Ghulam Nabi Azad : ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿ ರಾಹುಲ್​ ಗಾಂಧಿಗಿಲ್ಲ:ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್​ ಮೊದಲ ಪ್ರತಿಕ್ರಿಯೆ

ದೆಹಲಿ : Ghulam Nabi Azad : ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್​ ಮೊಟ್ಟ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.ದೆಹಲಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನನ್ನನ್ನು ಬಲವಂತವಾಗಿ ನನ್ನ ಮನೆಯಿಂದ ಹೊರಹೋಗುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಗುಲಾಂ ನಬಿ ಆಜಾದ್​ 2021ರ ಆರಂಭದಲ್ಲಿ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಸುತ್ತ ನಡೆದ ಚರ್ಚೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಜಿ 23 ಗುಂಪಿಗೆ ಸೇರಿದಾಗಿನಿಂದ ಕಾಂಗ್ರೆಸ್​ ಪಕ್ಷವು ಅವರೊಂದಿಗೆ ಸಮಸ್ಯೆಯನ್ನು ಹೊಂದಿತ್ತು ಎಂದು ಹೇಳಿದ್ದಾರೆ.


ಮೋದಿ ಒಂದು ನೆಪ ಮಾತ್ರ. ಕಾಂಗ್ರೆಸ್​ನವರಿಗೆ ಜಿ 23 ಪತ್ರ ಬರೆದಾಗಿನಿಂದ ನನ್ನೊಂದಿಗೆ ಸಮಸ್ಯೆಯಿತ್ತು. ಯಾರಾದರೂ ನಮಗೆ ಪತ್ರ ಬರೆಯಬೇಕು. ತಮ್ಮ ಪ್ರಶ್ನಿಸಬೇಕು, ಈ ರೀತಿ ಯಾವುದು ಕಾಂಗ್ರೆಸ್​ನವರಿಗೆ ಬೇಕಾಗಿರಲಿಲ್ಲ. ಕಾಂಗ್ರೆಸ್​ನಲ್ಲಿ ಈವರೆಗೆ ಅದೆಷ್ಟೋ ಸಭೆಗಳು ನಡೆದಿಲ್ಲ. ಆದರೆ ಯಾವೊಂದು ಸಲಹೆಯನ್ನೂ ಕಾಂಗ್ರೆಸ್​ ಸ್ವೀಕರಿಸುತ್ತಿರಲಿಲ್ಲ ಎಂದು ಗುಲಾಂ ನಬಿ ಆಜಾದ್​ ಹೇಳಿದ್ದಾರೆ.


ಪಕ್ಷಕ್ಕಾಗಿ ರಕ್ತ ಕೊಟ್ಟಿದ್ದಕ್ಕೆ (ಜಿ 23) ಪತ್ರ ಬರೆದ 6 ದಿನ ಮೊದಲು ಮತ್ತು ನಂತರ ನಿದ್ದೆ ಮಾಡಿಲ್ಲ, ಇಂದು ಅಲ್ಲಿನ ಜನ ನಿಷ್ಪ್ರಯೋಜಕರಾಗಿದ್ದಾರೆ… ನಮ್ಮ ಬಗ್ಗೆಯೇ ಗೊತ್ತಿಲ್ಲದ ಇಂತಹ ವಕ್ತಾರರು ಕಾಂಗ್ರೆಸ್‌ಗೆ ಇರುವುದು ಬೇಸರ ತಂದಿದೆ. ..,” ಎಂದು ಬೇಸರ ವ್ಯಕ್ತಪಡಿಸಿದರು.


30 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಮೇಲೆ ನನಗಿದ್ದ ಗೌರವ, ಇಂದಿರಾ ಗಾಂಧಿ ಕುಟುಂಬದ ಮೇಲೂ ಇರುವ ಗೌರವ ಒಂದೇ ಆಗಿದೆ. ವೈಯಕ್ತಿಕವಾಗಿ ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ನಾವು ತುಂಬಾನೇ ಪ್ರಯತ್ನಿಸಿದೆವು. ಆದರೆ ರಾಹುಲ್​ಗೆ ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ |Reliance AGM 2022

ಇದನ್ನೂ ಓದಿ: ಕೇವಲ ರೂ.799ಕ್ಕೆ One Plus Nord wired earphone

Forced to leave my home; Rahul Gandhi not interested in becoming a successful leader: Ghulam Nabi Azad

Comments are closed.