50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8

ಗೂಗಲ್‌ ನೆಕ್ಸ್ಟ್‌ ಜೆನ್‌ (Google Next Gen) ಸ್ಮಾರ್ಟ್‌ಪೋನ್‌ ಗಳಾದ ಪಿಕ್ಸೆಲ್‌ 8 (Google Pixel 8) ಮತ್ತು ಪಿಕ್ಸೆಲ್‌ 8 ಪ್ರೋ (Google Pixel 8 Pro) ಅನ್ನು ಬಿಡುಗಡೆ ಮಾಡಲು ಗೂಗಲ್‌ (Google ) ಸಿದ್ದತೆ ನಡೆಸಿದೆ. ಅಕ್ಟೋಬರ್‌ 4 ರಂದು ಗೂಗಲ್‌ ಎರಡು ಮಾದರಿಯ ಸ್ಮಾರ್ಟ್‌ಪೋನ್‌ (Smart Phone) ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

5G ಕ್ರಾಂತಿಯ ಬೆನ್ನಲ್ಲೇ ಮಾರುಕಟ್ಟೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್‌ ಪೋನ್‌ಗಳು ಗ್ರಾಹಕರ ಕೈ ಸೇರುತ್ತಿವೆ. ಇದೀಗ ಗೂಗಲ್‌ ಕೂಡ ತನ್ನ ಬಹು ನಿರೀಕ್ಷಿತ ಗೂಗಲ್‌ ಫಿಕ್ಸಲ್‌ 8 (Google Pixel 8) ಮೊಬೈಲ್‌ ಬಿಡುಗಡೆಗೆ ಸಜ್ಜಾಗಿದೆ. ಗೂಗಲ್‌ ನೆಕ್ಸ್ಟ್‌ ಜೆನ್‌ (Google Next Gen) ಸ್ಮಾರ್ಟ್‌ಪೋನ್‌ಗಳಾದ ಪಿಕ್ಸೆಲ್‌ 8 (Google Pixel 8) ಮತ್ತು ಪಿಕ್ಸೆಲ್‌ 8 ಪ್ರೋ (Google Pixel 8 Pro) ಅನ್ನು ಬಿಡುಗಡೆ ಮಾಡಲು ಗೂಗಲ್‌ (Google ) ಸಿದ್ದತೆ ನಡೆಸಿದೆ. ಅಕ್ಟೋಬರ್‌ 4 ರಂದು ಗೂಗಲ್‌ ಎರಡು ಮಾದರಿಯ ಸ್ಮಾರ್ಟ್‌ಪೋನ್‌ (Smart Phone) ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಗೂಗಲ್‌ ಪಿಕ್ಸೆಲ್‌ 8 (Google Pixel 8) ಮತ್ತು 8 ಪ್ರೊ (Google Pixel 8 pro)ಮೊಬೈಲ್‌ ಅಕ್ಟೋಬರ್‌ 4 ರಂದು ಬಿಡುಗಡೆ ಆಗಲಿದ್ದು, ಅಕ್ಟೋಬರ್‌ 5 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ (flipkart) ಮಾರಾಟಕ್ಕೆ ಲಭ್ಯವಿರಲಿದೆ. ಗ್ರಾಹಕರು ಭಾರತದಲ್ಲಿ ಬಿಡುಗಡೆ ಆದ ನಂತರ ಖರೀದಿಸಬಹುದಾಗಿದೆ.

50MP Camera 256 GB Ram Android 14 Technology Google Pixel 8 and Google piexl 8 pro Coming Soon
Image Credit to Original Source

ಈಗಾಗಲೇ ಗೂಗಲ್‌ ಪಿಕ್ಸೆಲ್‌ 7 (Google Pixel 7) ಹಾಗೂ 7 ಪ್ರೋ (Google Pixel 7 pro) ಸ್ಮಾರ್ಟ್‌ಪೋನ್‌ ಗಿಂತಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಹೊಸ ಗೂಗಲ್‌ ಪಿಕ್ಸೆಲ್‌ 8 ಮತ್ತು 8 ಪ್ರೊ ಮೊಬೈಲ್‌ನಲ್ಲಿ ನೀಡಲಾಗಿದೆ. ಗೊರಿಲ್ಲಾ ಗ್ಲಾಸ್‌ ಪ್ರೇಮ್‌ ಒಳಗೊಂಡಿದ್ದು, 6.2 ಇಂಚು ಡಿಸ್ಪ್ಲೈ ಹೊಂದಿದೆ.

ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್‌ ಖರೀದಿಸಿ : ಐಪೋನ್‌ 15 ಲಾಂಚ್‌ ಬೆನ್ನಲ್ಲೇ ಐಪೋನ್‌ 11ರ ಮೇಲೆ ಬಾರೀ ಡಿಸ್ಕೌಂಟ್‌

ಆಂಡ್ರಾಯ್ಡ್‌ 14 ರ (android 14) ತಂತ್ರಜ್ಞಾನವನ್ನು ಒಳಗೊಂಡಿದ್ದು, ನ್ಯಾನೋ (Nano Sim)  ಮತ್ತು ಇ ಸಿಮ್‌ (E-SIM) ಬಳಕೆ ಮಾಡಬಹುದಾಗಿದೆ. ಮೊಬೈಲ್‌ ಎರಡು ಶ್ರೇಣಿಗಳಲ್ಲಿದ್ದು, 128 ಜಿಬಿ (128 GB Ram) ಹಾಗೂ 256 ಜಿಬಿ ರಾಮ್‌ (256 GB Ram) ಹಾಗೂ 12 ಜಿಬಿ ರಾಮ್‌ ಯುಎಫ್‌ಎಸ್‌ 4.9 ಹೊಂದಿದೆ.

50MP Camera 256 GB Ram Android 14 Technology Google Pixel 8 and Google piexl 8 pro Coming Soon
Image Credit to Original Source

ಮೊಬೈಲ್‌ ಪ್ರಿಯರಿಗಾಗಿಯೇ 50ಎಪಿ (50MP) ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಪಿಗಾಗಿ 10.5ಎಂಪಿ (Selfy 10.5 MP) ಕ್ಯಾಮರಾ ಹೊಂದಿದೆ. ಇನ್ನು ಫಾಸ್ಟ್‌ ಚಾರ್ಜಿಂಗ್‌ (Fast Charging) ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗಿದೆ. ಪಿಕ್ಸೆಲ್‌ 8 4485 MAh ಬ್ಯಾಟರಿ ಮತ್ತು 24 ವೈಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದರೆ, ಗೂಗಲ್‌ ಪಿಕ್ಸೆಲ್‌ 8 ಪ್ರೊ 4950 MAh ಬ್ಯಾಟರಿ ಮತ್ತು 27 ಡಬ್ಲು ವೈಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದೆ.

ಇದನ್ನೂ ಓದಿ : ಗೂಗಲ್‌ಗೆ 25ನೇ ಹುಟ್ಟುಹಬ್ಬ : ಬ್ಯಾಕ್‌ ರಬ್‌ ಸಂಸ್ಥೆ ಗೂಗಲ್ ಆಗಿ ಬದಲಾಗಿದ್ದು ಹೇಗೆ ?

ಸದ್ಯದ ಮಾಹಿತಿಯ ಪ್ರಕಾರ ಗೂಗಲ್‌ ಪಿಕ್ಸೆಲ್‌ 699 ಡಾಲರ್‌ ಭಾರತದ ಮಾರುಕಟ್ಟೆಯ ಪ್ರಕಾರ 58000 ಹಾಗೂ ಗೂಗಲ್‌ ಪಿಕ್ಸೆಲ್ 8 pro 999‌ ಡಾಲರ್‌ ಅಂದ್ರೆ 83000 ರೂ.ಕ್ಕಿಂತಲೂ ಅಧಿಕ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇತರ ಸ್ಮಾರ್ಟ್‌ ಪೋನ್‌ಗಳಿಗೆ ಗೂಗಲ್‌ ಪಿಕ್ಸಲ್‌ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ. ಗ್ರಾಹಕರು ಕೂಡ ಗೂಗಲ್‌ನ ಹೊಸ ಮಾದರಿಯ ಸ್ಮಾರ್ಟ್‌ಪೋನ್‌ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಗೂಗಲ್‌ ಪಿಕ್ಸಲ್‌ ೮ ಮತ್ತು ಗೂಗಲ್‌ ಪಿಕ್ಸಲ್‌ ೮ ಪ್ರೋ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಹುತೇಕ ಗ್ರಾಹಕರು ಮೊಬೈಲ್‌ ಬಿಡುಗಡೆಗಾಗಿ ಕಾದು ಕುಳಿತಿದಿದ್ದಾರೆ.

ಇದನ್ನೂ ಓದಿ : ಜಿಯೋ ಡೇಟಾ ಪ್ಯಾಕ್ : ಅತೀ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ, ಅನಿಯಮಿತ ಕರೆ

50MP Camera 256 GB Ram Android 14 Technology Google Pixel 8 and Google piexl 8 pro Coming Soon

Comments are closed.