ಉಗ್ರಂ ಮಂಜು ಬಾಳಿಗೆ ಕಾಲಿಟ್ಟ ಸಂಧ್ಯಾ; ಹೊಸ ಜೀವನಕ್ಕೆ ಮುನ್ನುಡಿ

‘ಉಗ್ರಂ’ ಮಂಜು ಬಾಳಿಗೆ ಕಾಲಿಟ್ಟ ಸಂಧ್ಯಾ; ಹೊಸ ಜೀವನಕ್ಕೆ ಮುನ್ನುಡಿ
ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಸಿನಿಮಾದಲ್ಲಿ ಖಳನಟನಾಗಿ ಅಮೋಘವಾಗಿ ನಟಿಸಿ ಜನಪ್ರಿಯರಾದ ಸ್ಯಾಂಡಲ್‌ವುಡ್ ನಟ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ನಿನ್ನೆ (ನವೆಂಬರ್ 9, 2025) ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಜು ಅವರು ತಮ್ಮ ಬಹುಕಾಲದ ಆಸೆಯನ್ನು ಪೂರೈಸಿಕೊಂಡಿದ್ದು, ಅವರ ತಾಯಿ-ತಂದೆ ಮತ್ತು ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.

ಸಂಧ್ಯಾ ಪರಿಚಯ
ಮಂಜು ಅವರ ಕೈ ಹಿಡಿಯುತ್ತಿರುವ ಯುವತಿ ಹೆಸರು ಸಂಧ್ಯಾ ಖುಷಿ. ಸಂಧ್ಯಾ ಅವರು ವೃತ್ತಿಯಲ್ಲಿ ವೈದ್ಯಕೀಯ ಕ್ಷೇತ್ರದವರಾಗಿದ್ದು, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ Transplant Co-ordinator ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆಪ್ತ ಮೂಲಗಳ ಪ್ರಕಾರ, ಸಂಧ್ಯಾ ಅವರು ಮೂಲತಃ ತುಮಕೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನ ಪೀಣ್ಯದಲ್ಲಿ ವಾಸವಾಗಿದ್ದಾರೆ.

ಸೆಲೆಬ್ರಿಟಿಯಾದರೂ ಸರಳವಾಗಿ ನಡೆದ ಸಮಾರಂಭ
ನಿಶ್ಚಿತಾರ್ಥ ಸಮಾರಂಭವು ಬೆಂಗಳೂರಿನ ಪೀಣ್ಯದಲ್ಲಿ ಮಂಜು ಅವರ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ಈ ಸಂದರ್ಭದಲ್ಲಿ ಹೂ ಮುಡಿಸುವ ಶಾಸ್ತ್ರದ ಜೊತೆಗೆ ಉಂಗುರ ಬದಲಾಯಿಸುವ ಕಾರ್ಯಕ್ರಮವೂ ನಡೆಯಿತು. ಸಂತಸದ ಕ್ಷಣಗಳನ್ನು ಉಗ್ರಂ ಮಂಜು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ” ಎಂದು ಬರೆದುಕೊಂಡು ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಬ್ಯುಸಿನೆಸ್ ಐಡಿಯಾ ತಿಳಿಯಿರಿ

ವಿವಾಹ ಯಾವಾಗ?
ನಿಶ್ಚಿತಾರ್ಥದ ನಂತರ ಅಭಿಮಾನಿಗಳಲ್ಲಿ ಮದುವೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಿದೆ. ಮಾಹಿತಿಗಳ ಪ್ರಕಾರ, ಉಗ್ರಂ ಮಂಜು ಮತ್ತು ಸಂಧ್ಯಾ ಅವರು 2026ರ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ನಿಖರ ಮಾಹಿತಿ ಇಲ್ಲ.

ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಸಿನಿಮಾದಲ್ಲಿ ಖಳನಟನಾಗಿ ಅಮೋಘವಾಗಿ ನಟಿಸಿ ಜನಪ್ರಿಯರಾದರು. ಕಿಚ್ಚ ಸುದೀಪ್ ಅವರ ಜೊತೆಗೂ ಸಿನಿಮಾದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾರೆ. ಬಿಗ್‌ಬಾಸ್ ಸೀಸನ್ 11ರಲ್ಲಿ ಪಾಲ್ಗೊಂಡು ಸಾಕಷ್ಟು ದಿನಗಳ ಕಾಲ ಮನೆಯಲ್ಲಿದ್ದು, ಕೊನೆಯ ಹಂತದಲ್ಲಿ ಹೊರಬಂದರು. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ತಮ್ಮ ಕೆಲವು ಅಭ್ಯಾಸಗಳನ್ನು ತ್ಯಜಿಸಿ, ತಮ್ಮ ತಂದೆ-ತಾಯಿಯವರ ಆಸೆಯಂತೆ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅವರ ಈ ನಿರ್ಧಾರಕ್ಕೆ ಈಗ ಫಲ ಸಿಕ್ಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories