ಸೋಮವಾರ, ಏಪ್ರಿಲ್ 28, 2025
HomeCinemaPrabhas : ಸಮಂತಾ ಬದುಕಲ್ಲಿ ನಿಜವಾಯ್ತು ವೇಣುಸ್ವಾಮಿ ಭವಿಷ್ಯ : ಈಗ ಪ್ರಭಾಸ್ ಬಗ್ಗೆ ಸ್ವಾಮಿ...

Prabhas : ಸಮಂತಾ ಬದುಕಲ್ಲಿ ನಿಜವಾಯ್ತು ವೇಣುಸ್ವಾಮಿ ಭವಿಷ್ಯ : ಈಗ ಪ್ರಭಾಸ್ ಬಗ್ಗೆ ಸ್ವಾಮಿ ನುಡಿದ್ರು ಆತಂಕಕಾರಿ ಸತ್ಯ

- Advertisement -

ಜನಸಾಮಾನ್ಯರಾಗಲಿ, ಸೆಲೆಬ್ರೆಟಿಗಳಾಗಲಿ, ರಾಜಕೀಯ ನಾಯಕರಾಗಲಿ ಎಲ್ಲರೂ ತಮ್ಮ ತಮ್ಮ ಮುಂದಿನ ಭವಿಷ್ಯ ಅರಿತುಕೊಳ್ಳಲು‌ ಸದಾ ಕಾತುರರಾಗಿರುತ್ತಾರೆ. ಆದರೆ ಇಲ್ಲೊಬ್ಬ ಜ್ಯೋತಿಷಿಯ ಭವಿಷ್ಯವಾಣಿ ಕೇಳಿ ತೆಲುಗು ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಮಾತ್ರವಲ್ಲ ಈ ಸ್ವಾಮೀಜಿಯ ಭವಿಷ್ಯ ನಿಜವಾಗದಿರಲಿ ಎಂದು ಪ್ರಾರ್ಥಿಸುತ್ತಿದೆ. ವೇಣು ಸ್ವಾಮಿ ಎಂಬ ಹೆಸರಿನ ಜ್ಯೋತಿಷ್ಯಿಯೊಬ್ಬರು ತೆಲುಗಿನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ಸಿನಿಮಾ ಮಂದಿ ಹೆಚ್ಚು ಇವರ ಮಾರ್ಗದರ್ಶನವನ್ನು ಪಡೆಯುತ್ತಾರಂತೆ. ಅಷ್ಟೇ ಅಲ್ಲ ವೇಣು ಸ್ವಾಮಿ ಹೇಳಿದ ಭವಿಷ್ಯ ನೂರಕ್ಕೆ ನೂರು ನಿಜವಾಗೋದರಿಂದ ಅವರು ಏನೇ ಹೇಳಿದರೂ ಹೆದರಿ ಕಂಗಾಲಾಗುತ್ತಿದ್ದಾರಂತೆ. ಈ ಹಿಂದೆ ಸಮಂತಾಗೆ ( Samantha) ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಇದೀಗ ಪ್ರಭಾಸ್‌ (Prabhas) ಬಗ್ಗೆ ಆತಂಕಕರಾಗಿ ಭವಿಷ್ಯ ಹೇಳಿದ್ದಾರೆ.

ಈ ಹಿಂದೆ ವೇಣು ಸ್ವಾಮಿ ತೆಲುಗಿನ ಸಿನಿ ಇಂಡಸ್ಟ್ರಿಯ ದೊಡ್ಮನೆ ಅಕ್ಕಿನೇನಿ ಕುಟುಂಬದ ಬಗ್ಗೆ ಭವಿಷ್ಯ ನುಡಿದಿದ್ದರಂತೆ. ತೆಲುಗು ನಟಿ ಸಮಂತಾ ರುತ್ ಪ್ರಭು, ಅಕ್ಕಿನೇನಿ ಕುಟುಂಬದ ಅಕ್ಕಿನೇನಿ‌ನಾಗಾರ್ಜುನ್ ಪುತ್ರ ನಾಗಚೈತನ್ಯ ಅವರನ್ನು ಮದುವೆಯಾಗಿದ್ದರು. ಈ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ ಈ ಮದುವೆ ಡಿವೋರ್ಸ್ ನಲ್ಲಿ ಅಂತ್ಯವಾಗಲಿದೆ ಎಂದಿದ್ದರಂತೆ.ವೇಣು ಸ್ವಾಮಿ ಹೇಳಿದಂತೆ 2017 ರಲ್ಲಿ ನಡೆದ ಈ ಅದ್ದೂರಿ ವಿವಾಹ 2021 ರ ವೇಳೆಗೆ ವಿಚ್ಚೇಧನದೊಂದಿಗೆ ಕೊನೆಗೊಂಡಿದೆ.

