ಬೆಂಗಳೂರು: Vedha Poster: ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ವೇದ ಚಂದನವನದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಇತ್ತೀಚೆಗಷ್ಟೆ ಟೀಸರ್ ರಿಲೀಸ್ ಮಾಡಿ ಕಿಕ್ ಕೊಟ್ಟಿದ್ದ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದೆ.
ಇತ್ತೀಚೆಗಷ್ಟೆ ರಿಲೀಸ್ ಆಗಿದ್ದ ಟೀಸರ್ ನಲ್ಲಿ ಶಿವಣ್ಣ ಅವರನ್ನೇ ಹೈಪ್ ಮಾಡಲಾಗಿತ್ತು ಬಿಟ್ಟರೆ ಬೇರಾವುದೇ ಪಾತ್ರಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿರಲಿಲ್ಲ. ಆದ್ರೆ ಈಗ ರಿಲೀಸ್ ಆಗಿರುವ ಹೊಸ ಪೋಸ್ಟರ್ ನಲ್ಲಿ ಹೆಣ್ಣಿನ ಪಾತ್ರಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಪೋಸ್ಟರ್ ನಲ್ಲಿ ಅದಿತಿ ಸಾಗರ್ ಶಿವಣ್ಣನ ಮುಂದೆ ಆಕ್ರೋಶ ಭಾವದಲ್ಲಿ ಕಲ್ಲನ್ನೆತ್ತಿ ಹೊಡೆಯುವಂತೆ ಪೋಸ್ ನೀಡಿದ್ದಾರೆ.
ಅಂದಹಾಗೆ ಅದಿತಿ ಸಾಗರ್ ಅವರು ಅರುಣ್ ಸಾಗರ್ ಅವರ ಪುತ್ರಿ. ವೇದ ಚಿತ್ರದಲ್ಲಿ ಕನಕ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಈ ಫಸ್ಟ್ ಲುಕ್ ಕಿಕ್ಕೇರಿಸುವಂತಿದೆ. ಅದಿತಿ ಅವರು ರ್ಯಾಂಬೋ-2 ಸಿನಿಮಾದಲ್ಲಿ ದಮ್ ಮಾರೋ ದಮ್ ಹಾಡಿನ ಮೂಲಕ ಕರುನಾಡಿನ ಜನರ ಮನಗೆದ್ದಿದ್ದರು. ಒಬ್ಬ ಗಾಯಕಿಯಾಗಿ ಜನರ ಮನಗೆದ್ದ ಅವರು ಈಗ ವೇದ ಚಿತ್ರದಲ್ಲಿ ಬಣ್ಣಹಚ್ಚಿ ನಟನೆ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ
ವೇದ ಸಿನಿಮಾದ ಟೀಸರ್, ಒಂದರ ಮೇಲೊಂದರಂತೆ ರಿಲೀಸ್ ಆಗುತ್ತಿರುವ ಪೋಸ್ಟರ್ ಗಳ ಸಿನಿಮಾದ ಬೆರಗನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಚಿತ್ರದ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ 100 ದಿನ ಓಡೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಅಭಿಮಾನಿಗಳು. ಅಂದಹಾಗೆ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವ ಈ ಸಿನಿಮಾ ಡಿಸೆಂಬರ್ 23ರಂದು ತೆರೆ ಕಾಣಲಿದೆ.
Vedha Poster: vedha movie new poster released arun sagar daughter adithi in different look