KMF BEMUL Recruitment : ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಉದ್ಯೋಗಾವಕಾಶ, 90 ಸಾವಿರಕ್ಕೂ ಅಧಿಕ ವೇತನ

ಕೆಎಮ್‌ಎಫ್‌ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ (KMF BEMUL Recruitment) ಅಧಿಕೃತ ಅಧಿಸೂಚನೆಯ ಆಗಸ್ಟ್ 2023ರ ಮೂಲಕ ವಿಸ್ತರಣಾಧಿಕಾರಿ, ಜೂನಿಯರ್ ತಂತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಈ ಹುದ್ದೆಗಳಿಗೆ ಅಗತ್ಯವಿರುವ ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಅನುಭವ ಸೇರಿದಂತೆ ಎಲ್ಲಾ ಅರ್ಹತಾ ಷರತ್ತುಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಕೆಎಮ್‌ಎಫ್‌ ಬಿಇಎಮ್‌ಯುಎಲ್‌ ಖಾಲಿ ಹುದ್ದೆಯ ಅಧಿಸೂಚನೆಯ ಸಂಪೂರ್ಣ ವಿವರ
ಸಂಸ್ಥೆಯ ಹೆಸರು‌ : ಕೆಎಮ್‌ಎಫ್ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF BEMUL)
ಹುದ್ದೆಗಳ ಸಂಖ್ಯೆ : 46 ಹುದ್ದೆಗಳು
ಉದ್ಯೋಗ ಸ್ಥಳ : ಬೆಳಗಾವಿ
ಹುದ್ದೆಯ ಹೆಸರು : ವಿಸ್ತರಣೆ ಅಧಿಕಾರಿ, ಕಿರಿಯ ತಂತ್ರಜ್ಞರು
ವೇತನ : ರೂ.21400-97100/- ಪ್ರತಿ ತಿಂಗಳು

ಕೆಎಮ್‌ಎಫ್‌ ಬಿಇಎಮ್‌ಯುಎಲ್‌ ಹುದ್ದೆಗಳ ಹುದ್ದೆವಾರು ವಿವರ :

 • ಸಹಾಯಕ ವ್ಯವಸ್ಥಾಪಕ : 3 ಹುದ್ದೆಗಳು
 • ತಾಂತ್ರಿಕ ಅಧಿಕಾರಿ : 7 ಹುದ್ದೆಗಳು
 • ವಿಸ್ತರಣಾ ಅಧಿಕಾರಿ ಗ್ರೇಡ್-III : 10 ಹುದ್ದೆಗಳು
 • ಆಡಳಿತ ಸಹಾಯಕ ಗ್ರೇಡ್-II : 5 ಹುದ್ದೆಗಳು
 • ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II : 5 ಹುದ್ದೆಗಳು
 • ಮಾರ್ಕೆಟಿಂಗ್ ಸಹಾಯಕ ಗ್ರೇಡ್-II : 2 ಹುದ್ದೆಗಳು
 • ರಸಾಯನಶಾಸ್ತ್ರಜ್ಞ ಗ್ರೇಡ್-II : 4 ಹುದ್ದೆಗಳು
 • ಜೂನಿಯರ್ ಸಿಸ್ಟಮ್ ಆಪರೇಟರ್ : 1 ಹುದ್ದೆ
 • ಕಿರಿಯ ತಂತ್ರಜ್ಞರು : 9 ಹುದ್ದೆಗಳು

ಶೈಕ್ಷಣಿಕ ಅರ್ಹತೆ :
ಕೆಎಮ್‌ಎಫ್‌ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಇಲಾಖೆ ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ :
ಕೆಎಮ್‌ಎಫ್‌ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು KMF BEMUL ನಿಯಮಗಳ ಪ್ರಕಾರ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ಕೆಎಂಎಫ್ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:
ಕೆಎಮ್‌ಎಫ್‌ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದನ್ನೂ ಓದಿ : NMPT Recruitment 2023 : ನವ ಮಂಗಳೂರು ಬಂದರಲ್ಲಿ ಉದ್ಯೋಗಾವಕಾಶ : 60 ಸಾವಿರ ರೂ. ವೇತನ

ಕೆಎಮ್‌ಎಫ್‌ ಬಿಇಎಮ್‌ಯುಎಲ್‌ ಹುದ್ದೆಗಳ ಹುದ್ದೆವಾರು ಸಂಬಳ (ತಿಂಗಳಿಗೆ) ವಿವರ :

 • ಸಹಾಯಕ ವ್ಯವಸ್ಥಾಪಕರು : ರೂ.52650-97100/-
 • ತಾಂತ್ರಿಕ ಅಧಿಕಾರಿ : ರೂ.43100-83900/-
 • ವಿಸ್ತರಣಾಧಿಕಾರಿ ಗ್ರೇಡ್-III : ರೂ.33450-62600/-
 • ಆಡಳಿತ ಸಹಾಯಕ ಗ್ರೇಡ್-II : ರೂ.27650-52650
 • ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II : ರೂ.27650-52650
 • ಮಾರ್ಕೆಟಿಂಗ್ ಸಹಾಯಕ ಗ್ರೇಡ್-II : ರೂ.27650-52650
 • ರಸಾಯನಶಾಸ್ತ್ರಜ್ಞ ಗ್ರೇಡ್-II : ರೂ.27650-52650
 • ಜೂನಿಯರ್ ಸಿಸ್ಟಮ್ ಆಪರೇಟರ್ : ರೂ.27650-52650
 • ಕಿರಿಯ ತಂತ್ರಜ್ಞರು ರೂ.21400-42000/-

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28 ಸೆಪ್ಟೆಂಬರ್‌ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಸೆಪ್ಟೆಂಬರ್‌ 2023

KMF BEMUL Recruitment : Job Vacancy in District Cooperative Milk Producers Association, Salary 90 thousand more

Comments are closed.