ಮಂಗಳವಾರ, ಏಪ್ರಿಲ್ 29, 2025
HomeCinemaಉರ್ಫಿ ಜಾವೇದ್‌ ರೀತಿ ಕಾಣಿಸಿಕೊಂಡ ಕಿರಿಕ್‌ ಬೆಡಗಿ : ಫೋಟೋ ಆಯ್ತು ಸಖತ್‌ ವೈರಲ್‌

ಉರ್ಫಿ ಜಾವೇದ್‌ ರೀತಿ ಕಾಣಿಸಿಕೊಂಡ ಕಿರಿಕ್‌ ಬೆಡಗಿ : ಫೋಟೋ ಆಯ್ತು ಸಖತ್‌ ವೈರಲ್‌

- Advertisement -

ಸ್ಯಾಂಡಲ್‌ವುಡ್‌ನ ಕಿರಿಕ್‌ ಬೆಡಗಿ ನ್ಯಾಷನಲ್‌ ಕ್ರಶ್‌ ಆಗಿರುವುದು ಎಲ್ಲರಿಗೂ ಗೊತ್ತೆ ಇದೆ. ನಟಿ ರಶ್ಮಿಕಾ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುವುದು ಸಾಮಾನ್ಯವಾಗಿದೆ. ಅದರಲ್ಲೂ ಅವರ ಮಾತು, ಡ್ರೆಸ್‌ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲ್‌ ಆಗುತ್ತಾ ಇರುತ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲಿಗರಿಗೆ ಗುರಿಯಾಗಿದ್ದು, ಜೀ ಸಿನಿ ಅವಾರ್ಡ್ಸ್‌ ಸಮಾರಂಭಕ್ಕೆ ಶಾರ್ಟ್‌ ಡ್ರೆಸ್‌ನಲ್ಲಿ ಹಾಜರಾಗಿದ್ದಾರೆ. ಸದ್ಯ ಈ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣನನ್ನು ನೋಡಿದ ನೆಟ್ಟಿಗರು ಉರ್ಫಿ ಜಾವೇದ್‌ಗೆ (Urfi Javed – Rashmika Mandanna) ಹೋಲಿಕೆ ಮಾಡಿ ಮಾತನಾಡಿದ್ದಾರೆ. ಹಾಗೆಯೇ ಇವರ ಈ ಅವತಾರ ಸೋಶಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಕೂಡ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಲಾಂಗ್‌ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಹೈ ಹೀಲ್ಡ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದು, ತಮ್ಮ ಎಂದಿನ ಕ್ಯೂಟ್‌ ಕ್ಯೂಟ್ ಸ್ಮೈಲ್ ಮೂಲಕ ಪಾಪರಾಜಿಗಳ ಕಡೆ ಕೈ ಬೀಸಿದ್ದಾರೆ. ಸದ್ಯ ಈ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಶಾರ್ಟ್ ಡ್ರೆಸ್ ಟ್ರೋಲ್‌ಗೆ ಆಹಾರವಾಗಿದೆ. ಅಷ್ಟೇ ಅಲ್ಲದೇ ಕೊಡಗಿನ ಬೆಡಗಿಯ ಈ ಅವತಾರಕ್ಕೆ ಸೋಶಿಯಲ್‌ ಮಿಡಿಯಾದಲ್ಲಿ ಚಿತ್ರವಿಚಿತ್ರ ಕಾಮೆಂಟ್‌ ಮಾಡಿದ್ದಾರೆ.

ನೆಟ್ಟಿಗರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಉರ್ಫಿ ಜಾವೇದ್‌ನ ಫಾಲೋ ಮಾಡ್ತಿದ್ದಾರಾ? ಆಕೆ ಹೀಗೆಲ್ಲಾ ಮಾಡ್ತಾಳೆ ಎಂದು ಊಹಿಸಿರಲಿಲ್ಲ. ಇಂತಹವರನ್ನು ಬಾಯ್ಕಾಟ್ ಮಾಡ್ಬೇಕು. ಈಗಾಗ್ಲೇ ಫೇಮಸ್ ಆಗಿರುವವರಿಗೆ ಎಕ್ಸ್‌ಪೋಸ್ ಮಾಡುವ ಕರ್ಮ ಏನು? ಎಂದು ಒಬ್ಬರು ಕಾಮೆಂಟ್ ಮಾಡುತ್ತಿದ್ಧಾರೆ. ಮತ್ತೊಬ್ಬರು “ಉರ್ಫಿ 2.O” ಎಂದು ಬರೆದಿದ್ದಾರೆ. ಇನ್ನೊಬ್ಬರು “ಈ ಔಟ್ ಫಿಟ್ ನಿಜಕ್ಕೂ ಕೆಟ್ಟದಾಗಿದೆ. ಇವ್ರಿಗೆಲ್ಲಾ ಏನಾಗಿದೆ. ಇಂತಹ ಕಾಸ್ಟ್ಯೂಮ್ ಯಾಕಾದ್ರೂ ಹಾಕ್ತಾರೆ” ಎಂದಿದ್ದಾರೆ.

ಇದನ್ನೂ ಓದಿ : ಜೋಶ್‌ ಅಪ್ಲಿಕೇಶನ್‌ ಚಾಲೆಂಜ್‌ ಸ್ವೀಕರಿಸಿ : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೀಟ್ ಮಾಡಿ

ಇದನ್ನೂ ಓದಿ : ಚೊಚ್ಚಲ ಸಿನಿಮಾ ನ್ಯಾನ್ಸಿ ರಾಣಿ ಬಿಡುಗಡೆಗೂ ಮೊದಲು ಮಲಯಾಳಂ ನಿರ್ದೇಶಕ ವಿಧಿವಶ

ಇದನ್ನೂ ಓದಿ : ಕಬ್ಜ ಸಿನಿಮಾದ 3ನೇ ಹಾಡು ಅದ್ದೂರಿ ರಿಲೀಸ್‌ : ಸ್ಪೆಷಲ್‌ ಸಾಂಗ್‌ಗೆ ಫಿದಾ ಆದ ಫ್ಯಾನ್ಸ್‌

ಸದ್ಯ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಸಹಿ ಹಾಕಿರುವುದಿಲ್ಲ. ‘ಪುಷ್ಪ’- 2 ಹಾಗೂ ಬಾಲಿವುಡ್‌ನ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀವಲ್ಲಿ ಆಗಿ ಮತ್ತೊಮ್ಮೆ ಪುಷ್ಪರಾಜ್‌ ಜೊತೆ ಕುಣಿಯಲಿದ್ದಾರೆ. ಜೊತೆಗೆ ರಣ್‌ಬೀರ್ ಕಪೂರ್ ಜೋಡಿಯಾಗಿ ‘ಅನಿಮಲ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರೊಂದಿಗೆ ಒಂದಷ್ಟು ಜಾಹೀರಾತುಗಳಲ್ಲಿ ಕಿರಿಕ್ ಬೆಡಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗುಡ್‌ಬೈ’ ಸಿನಿಮಾಕ್ಕಾಗಿ ನಟಿ ರಶ್ಮಿಕಾಗೆ ಬೆಸ್ಟ್ ಡೆಬ್ಯೂ ಜೀ ಸಿನಿ ಅವಾರ್ಡ್ ಸಿಕ್ಕಿದೆ. ಈ ವಿಚಾರವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾದಲ್ಲಿ ರಶ್ಮಿಕಾ, ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಿದ್ದರು.

Urfi Javed – Rashmika Mandanna: Urfi Javed looks like Kirik Bedagi: Photo went viral

RELATED ARTICLES

Most Popular