karnataka education department : ಶಾಲಾ ಪಠ್ಯದಿಂದ ಭಗತ್​ ಸಿಂಗ್​ ಪಾಠಕ್ಕೆ ಕೊಕ್ : ಶಿಕ್ಷಣ ಇಲಾಖೆ ಕ್ರಮಕ್ಕೆ ವ್ಯಾಪಕ ವಿರೋಧ

ಬೆಂಗಳೂರು : karnataka education department : ಕೊರೊನಾ ವೈರಸ್​ನ ರಗಳೆಗಳೆಲ್ಲ ಮುಗಿದು ವಿದ್ಯಾರ್ಥಿಗಳಿಗೆ ಆಫ್​ಲೈನ್​ ತರಗತಿಗಳು ಆರಂಭವಾದಾಗಿನಿಂದ ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದಗಳು ನಡೆಯುತ್ತಲೇ ಇದೆ. ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದಾಗಿನಿಂದ ರಾಜ್ಯ ಶಿಕ್ಷಣ ಇಲಾಖೆಯು ಸಾಕಷ್ಟು ವಿರೋಧಗಳನ್ನು ಎದುರಿಸುತ್ತಲೇ ಇದೆ. ಆದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಶಿಕ್ಷಣ ಇಲಾಖೆಯು ತನಗೆ ಎನಿಸಿದ ಬದಲಾವಣೆಗಳನ್ನು ಪಠ್ಯದಲ್ಲಿ ಮಾಡುತ್ತಲೇ ಬಂದಿದೆ. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಶಿಕ್ಷಣ ಇಲಾಖೆಯು ಭಗತ್​ ಸಿಂಗ್​ ಕುರಿತಾದ ಪಠ್ಯಕ್ಕೂ ತಿಲಾಂಜಲಿ ನೀಡಿದೆ. ಈ ಮೂಲಕ ರಾಜ್ಯ ಶಿಕ್ಷಣ ಇಲಾಖೆಯು ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದೆ.


ಈ ಹಿಂದೆ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿಯೂ ಶಿಕ್ಷಣ ಇಲಾಖೆಯು ಭಗತ್​ ಸಿಂಗ್​ರ ಕುರಿತಾದ ಪಠ್ಯವನ್ನು ಕೈ ಬಿಟ್ಟಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಈ ವಿವಾದಕ್ಕೆ ತೇಪೆ ಹಚ್ಚಿದ ಶಿಕ್ಷಣ ಇಲಾಖೆ ಭಗತ್​ ಸಿಂಗ್​ ಕುರಿತಾದ ಪಾಠವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಆದರೆ ಇದೀಗ ಎಸ್​ಎಸ್​ಎಲ್​ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಭಗತ್​ ಸಿಂಗ್​ ಪಾಠ ಮಾಯವಾಗಿದ್ದು ಭಗತ್​ ಸಿಂಗ್​ ಪಠ್ಯವನ್ನು ಭೋದಿಸದಂತೆ ಸುತ್ತೋಲೆ ಪ್ರಕಟಿಸಿದೆ. ರಾಜ್ಯ ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಲೇಖಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.


ಶಿಕ್ಷಣ ಇಲಾಖೆಯ ಈ ಕ್ರಮದ ವಿರುದ್ಧ ಮಾತನಾಡಿದ ಶಿಕ್ಷಣ ತಜ್ಞ ಹಾಗೂ ಲೇಖಕ ಜಿ. ರಾಮಕೃಷ್ಣ ನಾನು ಇಂದಿಗೂ ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿರೋಧಿಸುತ್ತೇನೆ. ನಾನು ಪ್ರೋತ್ಸಾಹಧನದ ಆಸೆಗಾಗಿ ಭಗತ್​ ಸಿಂಗ್​ರ ಪಾಠಕ್ಕೆ ಹಕ್ಕು ನೀಡಿರಲಿಲ್ಲ. ಆದರೆ ಇದೀಗ ಎಸ್​ಎಸ್​ಎಲ್​ಸಿ ಪಠ್ಯದಿಂದ ಭಗತ್​ ಸಿಂಗ್​ರ ಪಠ್ಯಕ್ಕೆ ಕೊಕ್​ ನೀಡಿರೋದನ್ನು ನೋಡ್ತಿದ್ರೆ ಶಿಕ್ಷಣ ಸಚಿವರ ಉದ್ದೇಶವೇನು ಅನ್ನೋದು ಇಲ್ಲೇ ಸ್ಪಷ್ಟವಾಗುತ್ತೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.


ಅದೇನೋ ಗೊತ್ತಿಲ್ಲ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಒಂದಿಲ್ಲೊಂದು ವಿವಾದದ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಮತ್ತೊಂದು ಸೇರ್ಪಡೆ ಎಂಬಂತೆ ಭಗತ್​ ಸಿಂಗ್​ ಪಠ್ಯಕ್ಕೆ ಕೊಕ್​ ನೀಡುರುವುದು ಕೂಡ ವಿವಾದಕ್ಕೆ ಗ್ರಾಸವಾಗಿದ್ದು ಈ ಪರಿಸ್ಥಿತಿಯನ್ನು ರಾಜ್ಯ ಶಿಕ್ಷಣ ಇಲಾಖೆ ಹಾಗೂ ಸಚಿವರು ಯಾವ ರೀತಿ ನಿಭಾಯಿಸ್ತಾರೆ ಅನ್ನೋದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ಇದನ್ನು ಓದಿ : Weather Report : ಕರ್ನಾಟಕದಲ್ಲಿ 3 ಬಾರೀ ಮಳೆ : ಇಂದು ಯೆಲ್ಲೋ ಅಲರ್ಟ್

ಇದನ್ನೂ ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

karnataka education department dropped lesson on bhagat singh from school text book

Comments are closed.