ದುಬೈ : Vijay Deverakonda : ಟೀಂ ಇಂಡಿಯಾ ಮಾಜಿ ನಾಯಕನ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ನಾನು ವಿರಾಟ್ ಕೊಹ್ಲಿ ಸಿನಿಮಾದಲ್ಲಿ ನಟಿಸಲು ಬಯಸುತ್ತೇನೆ ಎಂದು ನಟ ವಿಜಯ ದೇವರಕೊಂಡ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ. ಅರ್ಜುನ್ ರೆಡ್ಡಿ, ಡಿಯರ್ ಕಾಮ್ರೆಡ್ ಬಳಿಕ ಇದೀಗ ಲೈಗರ್ ಸಿನಿಮಾ ಮೂಲಕ ವಿಜಯ್ ದೇವರಕೊಂಡ ತೆರೆ ಮೇಲೆ ಅಪ್ಪಳಿಸಿದ್ದಾರೆ. ಸಿನಿಮಾ ಪ್ರಚಾರದ ನಡುವೆಯೇ ಟೀಂ ಇಂಡಿಯಾ ಹಾಗೂ ಪಾಕ್ ನಡುವೆ ನಡೆದ ಏಷ್ಯಾ ಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ದುಬೈಗೆ ಆಗಮಿಸಿದ್ದರು.
ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ ಕೊಹ್ಲಿ ಈ ಪಂದ್ಯದಲ್ಲಿ ಕನಿಷ್ಟ 50 ರನ್ ಗಳಿಸೋದನ್ನು ನಾನು ನೋಡಬೇಕು ಎಂದು ಹೇಳಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 5 ವಿಕೆಟ್ಗಳ ಅಂತರದಲ್ಲಿ ಸೋಲಿಸಿದೆ.
Arjun Reddy star @TheDeverakonda has expressed his desire to do a biopic on @imVkohli
— FilmiFever (@FilmiFever) August 28, 2022
When he was asked on whom would you like to make a biopic, he replied, "Dhoni bhai biopic already did by Sushant so I'm interested to do Virat anna biopic"#VijayDeverakonda #Viratkohli #Liger pic.twitter.com/M5y38ULEys
ಟೀಂ ಇಂಡಿಯಾದ ಯಾವ ಆಟಗಾರನ ಜೀವನಚರಿತ್ರೆಯ ಸಿನಿಮಾದಲ್ಲಿ ನೀವು ನಟಿಸಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ಎಂ.ಎಸ್ ಧೋನಿ ಜೀವನಚರಿತ್ರೆ ಆಧಾರಿತ ಸಿನಿಮಾ ಈಗಾಗಲೇ ಮೂಡಿ ಬಂದಾಗಿದೆ. ಹೀಗಾಗಿ ನಾನು ವಿರಾಟ್ ಕೊಹ್ಲಿ ಜೀವನಾಧಾರಿತ ಸಿನಿಮಾ ತಯಾರಾದರೆ ಅದಕ್ಕೆ ನಾಯಕನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಲೈಗರ್ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಅನನ್ಯಾ ಪಾಂಡೆ ಜೊತೆ ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಮಂದಿರಗಳಲ್ಲಿ ಲೈಗರ್ ಸಿನಿಮಾ ನೀರಸ ಪ್ರದರ್ಶನ ಕಂಡಿದ್ದು ಬಾಲಿವುಡ್ನ ಮತ್ತೊಂದು ಫ್ಲಾಪ್ ಸಿನಿಮಾದ ಸಾಲಿಗೆ ಸೇರುವ ನಿರೀಕ್ಷೆಯಿದೆ.
ಇದನ್ನು ಓದಿ : ಕೇವಲ ರೂ.799ಕ್ಕೆ One Plus Nord wired earphone
ಇದನ್ನೂ ಓದಿ : Ghulam Nabi Azad : ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿ ರಾಹುಲ್ ಗಾಂಧಿಗಿಲ್ಲ:ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್ ಮೊದಲ ಪ್ರತಿಕ್ರಿಯೆ
Vijay Deverakonda attends India vs Pakistan match, says ‘interested in doing Virat Kohli biopic’