Anna Rajan : ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ

ಕೇರಳ : ಖ್ಯಾತ ಮಲಯಾಳಂ ನಟಿ ಅನ್ನಾ ರಾಜನ್‌(Anna Rajan) ಅವರನ್ನು ಖಾಸಗಿ ಟೆಲಿಕಾಂ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಶೋ ರೂಮ್‌ನಲ್ಲಿ ಕೂಡಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.

ಅನ್ನಾ ರಾಜನ್‌ (Anna Rajan)ಡೂಪ್ಲಿಕೇಟ್‌ ಸಿಮ್‌ ಖರೀದಿಸಲು ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಅಲುವಾ ಪೊಲೀಸ್‌ ಠಾಣೆಯಲ್ಲಿ ನಟಿ ದೂರನ್ನು ದಾಖಲಿಸಿದ್ದಾರೆ. ಡೂಪ್ಲಿಕೇಟ್‌ ಸಿಮ್‌ ಖರೀದಿಗೆಂದು ಶೋ ರೂಮ್‌ಗೆ ಹೋದಾಗ ಅಲ್ಲಿನ ಉದ್ಯೋಗಿಯೊಬ್ಬ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.ಅಲ್ಲದೇ ಅವರು ಶೋ ರೂಂನ ಶಟರ್‌ ಎಳೆದು ನನ್ನನ್ನು ಕೂಡಿ ಹಾಕಿದ್ದಾರೆ.ಈ ವೇಳೆಯಲ್ಲಿ ನಾನು ಪ್ರಶ್ನಿಸಿದಾಗ ಬೆದರಿಕೆಯೊಡ್ಡಿದ್ದಾರೆ ಎಂದು ಅನ್ನಾ ರಾಜನ್‌ ದೂರಿನಲ್ಲಿ ದಾಖಲಿಸಿದ್ದಾರೆ.

ನಟಿ ನೀಡಿದ ದೂರಿನ ಮೇಲೆ ಅಲುವಾ ಪೊಲೀಸ್‌ ಠಾಣೆಗೆ ಟೆಲಿಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು.ಠಾಣೆಗೆ ಹಾಜರಾದ ಟೆಲಿಕಾಂ ಸಿಬ್ಬಂದಿ ನಟಿ ಅನ್ನಾ ರಾಜನ್‌ನ್ನು ಕ್ಷಮೆ ಕೇಳಿದ್ದಾನೆ. ಆತನ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಟಿ ಆ ಪ್ರಕರಣವನ್ನು ಕೈ ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ನಡೆದ ಪ್ರಕರಣವು ಇತ್ಯರ್ಥವಾದ ಮೇಲೆ ಬೆಳಕಿಗೆ ಬಂದಿರುವುದಾಗಿದೆ. ಟೆಲಿಕಾಂ ಉದ್ಯೋಗಿಯು ಅನುಚಿತವಾಗಿ ನಡೆದುಕೊಂಡಿದ್ದರೂ ಕೂಡ ಅವನ ಭವಿಷ್ಯದ ದೃಷ್ಟಿಯಲ್ಲಿ ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಟಿ ಅನ್ನಾ ರಾಜನ್‌ ನಿರಾಕರಿಸಿದ್ದಾರೆ.

ಇದನ್ನೂ ಓದಿ : Vikram Vedha:ಬಾಕ್ಸಾಫೀಸ್​ ಕಲೆಕ್ಷನ್​​ನಲ್ಲಿ ನೀರಸ ಪ್ರತಿಕ್ರಿಯೆ ತೋರಿದ ವಿಕ್ರಮ್​ ವೇದ : ವಾರದ ಕೊನೆಯಲ್ಲಿ 50 ಕೋಟಿ ರೂ. ಗಳಿಕೆ

ಇದನ್ನೂ ಓದಿ : Galipata – 2 : ಜೀ5 ಒಟಿಟಿಯಲ್ಲಿ 48ಗಂಟೆಯಲ್ಲೇ ಹೊಸ ದಾಖಲೆ ಬರೆದ ಗಾಳಿಪಟ-2 ಒಟಿಟಿಯಲ್ಲೂ ಕಮಾಲ್ ಮಾಡಿದ ಗಣಿ ಅಂಡ್ ಭಟ್ರ ಕಾಂಬಿನೇಶನ್

ಇದನ್ನೂ ಓದಿ : Rashmika Mandanna – Vijay Devarakonda : ಒಂದೇ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ

ನಟಿ ಅನ್ನಾ ರಾಜನ್‌ ಮಲಯಾಳಂನಲ್ಲಿ ಸೂಪರ್‌ ಹಿಟ್‌ ಸಿನಿಮಾ “ಅಂಗಮಾಲಿ ಡೈರೀಸ್”‌ ಮೂಲಕ ಚಿತ್ರರಂಗಕ್ಕೆ ಪಾದರ್ಪಾಣೆ ಮಾಡಿದ್ದಾರೆ. ನಂತರದ ದಿನಗಳಲ್ಲಿ ಮೋಹಾನ್‌ ಲಾಲ್‌ ಜೊತೆ “ವೆಲ್ಲಿಪಡತ್ತಿಂಡೆ”, ಮಮ್ಮುಟಿ ಜೊತೆ “ಮಧುರ ರಾಜ”, ಹಾಗೂ “ಅಯ್ಯಪ್ಪನುಂ ಕೊಶಿಯುಂ” ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ “ಇಡುಕ್ಕಿ ಬ್ಲಾಸ್ಟರ್ಸ್‌” ಮತ್ತು “ತಲನಾರಿಝಾ” ಸಿನಿಮಾಗಳಲ್ಲಿ ಅನ್ನಾ ರಾಜನ್‌ ಬಣ್ಣ ಹಚ್ಚಲಿದ್ದಾರೆ.‌

Actress Anna Rajan, who went to buy a SIM, was cornered by the staff in the showroom

Comments are closed.