ಬೆಂಗಳೂರಿನಲ್ಲಿ ವರುಣನ ಆರ್ಭಟ : ಮಳೆ ನೀರಿನಲ್ಲಿ ಮುಳುಗಿದ ನಟ ಜಗ್ಗೇಶ್‌ ಅವರ ಐಷಾರಾಮಿ ಕಾರು

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಸಾಕಷ್ಟು ಹಾನಿ ಉಂಟಾಗಿದೆ. ಇನ್ನು ನಿನ್ನೆ ಮಳೆಯ ಅವಾಂತರಕ್ಕೆ ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ಕಾರೊಂದು ಸಿಕ್ಕಿ ಹಾಕಿಕೊಂಡಿದ್ದು, ಅದರಲ್ಲಿ ಓರ್ವ ಯುವತಿ ಕೂಡ ಮರಣ ಹೊಂದಿದ್ದಾಳೆ. ಈ ನಡುವಲ್ಲೇ ಸ್ಯಾಂಡಲ್‌ವುಡ್‌ನ ಹಿರಿಯ ನಟ ಜಗ್ಗೇಶ್‌ ಅವರ ಐಷಾರಾಮಿ ಕಾರು (Actor Jaggesh’s luxury car) ಮಳೆಗೆ ತುತ್ತಾಗಿದೆ.

ಹೀಗಾಗಿ ಕಾರು ಮುಳುಗಿದ ಸ್ಥಳದಲ್ಲಿ ಸಾಕಷ್ಟು ನೀರು ತುಂಬಿಕೊಂಡಿದ್ದು, ನೀರನ್ನು ಹೊರ ತೆಗೆಯುವ ಕೆಲಸ ಆಗುತ್ತಿದೆ ಎಂದು ಟ್ವೀಟರ್‌ ಮೂಲಕ ಮಾಹಿತಿ ನೀಡಿದ್ದಾರೆ. ಸದ್ಯ ಹಿರಿಯ ನಟ ಜಗ್ಗೇಶ್‌ ಅವರು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಕ್ರಿಯವಾಗಿದ್ದು, ತಮ್ಮ ವೈಯಕ್ತಿಕ ಜೀವನದ ಕುರಿತು ನಟ ಜಗ್ಗೇಶ್‌ ಆಗಾಗ್ಗ ಅಪ್‌ಡೇಟ್‌ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಅವರು ತಮ್ಮ ಐಷಾರಾಮಿ ಕಾರು ಮುಳುಗಿದ್ದರ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

ಇನ್ನು ಹಿರಿಯ ನಟ ಜಗ್ಗೇಶ್‌ ಟ್ವೀಟ್‌ನಲ್ಲಿ, “ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು..5hp motor ಬಳಸಿ ನೀರು ಹೊರಹಾಕಿಸಲಾಯಿತು..ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ.. ” ಎಂದು ಕಾರು ನೀರಿನಲ್ಲಿ ಮುಳುಗಿರುವ ವಿಡಿಯೋ ಹಾಗೂ ಪೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ಹೌದು ಮೊದಲ ವಾರದಲ್ಲಿ ಸಿನಿಮಾ 1.1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಟ್ವೀಟ್‌ವೊಂದಕ್ಕೆ ನಿರ್ಮಾಪಕರಾದ ಕಾರ್ತಿಕ್ ಗೌಡ ಉತ್ತರ ನೀಡಿದ್ದಾರೆ. ಆ ಟ್ವೀಟ್‌ನ ರೀಟ್ವೀಟ್ ಮಾಡಿರುವ ಸಿನಿಮಾದ ನಿರ್ಮಾಪಕರು ಆಗಿರುವ ಕಾರ್ತಿಕ್‌ ಗೌಡ ಅದಕ್ಕಿಂತಲೂ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್‌ ಬಗ್ಗೆ ಖಚಿತ ಮಾಹಿತಿ ನೀಡದೇ ಇದ್ದರೂ 1.1 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

42 ವರ್ಷ ತುಂಬಿದ್ದರೂ ಸಿಂಗಲ್‌ ಸುಂದರನಾಗಿಯೇ ಇರುವ ಹಯವದನನ ಮದುವೆ ತಯಾರಿ ನೋಡಿ ಸಿನಿಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ಮಾಡಿದೆ. ಅದರೊಂದಿಗೆ ಕೊನೆಯ ಹದಿನೈದು ನಿಮಿಷ ಒಂದೊಳ್ಳೆ ಸಂದೇಶದ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ. ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಒಂದೊಳ್ಳೆ ಸದಭಿರುಚಿ ಸಿನಿಮಾ ತೆರೆ ಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯದಾದ್ಯಂತ ರಸದೌತಣದ ಊಟದ ಪರಿಮಳ ಹರಡಿದೆ.

ರಾಘವೇಂದ್ರ ಸ್ಟೋರ್ಸ್‌ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್‌ ಪಡೆದುಕೊಂಡಿದ್ದು, ರುಚಿ ರುಚಿಯಾದ ಹಾಸ್ಯದ ಊಟವನ್ನು ಉಂಡು ಖುಷಿಪಡುತ್ತಿದ್ದಾರೆ. 35 ವರ್ಷ ಮೇಲ್ಪಟ್ಟ ಹುಡುಗರು ಮದುವೆ ಆಗಲು ಏನೆಲ್ಲಾ ಸರ್ಕಸ್‌ ಮಾಡುತ್ತಾರೆ. ಮುದುವೆ ನಂತರ ಕೆಲವರಿಗೆ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಸಿನಿಮಾದಲ್ಲಿ ಕಾಣಬಹುದು. ಹೊಂಬಾಳೆ ಫಿಲ್ಮ್ಸ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್‌ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ.

ಇದನ್ನೂ ಓದಿ : Kerala Story Box Office : ದಾಖಲೆಯ ಗಳಿಕೆ ಕಂಡ ದಿ ಕೇರಳ ಸ್ಟೋರಿ, ಆದಾ ಶರ್ಮಾ ಸಿನಿಮಾ 3 ನೇ ವಾರ ಭರ್ಜರಿ ಕಲೆಕ್ಸನ್ಸ್‌

ಈ ಸಿನಿಮಾದಲ್ಲಿ ನಟ ಜಗ್ಗೇಶ್‌ ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಹಯವದನನ ತಂದೆಯಾಗಿ ಹಿರಿಯ ನಟ ದತ್ತಣ್ಣ ನಟಿಸಿದ್ದಾರೆ. ಇನ್ನು ರವಿಶಂಕರೇ ಗೌಡ ಹಾಗೂ ಮಿತ್ರಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ.

Varun’s uproar in Bangalore: Actor Jaggesh’s luxury car drowned in rain

Comments are closed.