UPSC ಫಲಿತಾಂಶ ಪ್ರಕಟ : 260ನೇ ರ್ಯಾಂಕ್‌ ಪಡೆದ ಸೌರಭ್‌ ಸಾಧನೆಗೆ ನಟ ಪುನೀತ್‌ ಪೃಥ್ವಿ ಸಿನಿಮಾವೇ ಸ್ಪೂರ್ತಿ

ಮೈಸೂರು : ನಾಗರಿಕ ಸೇವಾ ಪರೀಕ್ಷೆ (Union Public Service Commission) ಅಂತಿಮ ಫಲಿತಾಂಶ 2022 ಗಾಗಿ (UPSC CSE Final Result) ಅಭ್ಯರ್ಥಿಗಳು ಹಲವು ದಿನಗಳಿಂದ ಕಾಯುತ್ತಿದ್ದು, ಅಂತಿಮವಾಗಿ ಅನೇಕ UPSC ಆಕಾಂಕ್ಷಿಗಳ ಆಸೆ ಇಂದು ಕೊನೆಗೊಂಡಿದೆ. ಇದರಲ್ಲಿ ನಮ್ಮ ಮೈಸೂರಿನ ವಿಜಯನಗರದ ಕೆ.ಸೌರಬ್‌ 260ನೇ ರ್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ಮೈಸೂರಿನ ವಿಜಯನಗರದ ನಿವಾಸಿ ಡಾ. ಕೆಂಪರಾಜು ಹಾಗೂ ಡಾ.ಎಂ. ಜಾನಕಿ ದಂಪತಿಯ ಪುತ್ರರಾಗಿರುವ ಕೆ. ಸೌರಭ್‌ ಅವರಿಗೆ ಈ ಸಾಧನೆ ಮಾಡಲು ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಪೃಥ್ವಿ” ಸಿನಿಮಾ ಪ್ರೇರಣೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಡೆಹ್ರಾಡೂನ್‌ನ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆಯಲ್ಲಿರುವ ಸೌರಭ್‌ ಅವರು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರೆಸಿ ವಿದೇಶಾಂಗ ಸೇವೆ ಸೇರುವ ಕನಸು ನನಸು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Nitesh Pandey passes away : ಕಿರುತೆರೆ ನಟ ಹೃದಯಾಘಾತದಿಂದ ಸಾವು

ಇದನ್ನೂ ಓದಿ : ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ವಿಧಿವಶ : ಇಂದು ಅಂತ್ಯಕ್ರಿಯೆ

2021ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡರಲ್ಲೂ ಉತ್ತೀರ್ಣರಾಗಿರುವ ಸೌರಭ್‌, ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ್ಯಾಂಕ್‌ ಪಡೆದಿದ್ದರಿಂದ ಅದನ್ನೆ ಆಯ್ಕೆ ಮಾಡಿಕೊಂಡಿರುವುದಾಗಿ, ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಪದವಿ ಓದುತ್ತಿರುವಾಗಲೇ ನಟ ಪುನೀತ್‌ ರಾಜ್‌ಕುಮಾರವ ಅವರ ಪೃಥ್ವಿ ಸಿನಿಮಾಕ್ಕೆ ಮಾರು ಹೋಗಿದ್ದರು. ಈಗಲೂ ಸಿನಿಮಾವನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ದಿಲ್ಲಿಗೆ ತೆರಳಿ ವಾಜಿರಾಮ್‌ ಅಂಡ್‌ ರವಿಯಲ್ಲಿ ಕೋಚಿಂಗ್‌ ಪಡೆದಿರುವುದಾಗಿ, ನಂತರ ಮನೆಯಲ್ಲಿ ತಯಾರಿ ನಡೆಸಿದ್ದೇನೆ ಎಂದು ಹೇಳಿದರು.

UPSC ಫಲಿತಾಂಶ ಪ್ರಕಟ : ಇಶಿತಾ ಕಿಶೋರ್ ಗೆ ಅಗ್ರಸ್ಥಾನ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಪ್ರಕಾರ, 2022 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ಅಗ್ರಸ್ಥಾನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗರಿಮಾ ಲೋಹಿಯಾ ಮತ್ತು ಉಮಾ ಹರಿತಿ ಎನ್ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್‌ಗಳನ್ನು ಪಡೆದಿದ್ದಾರೆ. ಯುಪಿಎಸ್‌ಸಿ ಪ್ರಕಟಣೆಯ ಪ್ರಕಾರ 933 ಅಭ್ಯರ್ಥಿಗಳು ನಾಗರಿಕ ಸೇವಾ ಪರೀಕ್ಷೆ 2022 ರಲ್ಲಿ ಅರ್ಹತೆ ಪಡೆದಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಬಿಡುಗಡೆಯ ಪ್ರಕಾರ, 101 ಅಭ್ಯರ್ಥಿಗಳ ಉಮೇದುವಾರಿಕೆಯು ತಾತ್ಕಾಲಿಕವಾಗಿದೆ ಮತ್ತು ಅವರ ರೋಲ್ ಸಂಖ್ಯೆಯನ್ನು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ವರ್ಷದ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಲಿಂಗ-ವಾರು ಅರ್ಹ ಅಭ್ಯರ್ಥಿಗಳ ಬಗ್ಗೆಯುಪಿಎಸ್‌ಸಿ ಡೇಟಾವನ್ನು ಒದಗಿಸಿಲ್ಲ, ಇದನ್ನು ಈ ಹಿಂದೆ 2021 ರವರೆಗೆ ಫಲಿತಾಂಶ ದಾಖಲೆಯಲ್ಲಿ ಸೇರಿಸಲಾಗಿತ್ತು.

ಈ ವರ್ಷ ಮೀಸಲು ಪಟ್ಟಿಯು ಒಟ್ಟು 178 ಅಭ್ಯರ್ಥಿಗಳನ್ನು ಒಳಗೊಂಡಿದೆ. ಅವರಲ್ಲಿ ಕ್ರಮವಾಗಿ ಸಾಮಾನ್ಯ ವರ್ಗದಿಂದ 89, ಇಡಬ್ಲ್ಯೂಎಸ್ ವರ್ಗದಿಂದ 28, ಒಬಿಸಿ ವರ್ಗದಿಂದ 52 ಮತ್ತು ಎಸ್‌ಸಿ ಮತ್ತು ಎಸ್‌ಟಿ ವರ್ಗದಿಂದ ತಲಾ 5 ಅಭ್ಯರ್ಥಿಗಳು. ಅಲ್ಲದೆ, ನಾಗರಿಕ ಸೇವೆಗಳಲ್ಲಿ ಐಆರ್ಟಿಎಸ್ (ಭಾರತೀಯ ರೈಲ್ವೆ ಸಂಚಾರ ಸೇವೆ) ಸೇರ್ಪಡೆಯೊಂದಿಗೆ, ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ : UPSC CSE ಅಂತಿಮ ಫಲಿತಾಂಶ ಪ್ರಕಟ : ಇಶಿತಾ ಕಿಶೋರ್ ಗೆ ಅಗ್ರಸ್ಥಾನ

UPSC CSE Final Result: UPSC Result Announced: Actor Puneeth Prithvi’s Cinema Inspired Saurabh’s Achievement of 260th Rank

Comments are closed.