ಆಟೋಗೆ ಡಂಪರ್ ಢಿಕ್ಕಿ 4 ಸಾವು, ಇಬ್ಬರು ಗಂಭೀರ

ಮಧ್ಯಪ್ರದೇಶ : ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಘಟನೆಯೊಂದರಲ್ಲಿ, ಲೋಡ್ ಮಾಡುವ ಆಟೋ ರಿಕ್ಷಾಕ್ಕೆ ಡಂಪರ್ ಡಿಕ್ಕಿ (Dumper auto accident) ಹೊಡೆದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ಮತ್ತು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮುಂಜಾನೆ 4 ಗಂಟೆಗೆ ದೇವಾಸ್‌ನ ಇಂದೋರ್-ಭೋಪಾಲ್ ಬೈಪಾಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಮೃತರನ್ನು ದೇವಾಸ್‌ನ ಶಂಕರಗಢ ನಿವಾಸಿ ಧರ್ಮೇಂದ್ರ, ಸಾಗರ್ ಜಿಲ್ಲೆಯ ನಿವಾಸಿ ರಾಣಿ ಮತ್ತು ಅವರ ಇಬ್ಬರು ಮಕ್ಕಳಾದ ಹೃತಿಕ್ (2ವರ್ಷ) ಮತ್ತು ಅಂಶು (3ವರ್ಷ) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡವರನ್ನು ದೇವಾಸ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ರಾಣಿಯ ಪತಿ ಸೂರಜ್ (35) ಮತ್ತು ಆಟೋ ರಿಕ್ಷಾ ಚಾಲಕ ರೈಸೇನ್ ಜಿಲ್ಲೆಯ ಬಬ್ಲು ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಅವರು ದೇವಾಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಇಂದೋರ್-ಭೋಪಾಲ್ ಬೈಪಾಸ್‌ನಲ್ಲಿ ರಸ್ತೆ ಅಪಘಾತದ ಬಗ್ಗೆ ಡಯಲ್ 100 ಗೆ ಮಾಹಿತಿ ಬಂದಿತು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಜಾಗರೂಕತೆಯಿಂದ ಚಾಲನೆ ಮಾಡಿದ ಡಂಪರ್ ಡಿಕ್ಕಿಯಿಂದ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಒಂದು ಲೋಡಿಂಗ್ ಆಟೋ ಭೋಪಾಲ್‌ನಿಂದ ಇಂದೋರ್‌ಗೆ ಹೋಗುತ್ತಿತ್ತು” ಎಂದು ನಹರ್ ದರ್ವಾಜಾ ಪೊಲೀಸ್ ಠಾಣೆಯ ಉಸ್ತುವಾರಿ ಆರ್‌ಸಿ ಕಲ್ಸಿಯಾ ತಿಳಿಸಿದ್ದಾರೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ವಿಧಿವಶ : ಇಂದು ಅಂತ್ಯಕ್ರಿಯೆ

ಇದನ್ನೂ ಓದಿ : ‘ದಿ ಕೇರಳ ಸ್ಟೋರಿ’ ನೋಡಿದ ನಂತರ ಪ್ರಿಯತಮನ ಮೇಲೆ ದೂರು ದಾಖಲಿಸಿದ ಯುವತಿ

ಆಟೋಗೆ ಡಿಕ್ಕಿ ಹೊಡೆಯುವ ಮೊದಲು ಡಂಬರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ತಾನು ಭೋಪಾಲ್‌ನಿಂದ ಇಂದೋರ್‌ಗೆ ಹೋಗುತ್ತಿದ್ದೇನೆ ಎಂದು ಚಾಲಕ ಬಬ್ಲು ಪೊಲೀಸರಿಗೆ ತಿಳಿಸಿದ್ದಾನೆ. ಸೂರಜ್‌ನ ಕುಟುಂಬವನ್ನು ಭೋಪಾಲ್‌ನ ಶಿವನಗರ ಪ್ರದೇಶದಿಂದ ಆಟೋದಲ್ಲಿ ಹತ್ತಿಸಲಾಯಿತು. ಅವರು ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಭೋಪಾಲ್‌ನಿಂದ ಹೊರಟರು. ರಸ್ತೆ ವಿಭಜಕವನ್ನು ಒಡೆದು ಡಿಪ್ಪರ್ ಮುಂಭಾಗದಿಂದ ಆಟೋಗೆ ಡಿಕ್ಕಿ ಹೊಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಖಾರಿಗಳು ಹೇಳಿದ್ದಾರೆ.‌

Dumper auto accident: Dumper collides with auto, 4 dead, 2 seriously

Comments are closed.