ಕಾವೇರಿ ಹೋರಾಟಕ್ಕೆ (Cauvery Protest )ಕೈಜೋಡಿಸಿದ ಕನ್ನಡದ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (vijay raghavendra) ಕನ್ನಡಮ್ಮನಿಗೆ ನುಡಿನಮನ ಸಲ್ಲಿಸೋ ಮೂಲಕ ತಮ್ಮ ನೋವಿನ ನಡುವೆಯೂ ಭಾಷೆ ಹಾಗೂ ತಾಯ್ನೇಲಕ್ಕೆ ಗೌರವ ಸಲ್ಲಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ರೈತ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೇ ಸಿನಿಮಾ ಇಂಡಸ್ಟ್ರಿಯ ನಟ-ನಟಿಯರು ಕಾವೇರಿ ಹೋರಾಟ ಬೆಂಬಲಿಸಿ ಬೀದಿಗೆ ಇಳಿದಿದ್ದಾರೆ.
ಸಿನಿಮಾ ಮಂದಿ ಹೋರಾಟಗಳಿಗೆ ಕೈಜೋಡಿಸೋದಿಲ್ಲ ಎಂಬ ಆರೋಪದ ಮಧ್ಯೆಯೇ ಸ್ಯಾಂಡಲ್ ವುಡ್ ಮಂದಿ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ನೀರು ಹರಿಸೋದನ್ನು ವಿರೋಧಿಸಿ ಮಂಡ್ಯ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲೂ ಪ್ರತಿಭಟನೆ ಜೋರಾಗಿದೆ. ರಾಜ್ಯ ರಾಜಧಾನಿಯಲ್ಲಿ ಹಲವು ಸಂಘಟನೆ ಕಾರ್ಯಕರ್ತರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

ಈ ಮಧ್ಯೆ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಸಪ್ಟೆಂಬರ್ 29 ರಂದು ಬೆಂಗಳೂರು ಹಾಗೂ ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಈ ಕರೆಗೆ ಚಿತ್ರರಂಗ ಕೂಡ ಸ್ಪಂದಿಸಿದ್ದು, ಇಂದು ಬೆಂಗಳೂರಿನ ಫಿಲ್ಮ್ ಚೆಂಬರ್ ಪಕ್ಕದಲ್ಲಿರೋ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್ ನಿಂದ ಹೊರಬಿತ್ತು ಸಿಹಿಸುದ್ದಿ : ತೆರೆಗೆ ಬರಲಿದೆ ಕೆಜಿಎಫ್ 3
ಈ ವೇಳೆ ಚಿತ್ರರಂಗದ ಶಿವಣ್ಣ, ಧ್ರುವ ಸರ್ಜಾ,ವಶಿಷ್ಠ ಸಿಂಹ, ಪೂಜಾಗಾಂಧಿ, ಹಂಸಲೇಖ, ದರ್ಶನ್, ವಿಜಯ್ ರಾಘವೇಂದ್ರ, ಮುರುಳಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ತಮ್ಮ ದುಃಖದ ನಡುವಿನಲ್ಲೂ ವಿಜಯ್ ರಾಘವೇಂದ್ರ ಹೋರಾಟದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಈ ಮಧ್ಯೆ ಸಿನಿಮಾ ಹೋರಾಟದ ಬಳಿಕ ವಿಜಯ್ ರಾಘವೇಂದ್ರ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಕನ್ನಡ ಪ್ರೇಮ ಹಾಗೂ ಕಾವೇರಿಗೆ ಬೆಂಬಲಿಸುವ ಕೆಲಸ ಮಾಡಿದ್ದಾರೆ. ಸಿನಿಮಾ ರಂಗದ ಹೋರಾಟದ ಬಳಿಕ ಕನ್ನಡನಾಡಿನ ಜೀವನದಿ ಕಾವೇರಿ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ವಿಜಯ್ ರಾಘವೇಂದ್ರ ಕಾವೇರಿ ಕನ್ನಡಿಗರಿಗೆ ಎಷ್ಟು ಮುಖ್ಯ, ಕಾವೇರಿಯೊಂದಿಗೆ ಕನ್ನಡಿಗರ ಬಾಂಧವ್ಯ ಹೇಗಿದೆ ಎಂಬುದನ್ನು ವಿವರಿಸುವ ಪ್ರಯತ್ನ ಮಾಡಿದಂತಿದೆ.
ಇದನ್ನೂ ಓದಿ : ರಂಗಿತರಂಗ ಹೀರೋ ಗ್ರ್ಯಾಂಡ್ ರ್ರೀ ಎಂಟ್ರಿ: ದೂದ್ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ
ಸುಶ್ರಾವ್ಯವಾಗಿ ಕನ್ನಡನಾಡಿನ ಜೀವನದಿ ಹಾಡನ್ನು ಹಾಡಿರೋ ವಿಜಯ್ ರಾಘವೇಂದ್ರ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಸುಂದರ ಹಾಗೂ ಸುಶ್ರಾವ್ಯವಾಗಿ ಹಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ.

ಆದರೆ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾಗಲೂ ವಿಜಯ್ ರಾಘವೇಂದ್ರ ಮನಸ್ಸು, ಹೃದಯ ಕನ್ನಡ ನಾಡು-ನುಡಿ-ನೀರಿಗಾಗಿ ಮಿಡಿದಿದ್ದು ಅಭಿಮಾನಿಗಳನ ಮನತಟ್ಟುವಂತೆ ಮಾಡಿದೆ. ವಿಜಯ್ ರಾಘವೇಂದ್ರ್ ಶೇರ್ ಮಾಡಿರೋ ವಿಡಿಯೋಗೆ ಸಾವಿರಾರು ಜನರು ಲೈಕ್ಸ ಒತ್ತಿದ್ದಾರೆ.
ಇದನ್ನೂ ಓದಿ : ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್
ಕೇವಲ ನಾಡು –ನುಡಿಗಾಗಿ ಮಾತ್ರವಲ್ಲ ತಮ್ಮ ನೋವಿನ ನಡುವೆಯೂ ವಿಜಯ್ ರಾಘವೇಂದ್ರ ಹೊಸಬರ ಚಿತ್ರ ಕದ್ದಚಿತ್ರಕ್ಕೂ ಸ್ಪಂದಿಸಿದ್ದು, ಸಿನಿಮಾ ರಿಲೀಸ್ ಸೇರಿದಂತೆ ಹಲವು ಇವೆಂಟ್ ಗಳಲ್ಲಿ ಪಾಲ್ಗೊಂಡು ತಮ್ಮ ನೋವಿನ ನಡುವೆಯೂ ಕರ್ತವ್ಯಪರತೆ ಮೆರೆದಿದ್ದರು. ಈಗ ಕಾವೇರಿ ಹಾಡಿಗೆ ಧ್ವನಿಯಾಗಿ ತಮ್ಮ ಭಾಷಾಭಿಮಾನಕ್ಕೆಸಾಕ್ಷಿ ಒದಗಿಸಿದ್ದಾರೆ.
Vijay Raghavendra sings emotionally for Cauvery Protest