Vikram Vedha:ಪುಷ್ಕರ್ ಗಾಯತ್ರಿ ನಿರ್ದೇಶನದ ವಿಕ್ರಮ್ ವೇದ ಸೆಪ್ಟೆಂಬರ್ 30ರಂದು ಬೆಳ್ಳಿ ಪರದೆ ಮೇಲೆ ರಿಲೀಸ್ ಆಗಿದೆ. ವಿಕ್ರಮ್ ವೇದ ಮೂಲತಃ ತಮಿಳು ಸಿನಿಮಾದ ರಿಮೇಕ್ ಆಗಿದೆ. ತಮಿಳು ಭಾಷೆಯಲ್ಲಿಯೂ ಈ ಸಿನಿಮಾ ವಿಕ್ರಮ್ ವೇದ ಹೆಸರಿನಲ್ಲಿಯೇ ತೆರೆ ಕಂಡಿತ್ತು. ಬಾಲಿವುಡ್ನ ವಿಕ್ರಮ್ ವೇದ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ನಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ಸೋಲುತ್ತಿರುವ ಬೆನ್ನಲ್ಲೇ ವಿಕ್ರಮ್ ವೇದ ಬಾಲಿವುಡ್ಗೆ ಹೊಸ ಗೆಲುವನ್ನು ತಂದುಕೊಡಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ವಾರಾಂತ್ಯದಲ್ಲಿ ವಿಕ್ರಮ್ ವೇದ ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ.
ವಿಕ್ರಂ ವೇದ ಸಿನಿಮಾ ಹಿಂದಿ ಸಿನಿಮಾ ವಿಮರ್ಷನೆಕಾರರಿಂದ ಉತ್ತಮ ವಿಮರ್ಷೆಯನ್ನೇನೋ ಪಡೆದುಕೊಂಡಿದೆ. ಆದರೆ ಸಿನಿಮಾ ರಿಲೀಸ್ಗೊಂಡು ಒಂದು ವಾರದಲ್ಲಿ ಹೇಗೋ ತೆವಳುತ್ತಾ 50 ಕೋಟಿ ಕ್ಲಬ್ ಸೇರಿದೆ.ವಿಕ್ರಮ್ ವೇದಾ ತೆರೆಕಂಡ ಎರಡನೇ ಶುಕ್ರವಾರದ ವೇಳೆ ಸುಮಾರು 2.50 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಒಟ್ಟು ಎಂಟು ದಿನಗಳ ಕಲೆಕ್ಷನ್ 61 ಕೋಟಿ ರೂಪಾಯಿಯಾಗಿದೆ. ವೀಕೇಂಡ್ ಬೇರೆ ಇರೋದ್ರಿಂದ ರವಿವಾರದ ಅಂತ್ಯದ ವೇಳೆಗೆ 6 ರಿಂದ 8 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಇದೇ ದಿನ ರಿಲೀಸ್ ಆಗಿರುವ ಮಣಿರತ್ನಂರ ಪೊನ್ನಿಯನ್ ಸೆಲ್ವನ್ : ಐ ಚಿತ್ರವು ವಿಕ್ರಮ್ ವೇದಕ್ಕೆ ಪ್ರಬಲ ಸ್ಪರ್ಧೆಯನ್ನು ಎದುರಿಸಿದೆ. ಮಣಿರತ್ನಂರ ಈ ಸಿನಿಮಾವು ವಿಶ್ವಾದ್ಯಂತ 300 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಹೃತಿಕ್ ರೋಷನ್ ತಮ್ಮ ಸಿನಿಮಾ ಜೀವನದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಇಂತಹದ್ದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಟ್ವಿಟರ್ನಲ್ಲಿ ಹೃತಿಕ್ ರೋಷನ್ ಸಿನಿಮಾ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ವೇದದ ಒಂದು ಭಾಗವು ಎಂದಿಗೂ ನನ್ನೊಡನೆ ಇರಲಿದೆ ಎಂದು ಹೇಳಿಕೊಂಡಿದ್ದರು.
ಇದನ್ನು ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್
ಇದನ್ನೂ ಓದಿ : Women’s Asia Cup 2022 : ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡ ಭಾರತದ ವನಿತೆಯರು
Vikram Vedha Box Office Day 8: Hrithik Roshan and Saif Ali Khan’s film fails to hold up on second Friday