ಈಗ ಇದೇ ಸ್ವಾಮೀಜಿ ತೆಲುಗಿನ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬಗ್ಗೆ ಅತ್ಯಂತ ಆತಂಕಕಾರಿ ಹಾಗೂ ಬೇಸರದ ಸಂಗತಿಯೊಂದನ್ನು ಭವಿಷ್ಯದ ರೂಪದಲ್ಲಿ ಹೇಳಿದ್ದಾರಂತೆ. ಪ್ರಭಾಸ್ ಗೆ ಇನ್ಮುಂದೇ ಗೆಲುವು ಅನ್ನೋದು ಅಷ್ಟೊಂದು ಸುಲಭ ಅಲ್ವಂತೆ. ಸಾಲು ಸಾಲು ಸಿನಿಮಾಗಳು ಸೋತು ಹೋಗಲಿದ್ದು, ಅವರನ್ನು ನಂಬಿ ಬಂಡವಾಳ ಹೂಡಲು ನಿರ್ಮಾಪಕರು ಭಯಬೀಳುವ ಸ್ಥಿತಿ ಬರಲಿದೆಯಂತೆ. ಈ ಭವಿಷ್ಯ ಕೇಳಿದ ಪ್ರಭಾಸ್ ಅಭಿಮಾನಿಗಳು ನೊಂದು ಹೋಗಿದ್ದಾರೆ.

ಇನ್ನು ಕೆಲವರು ಈಗಲೇ ಈ ಭವಿಷ್ಯವನ್ನು ಪ್ರಭಾಸ್ ಗೆ ಹೋಲಿಸಿ ನೋಡಿ ಆತಂಕ ಪಡುತ್ತಿದ್ದಾರೆ. ಬಾಹುಬಲಿ ಸಿನಿಮಾದ ಮೂಲಕ ದೇಶ ಹಾಗೂ ವಿಶ್ವವೇ ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಪ್ರಭಾಸ್ ಗೆ ಮತ್ತೆ ಗೆಲುವು ಸಿಗಲೇ ಇಲ್ಲ‌. ಬಹುನೀರಿಕ್ಷಿತ ಸಾಹೋ ಸೋಲು ಪ್ರಭಾಸ್ ರನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಮಾತ್ರವಲ್ಲ ಇತ್ತೀಚಿಗೆ ರಿಲೀಸ್ ಆದ ರಾಧೆ ಶ್ಯಾಮ್ ಕೂಡ ಗೆಲುವಿನ ಮುಖನೋಡುವಲ್ಲಿ ಸೋತಿದೆ‌. ಇಂಥ ಹೊತ್ತಿನಲ್ಲಿ ವೇಣು ಸ್ವಾಮೀಜಿ ಭವಿಷ್ಯ ಅಭಿಮಾನಿಗಳ ಎದೆ ನಡುಗಿಸಿದೆ.

ಇದನ್ನೂ ಓದಿ : ಸಿನಿಮಾ ಶೂಟಿಂಗ್ ಗಾಗಿ 20 ಕೆಜಿ ಕಾಸ್ಟ್ಯೂಮ್: ಅಧೀರಾ ಹೇಳಿದ್ರು ತೆರೆ ಹಿಂದಿನ ಕತೆ

ಇದನ್ನೂ ಓದಿ : ಮಹೇಶ್ ಬಾಬು ಸಿನಿಮಾಗೆ ಕಥೆ ಮಾಡಲು ಒಂದು ವರ್ಷಬೇಕು! ಗಾಳಿಸುದ್ದಿಗೆ ಬ್ರೆಕ್‌ ಹಾಕಿದ ರಾಜಮೌಳಿ

Venuswamy future is real in Samantha life, What Says Prabhas

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular