Vicky Kaushal Katrina Kaif Marriage: ಭರದಿಂದ ಸಾಗುತ್ತಿದೆ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮದುವೆ ತಯಾರಿ

ನವದೆಹಲಿ: ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿದ್ದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ (Vicky Kaushal Katrina Kaif Marriage) ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಮದುವೆ ಹಿಂದಿನ ಕಾರ್ಯಕ್ರಮಗಳು ರಾಜಸ್ತಾನದಲ್ಲಿ ನಡೆಯಲಿವೆ. ಇದಕ್ಕಾಗಿ ನಿನ್ನೆ ಅಂದರೆ ಸೋಮವಾರವೇ ದೆಹಲಿಯಿಂದ ರಾಜಸ್ಥಾನಕ್ಕೆ ಆಗಮಿಸಿದ್ದಾರೆ ಈ ಜೋಡಿ. ಮದುವೆ ಕುರಿತು ಮಾಧ್ಯಮಗಳಿಗೆ ಜಾಸ್ತಿ ಏನು ಮಾಹಿತಿ ಬಿಟ್ಟು ಕೊಡದ ಈ ಜೋಡಿ, ಎಲ್ಲವನ್ನೂ ಸೀಕ್ರೆಟ್ ಆಗಿಯೇ ಇರಿಸಿದೆ.


ಮದುವೆ ಅತಿಥಿಗಳ ಲಿಸ್ಟ್ ತಿಳಿದಿಲ್ಲವಾದರೂ, ನೇಹಾ ಧೂಪಿಯ- ಅಂಗದ್ ಬೇಡಿ, ಹಾಗೂ ಮಿನಿ ಮಾಥುರ್- ಕಬೀರ್ ಖಾನ್ ಜೋಡಿ ಇಂದು ಏರ್ ಪೋರ್ಟ್‌ಗೆ ಬಂದಿಳಿದಿದ್ದಾರೆ.
ಮಾಧ್ಯಮಗಳ ಪ್ರಕಾರ, ಈ ದೀಪಾವಳಿಗೆ ಕಬೀರ್ ಖಾನ್ ಮನೆಯಲ್ಲಿ ವಿಕ್ಕಿ- ಕತ್ರೀನಾ ನಿಶ್ಚಿತಾರ್ಥ ನಡೆದಿತ್ತು. ಏಕ್ ಥಾ ಟೈಗರ್ ಹಾಗೂ ನ್ಯೂಯಾರ್ಕ್ ಚಿತ್ರಗಳನ್ನು ನಿರ್ದೇಶಿಸಿದ ಕಬೀರ್ ಖಾನ್ ಕತ್ರೀನಾ ಜೊತೆ ಒಂದಷ್ಟು ಆಪ್ತವಾಗಿದ್ದರೆ. ನೇಹಾ ಧೂಪಿಯ ಕೂಡ ದೇ ಧನಾ ಧನ್ ಹಾಗೂ ಸಿಂಗ್ ಇಸ್ ಕಿಂಗ್ ನಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇವರ ಜೊತೆಗೆ ರವಿನಾ ಟಂಡನ್ ಹಾಗೂ ಗಾಯಕ ಗುರುದಾಸ್ ಮಾನ್ ಕೂಡ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರು ಮದುವೆಗೆ ಆಗಮಿಸಿದ್ದ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲ. ಸೋಮವಾರ ಏರ್‌ಪೋರ್ಟ್‌ಗೆ ಬಂದಿಳಿದ ಈ ಜೋಡಿ ಮಾಧ್ಯಮಗಳ ಮುಂದೆ ಜಾಸ್ತಿ ಹೊತ್ತು ನಿಲ್ಲದೆ ಹೋಗಿದ್ದಾರೆ. ಈ ವೇಳೆ ಕತ್ರಿನಾ ಗೋಲ್ಡನ್ ಕಲರ್ ಶಾರರ ಹಾಗೂ ಎಂಬ್ರಾಯಿಡರಿ ಕುರ್ತಾ ಹಾಗೂ ಭಾವಿ ಪತಿ ವಿಕ್ಕಿ ಕೌಶಲ ಪ್ರಿಂಟೆಡ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮದುವೆಯ ಅತಿಥಿಗಳ ಕುರಿತು ಚರ್ಚೆ ನಡೆಯುತ್ತಿದ್ದು, ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಹಾಗೂ ಫಿಲ್ಮ್ ಮೇಕರ್‌ಗಳಾದ ಕರಣ್ ಜೋಹರ್ ಹಾಗೂ ಫರ ಖಾನ್ ಹೆಸರು ಮುಂದಿನಲ್ಲಿದೆ. ಕೊರೊನ ಕುರಿತು ಸಾಕಷ್ಟು ಜಾಗ್ರತೆ ವಹಿಸಿದ್ದು, ಮದುವೆಗೆ ಆಗಮಿಸುವ ಅತಿಥಿಗಳಿಗೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಜಿಲ್ಲಾ ಕಲೆಕ್ಟರ್ ರಾಜೇಂದ್ರ ಕಿಶನ್ ಅವರು ಮದುವೆಗೆ 120 ಜನರಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮದುವೆ ಸವಾಯಿ ಮಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ರಿಸರ್ಟ್ ನಲ್ಲಿ ನಡೆಯಲಿದೆ.

ಹೇಗಿದೆ ಮದುವೆ ತಯಾರಿ?
ಈಗಾಗಲೇ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ಮದುವೆ ತಯಾರಿ ಭರದಿಂದ ಸಾಗುತ್ತಿದೆ. ಒಟ್ಟು ಮೂರು ದಿನಗಳ ಮದುವೆ ಇದಾಗಿದ್ದು, 7ರಂದು ಮೆಹಂದಿ, 8ಕ್ಕೆ ಸಂಗೀತ್ ಹಾಗೂ 9ರಂದು ಮದುವೆ ನಡೆಯಲಿದೆ. ರೆಸಾರ್ಟ್ ಪಕ್ಕದ ಧರ್ಮಶಾಲಾದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಮೆಹೆಂದಿ ಕಾರ್ಯಕ್ರಮದಲ್ಲಿ ಬಳಸುವ ಮೆಹಂದಿಗಾಗಿ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ದುಡ್ಡು ವ್ಯಯಿಸಲಿದ್ದಾರೆ ಕತ್ರಿನಾ. ಇಷ್ಟೇ ಅಲ್ಲದೇ, ವಿಕ್ಕಿ ಎಂಟ್ರಿ ಹೊತ್ತಲ್ಲಿ ಏಳು ಬಿಳಿ ಕುದುರೆಗಳನ್ನು ತಂದು ನಿಲ್ಲಿಸಲು ಆಯ್ಕೆ ಮಾಡಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಇದೊಂದು ರಾಯಲ್ ಮದುವೆ ಎನ್ನುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ :

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

(Vicky Kaushal Katrina Kaif Marriage updates here is the todays details)

Comments are closed.