Sanjjanaa Galrani : ಕಷ್ಟ ಪರಿಹರಿಸಿದ ದೇವರಿಗೆ ಮುಡಿಕೊಟ್ಟ ನಟಿ : ಸಂಜನಾ ಹಂಚಿಕೊಂಡ್ರು ಸ್ಪೆಶಲ್ ಪೋಟೋ

ಸ್ಯಾಂಡಲ್ ವುಡ್ ನ ಗಂಡ ಹೆಂಡತಿ ಬೆಡಗಿ ಸಂಜನಾ ಗರ್ಲಾನಿ ಕಳೆದ ಎರಡು ವರ್ಷಗಳಲ್ಲಿ ನರಕವನ್ನೇ ನೋಡಿ ಬಂದ್ರು. ಡ್ರಗ್ಸ್ ಸೇವನೆ ಹಾಗೂ ಮಾರಾಟದ ಆರೋಪ ದಡಿ ಜೈಲು ಪಾಲಾಗಿದ್ದ ಸಂಜನಾ ಜೈಲಿನಿಂದ ಹೊರಬರಲು ಪಟ್ಟಪಾಡು ಅಷ್ಟಿಷ್ಟಲ್ಲ. ಕೊನೆಗೂ ಅನಾರೋಗ್ಯದ ಕಾರಣ ನೀಡಿ ಹೊರಬಂದ ಸಂಜನಾ (Sanjjanaa Galrani) ಸದ್ಯ ಬದುಕಿನ ಸಂಭ್ರಮದ ಗಳಿಗೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಈ ಹೊತ್ತಿನಲ್ಲಿ ದೇವರಿಗೆ ಥ್ಯಾಂಕ್ಸ್ ಹೇಳೋಕೆ ಆಯ್ದುಕೊಂಡ ವಿಧಾನದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

Sanjjanaa Galrani Shaves Her Head As Prayer to God

ಯಾವುದೇ ಹೆಣ್ಣಮಕ್ಕಳಾದರೂ ಅವರಿಗೆ ತಮ್ಮ ಕೂದಲಿನ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆದರೆ ನಟಿ ಸಂಜನಾ ಗಲ್ರಾನಿ ಅಂತಹ ಪ್ರೀತಿಯ ಕೂದಲನ್ನೇ ದಾನ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು ಕೆಲದಿನಗಳು,ತಿಂಗಳು ಹಾಗೂ ವರ್ಷಗಳಿಂದ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿಸಿಕೊಂಡಿರೋ ಸಂಜನಾ, ಇದೆಲ್ಲದರ ಮಧ್ಯೆಯೂ ಖುಷಿಯ ದಿನಗಳನ್ನು ನೀಡಿದ್ದಕ್ಕಾಗಿ ದೇವರಿಗೆ ಮುಡಿಕೊಟ್ಟು ತಮ್ಮ ಧನ್ಯವಾದ ಸಲ್ಲಿಸಿದ್ದಾರೆ.

Sanjjanaa Galrani Shaves Her Head As Prayer to God
ಸ್ಯಾಂಡಲ್‌ವುಡ್‌ ನಟಿ ಸಂಜನಾ ಗರ್ಲಾನಿ

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನುಣ್ಣನೆಯ ತಲೆಯ ಪೋಟೋದ ಜೊತೆ ಸುದೀರ್ಘವಾದ ಪೋಸ್ಟ್ ವೊಂದನ್ನು ಸಂಜನಾ ಗಲ್ರಾನಿ (Sanjjanaa Galrani ) ಹಂಚಿ ಕೊಂಡಿದ್ದಾರೆ. ಅಲ್ಲದೇ ಸೌಂದರ್ಯವೂ ನೋಡುಗರ ದೃಷ್ಟಿಯಲ್ಲಿದೆ ಎಂದಿರುವ ಸಂಜನಾ, ಅದಕ್ಕಾಗಿ ನಾನು ನನ್ನ ಕೂದಲನ್ನು ದಾನ ಮಾಡಿದ್ದೇನೆ. ನಾನು ನನ್ನ ದೇವರಿಗೆ ಯಾವ ರೀತಿ ನಮನ ಸಲ್ಲಿಸ ಬೇಕು ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ನೋಡಿದ ಬಳಿಕ ಈಗ ನನ್ನ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತಿವೆ ಎಂದಿದ್ದಾರೆ.

Sanjjanaa Galrani Shaves Her Head As Prayer to God

ನನ್ನ ಜೀವನದಲ್ಲಿ ತಾಯ್ತನದ ಸಂಭ್ರವವನ್ನು ಕೊಟ್ಟಿದ್ದಕ್ಕೆ ನಾನು ಹೇಗೆ ಧನ್ಯವಾದ ಹೇಳಲಿ ತಿಳಿಯುತ್ತಿಲ್ಲ. ನನ್ನ ಮಗುವು ಶೀಘ್ರದಲ್ಲೇ ನನ್ನ ಮಡಿಲಿಗೆ ಬರಲಿ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನನ್ನ ಧನ್ಯವಾದ ಎಂದಿದ್ದಾರೆ. ಸಂಜನಾ (Sanjjanaa Galrani ) ಈ ಲುಕ್ ಮತ್ತು ಪೋಸ್ಟ್ ಗೆ ಅಭಿಮಾನಿಗಳು ಅಚ್ಚರಿ ಹಾಗೂ ಖುಷಿ ಎರಡನ್ನು ವ್ಯಕ್ತಪಡಿಸಿದ್ದಾರೆ.

Sanjjanaa Galrani Shaves Her Head As Prayer Says She Cant Thank God Enough

ಸದ್ಯ ತಾಯ್ತನದ ಸಂಭ್ರಮದಲ್ಲಿರೋ ಸಂಜನಾ (Sanjjanaa Galrani ) ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.‌ಕಳೆದ ಎರಡು ಮೂರು ವರ್ಷಗಳ ಹಿಂದೆ ಗುಟ್ಟಾಗಿ ಮದುವೆಯಾಗಿದ್ದರು. ಆದರೆ ಈ ವಿಚಾರವನ್ನು ಅವರು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಬಳಿಕ ಈ ಸಂಗತಿ ಬೆಳಕಿಗೆ ಬಂದಿತ್ತು. ವೈದ್ಯರೊಬ್ಬರ ಜೊತೆ ಸಂಜನಾ ಗಲ್ರಾನಿ ಮದುವೆಯಾಗಿದ್ದಾರೆ. ಇತ್ತೀಚಿಗಷ್ಟೇ ಸಂಜನಾ ಬೇಬಿಬಂಪ್ ಜೊತೆ ಯೋಗ ಮಾಡೋ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Prabhas : ಸಮಂತಾ ಬದುಕಲ್ಲಿ ನಿಜವಾಯ್ತು ವೇಣುಸ್ವಾಮಿ ಭವಿಷ್ಯ : ಈಗ ಪ್ರಭಾಸ್ ಬಗ್ಗೆ ಸ್ವಾಮಿ ನುಡಿದ್ರು ಆತಂಕಕಾರಿ ಸತ್ಯ

ಇದನ್ನೂ ಓದಿ :  ಮಹೇಶ್ ಬಾಬು ಸಿನಿಮಾಗೆ ಕಥೆ ಮಾಡಲು ಒಂದು ವರ್ಷಬೇಕು! ಗಾಳಿಸುದ್ದಿಗೆ ಬ್ರೆಕ್‌ ಹಾಕಿದ ರಾಜಮೌಳಿ

Sanjjanaa Galrani Shaves Her Head As Prayer to God

Comments are closed.