೇಶ್ ಮದುವೆ ವಿವಾದ : ಮತ್ತೆ ಮದುವೆ ಟೀಸರ್ ರಿಲೀಸ್

Twitter Blue Tick chargers: Will KGF Star Yash die after losing his Twitter Blue Tick?

Comments are closed.