Vijay Devarakonda Rashmika Mandanna : ವಿಜಯ್ ದೇವರಗೊಂಡ – ರಶ್ಮಿಕಾ ಮಂದಣ್ಣ ಪರಿಣಯ: ವರ್ಷಾಂತ್ಯದಲ್ಲಿ ಒಂದಾಗುತ್ತಾ ಟಾಲಿವುಡ್ ಜೋಡಿ

ಸೌತ್ ಇಂಡಸ್ಟ್ರಿ ದಾಟಿ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿರುವ ನ್ಯಾಶನಲ್ ಕ್ರಶ್ ಕನ್ನಡತಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದ ಹಾಟ್ ಟಾಫಿಕ್. ಮೊನ್ನೆ ಮೊನ್ನೆ ಮದುವೆಯಾಗೋಕೆ ನಾನಿನ್ನು ಚಿಕ್ಕೋಳು ಎಂದಿದ್ದ ಕೊಡಗಿನ ಬೆಡಗಿ ಈಗ ಮದುವೆಗೆ ಸಜ್ಜಾಗಿದ್ದಾರೆ. ಹೌದು ಅಂತಹದ್ದೇನೂ ಇಲ್ಲ ಇಲ್ಲ ಎನ್ನುತ್ತಲೇ ರಶ್ಮಿಕಾ ಮಂದಣ್ಣ (Rashmika Mandanna) ನಟ ವಿಜಯ್‌ ದೇವರಕೊಂಡ (Vijay Devarakonda) ಜೊತೆ ಮದುವೆ ಮಂಟಪವೇರಲು ಸಿದ್ಧವಾಗ್ತಿದ್ದಾರೆ ಎನ್ನಲಾಗ್ತಿದೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಕೆರಿಯರ್ ಆರಂಭಿಸಿದ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನ‌ ನಟಿ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ, ಆಗಾಗ ಗಾಸಿಪ್ ಗುರಿಯಾಗುತ್ತಲೇ ಇದ್ದರು. ಈಗ ಮತ್ತೊಮ್ಮೆ ರಶ್ಮಿಕಾ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಸಾಂಗತ್ಯದ ಸಂಗತಿ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ಈ ವರ್ಷದ ಅಂತ್ಯಕ್ಕೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಯಾಗ್ತಾರೆ ಅನ್ನೋ ಮಾತು ಕೇಳಿಬಂದಿದೆ.

ಕಾಮ್ರೆಡ್ ಸಿನಿಮಾದ ಮೂಲಕ ಜೊತೆಯಾದ ವಿಜಯ್ ದೇವರಕೊಂಡ‌ ಹಾಗೂ ರಶ್ಮಿಕಾ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ಈ ಜೋಡಿ ಸ್ನೇಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ನಾವಿಬ್ಬರೂ ಸ್ನೇಹಿತರು ಎನ್ನುತ್ತಲೇ ಜೊತೆ ಜೊತೆಯಾಗಿ ಕಾಣಿಸಿಕೊಂಡ ಈ ಜೋಡಿ ಈ ಅಧಿಕೃತವಾಗಿ ಹೊಸ ಬದುಕಿಗೆ ಕಾಲಿಡಲಿದೆ ಎನ್ನಲಾಗ್ತಿದೆ. ಈಗಾಗಲೇ ಎರಡು ಕುಟುಂಬವೂ ಇವರ ಪ್ರೀತಿಗೆ ಒಪ್ಪಿಕೊಂಡಿದೆಯಂತೆ‌

ಇದಕ್ಕೂ ಮುನ್ನ ವಿಜಯ್ ದೇವರ್ ಕೊಂಡ ಹಾಗೂ ರಶ್ಮಿಕಾ ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಸ್ವಾಗತಿಸಿದ್ದರು. ಅಷ್ಟೇ ಅಲ್ಲ ವಿಜಯ್ ಲೈಗರ್ ಸಿನಿಮಾದ ಟೀಸರ್ ನೋಡಿ ರಶ್ಮಿಕಾ ಸಖತ್ ಸಂಭ್ರಮಿಸಿದ್ದರು. ಇದಾದ ಮೇಲೆ‌ ಹಲವಾರು ಭಾರಿ ರಶ್ಮಿಕಾ ಹಾಗೂ ವಿಜಯ್ ಮುಂಬೈಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಲೇಟ್ ನೈಟ್ ಪಾರ್ಟಿ ಗಳಲ್ಲೂ ಈ ಜೋಡಿ ಮಿಂಚಿತ್ತು. ಈಗ ಈ ವರ್ಷಾಂತ್ಯಕ್ಕೆ ವಿಜಯ್ ಹಾಗೂ ರಶ್ಮಿಕಾ ಮದುವೆಯಾಗಲಿದ್ದಾರಂತೆ. ಆದರೆ ಈ ವಿಚಾರವನ್ನು ರಶ್ಮಿಕಾ ಅಥವಾ ವಿಜಯ್ ಖಚಿತಪಡಿಸಿಲ್ಲ.

ಕೆಲದಿನಗಳ ಹಿಂದೆಯಷ್ಟೇ ಮಾಧ್ಯಮದ ಜೊತೆ ಮಾತನಾಡಿದ್ದ ರಶ್ಮಿಕಾ ಮದುವೆ ಬಗ್ಗೆ ಯೋಚಿಸಲು ನಾನು ಚಿಕ್ಕವಳು ಎಂದಿದ್ದರು.‌ಮಾತ್ರವಲ್ಲ‌ಪ್ರೀತಿ ಎಂಬುದು ಪರಸ್ಪರ ಕೊಡುವ ಗೌರವ,ಸಮಯ ಹಾಗೂ ಕಾಳಜಿ ಎಂದು ಹೇಳಿಕೊಂಡಿದ್ದರು. ಹೀಗಾಗಿ ಬಹುತೇಕ ರಶ್ಮಿಕಾ ಮದುವೆ ವಿಚಾರವನ್ನು ಗುಟ್ಟಾಗಿ ಕಾಯ್ದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಎಂಗೇಜಮೆಂಟ್ ಮಾಡಿಕೊಂಡಿದ್ದರು. ಈ ಜೋಡಿಯ ನಡುವೆ ಬರೋಬ್ಬರಿ 14 ವರ್ಷಗಳ ಅಂತರವಿತ್ತು.

ಇದನ್ನೂ ಓದಿ : ಮದುವೆ ಆಗೋಕೆ ನಾನಿನ್ನು ಚಿಕ್ಕವಳು ಎಂದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ :  ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ ನಲ್ಲಿ ಕೊಟ್ರು ಸಿಹಿಸುದ್ದಿ

( Vijay Devarakonda and Rashmika Mandanna ready to marriage)

Comments are closed.