Breaking News : ಮಂಗಳೂರಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ

ಮಂಗಳೂರು : Auto Blast Mangalore : ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟಗೊಂಡು ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ನಾಗುರಿಯಲ್ಲಿ ನಡೆದಿದೆ. ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದು ಸಂಜೆ 5.30 ರ ಸುಮಾರಿಗೆ ಆಟೋ ನಾಗರಿ ಬಳಿಯಲ್ಲಿ ತೆರಳುತ್ತಿತ್ತು. ಈ ವೇಳೆಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಏಕಾಏಕಿಯಾಗಿ ನಿಗೂಢ ಸ್ಪೋಟ ಸಂಭವಿಸಿದೆ. ಘಟನೆ ಯಲ್ಲಿ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿದೆ. ಪ್ರಯಾಣಿನೋರ್ವನ ಬಳಿಯಲ್ಲಿ ಬ್ಯಾಗ್ ಇದ್ದು, ಯಾವ ಕಾರಣಕ್ಕೆ ಸ್ಪೋಟ ಸಂಭವಿಸಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿರುವ ಶಶಿಕುಮಾರ್ ಅವರು, ಆಟೋದಲ್ಲಿ ಚಲಿಸುತ್ತಿದ್ದ ಪ್ರಯಾಣಿಕನ ಬಳಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬೆಂಕಿ ಚಾಲಕನಿಗೆ ವ್ಯಾಪಿಸಿದೆ. ಘಟನೆಯಲ್ಲಿ ಪ್ರಯಾಣಿಕನಿಗೆ ಗಾಯವಾಗಿದ್ದು, ಚಾಲಕನಿಗೆ ಯಾವುದೇ ಗಾಯವಾಗಿಲ್ಲ. ಈ ಘಟನೆಯ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡಾ ಎಂದಿದ್ದಾರೆ.

ಇನ್ನು ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿದ್ದು, ಪರಿಶಿಲನೆಯನ್ನು ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸ್ ಠಾಣೆ ( ಕಂಕನಾಡಿ) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Apartment block collapse: ಸಿಲಿಂಡರ್‌ ಬ್ಲಾಸ್ಟ್‌; ಅಪಾರ್ಟ್ಮೆಂಟ್‌ ಬ್ಲಾಕ್‌ ಕುಸಿತ

ಇದನ್ನೂ ಓದಿ : Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ

ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

ಪಟ್ಟಣಂತಿಟ್ಟ: ಶಬರಿಮಲೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿಯಾಗಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಪತನಂತಿಟ್ಟ ಬಳಿ ಶನಿವಾರ ನಡೆದಿದೆ. ಈಗಾಗಲೇ ಶಬರಿಮಲೆ ಯಾತ್ರೆ ಪ್ರಾರಂಭವಾಗಿದ್ದು, ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆಂದು ಹಲವು ಕಡೆಗಳಿಂದ ತೆರಳುತ್ತಾರೆ. ಈ ವರ್ಷವು ಕೂಡ ಶಬರಿಮಲೆ ಯಾತ್ರೆ ಪ್ರಾರಂಭವಾಗಿದ್ದು, ಯಾತ್ರೆಗೆ ತೆರಳುವ ವೇಳೆ ಆಂಧ್ರ ಪ್ರದೇಶ ಯಾತ್ರಾರ್ಥಿಗಳ ಬಸ್‌ ಪಲ್ಟಿಯಾಗಿರುವ ಘಟನೆ(Bus overtuns in Kerala) ನಡೆದಿದೆ.

ಆಂಧ್ರ ಪ್ರದೇಶದಿಂದ ಬಸ್‌ ಶಬರಿಮಲೆಗೆ ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಲಯಾಳ ಮನೋರಮಾ ತಿಳಿಸಿದ್ದಾರೆ. ಅವರನ್ನು ರಾಜಶೇಖರ್ (33 ವರ್ಷ), ಗೋಪಿ (33 ವರ್ಷ), ರಾಜೇಶ್ (35 ವರ್ಷ) ಮತ್ತು ಮಣಿಕಂಠನ್ (8 ವರ್ಷ) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಪತ್ತನಂತಿಟ್ಟದ ರಾನ್ನಿ ಬಳಿಯ ಪೆರಿನಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಲು ಮಾರ್ಗದರ್ಶನ ನೀಡಿದ್ದು, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

Auto Blast in Mangalore Town Naguri

Comments are closed.