ಕೊರೋನಾದಿಂದ ತಣ್ಣಗಿದ್ದ ಚಂದನವನದಲ್ಲಿ ಸದ್ಯ ಹೊಸ ಹೊಸ ಸುದ್ದಿಗಳು, ಸಿನಿಮಾಗಳು ಸದ್ದು ಮಾಡುತ್ತಿವೆ. ನಿನ್ನೆಯಷ್ಟೇ ಸಿನಿಮಾದ ಡೆವಲಪ್ಮೆಂಟ್ ಬಗ್ಗೆ ರೂಟ್ ಮ್ಯಾಪ್ ರಿಲೀಸ್ ಮಾಡಿದ್ದ ವಿಕ್ರಾಂತ್ ರೋಣ್ (Vikrant Rona) ಚಿತ್ರತಂಡದಿಂದ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದ್ದು ನಟ ಸುದೀಪ್ (Kichcha Sudeep)ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಅಭಿಮಾನಿಗಳ ಕುತೂಹಲಕ್ಕೆ ಉತ್ತರವಾಗಿ ತೆರೆಗೆ ಬರೋ ದಿನಾಂಕವನ್ನು ಬಹಿರಂಗಗೊಳಿಸಿದೆ. ಇದರ ಜೊತೆಗೆ ಪ್ರತಿನಿತ್ಯ ಒಂದಿಲ್ಲೊಂದು ಅಪ್ಡೇಟ್ ನೀಡ್ತಿರೋ ಚಿತ್ರತಂಡ ಈಗ ಸುದೀಪ್ ಅಭಿಮಾನಿಗಳಿಗೊಂದು ಸಿಹಿಸುದ್ದಿನೀಡಿದೆ.

ಹೌದು ಸುದೀಪ್ ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾದ ಇಂಗ್ಲೀಷ ಅವತರಣಿಕೆಯಲ್ಲೂ ನಾಯಕನ ಪಾತ್ರಕ್ಕೆ ಸುದೀಪ್ ಕಂಚಿನ ಕಂಠವನ್ನು ಕೇಳಬಹುದು. ಹೌದು ವಿಕ್ರಾಂತ್ ರೋಣ ಇಂಗ್ಲೀಷ್ ಸಿನಿಮಾಕ್ಕೂ ಸ್ವತಃ ಸುದೀಪ್ ವಾಯ್ಸ್ ನೀಡಿದ್ದಾರೆ. ಸುದೀಪ್ ಇಂಗ್ಲೀಷ್ ಡಬ್ಬಿಂಗ್ ಮಾಡಿರೋ ಸಂಗತಿಯನ್ನು ಸಿನಿಮಾದ ನಿರ್ದೇಶಕ ನಿರೂಪ್ ಭಂಡಾರಿ ಹಂಚಿಕೊಂಡಿದ್ದಾರೆ.

ಕನ್ನಡದ ಮೊದಲ ಸೂಪರ್ ಸ್ಟಾರ್ ಇಂಗ್ಲೀಷ್ ನಲ್ಲಿ ಡಬ್ ಮಾಡಿದ್ದಾರೆ. ಇಂಗ್ಲಿಷ್ ನಲ್ಲಿ ಡಬ್ ಮಾಡೋ ಸಾಮರ್ಥ್ಯ ಹೊಂದಿರೋ ಭಾರತದ ಕೆಲವೇ ಕೆಲವು ಸ್ಟಾರ್ ಗಳಲ್ಲಿ ಕಿಚ್ಚ ಸುದೀಪ್ ಸರ್ ಕೂಡಾ ಒಬ್ಬರು ಎಂದು ನಿರೂಪ್ ಭಂಡಾರಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲ ಸುದೀಪ್ ಖಡಕ್ ವಾಯ್ಸ್ ನಲ್ಲಿ ಇಂಗ್ಲೀಷ್ ಡಬ್ ಮಾಡಿದ ಚಿಕ್ಕ ಸೀನ್ ವೊಂದನ್ನು ವಿಡಿಯೋದಲ್ಲಿ ಶೇರ್ ಮಾಡಲಾಗಿದೆ. ಕೇವಲ ಇಂಗ್ಲೀಷ್ ಮಾತ್ರವಲ್ಲ, ಹಿಂದಿ,ತ ಮಿಳು, ತೆಲುಗಿನಲ್ಲೂ ಸುದೀಪ್ ಡಬ್ ಮಾಡಿದ್ದಾರೆ.

ಎಲ್ಲ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಪ್ರಮೋಶನ್ ಎಲ್ಲವೂ ಸೇರಿ ಈ ಸಿನಿಮಾ 100 ಕೋಟಿ ಬಜೆಟ್ ದಾಟಿದೆ ಎನ್ನಲಾಗಿದ್ದು, ಜಾಕ್ ಮಂಜು ಸಿನಿಮಾ ನಿರ್ಮಿಸಿದ್ದಾರೆ. ನಟಿ ಜಾಕ್ವಲಿನ್ ಫರ್ನಾಂಡೀಸ್ ಈ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ. ಗಂಡಗ್ ರಕ್ಕಮ್ಮನಾಗಿ ಜಾಕ್ವಲಿನ್ ಐಟಂ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
#VikrantRonaInEnglish @KicchaSudeep sir completes dubbing for the English version. First Kannada superstar & one of the few from India to dub for a full fledged commercial movie in English #VikrantRоna pic.twitter.com/xXAvJgAmts
— Anup Bhandari (@anupsbhandari) March 2, 2022
ಮಾತ್ರವಲ್ಲ ಸಿನಿಮಾ ಮೇಕಿಂಗ್ ಗೆ ಮನಸೋತು ಸಿನಿಮಾದ ವಿಶೇಷ ಪಾತ್ರವೊಂದಕ್ಕೆ ಜಾಕ್ವಲಿನ್ ಬಣ್ಣ ಹಚ್ಚಿದ್ದಾರೆ.ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತವಿದೆ. ಸದ್ಯ ಸಿನಿಮಾ ರಿಲೀಸ್ ಗೆ ಕಾದಿರೋ ಅಭಿಮಾನಿಗಳಿಗೆ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು ಸುದೀಪ್ ಇಂಗ್ಲೀಷ್ ಡೈಲಾಗ್ ಕೇಳೋಕೆ ಕಾತರರಾಗಿದ್ದಾರೆ.
ಇದನ್ನೂ ಓದಿ : KGF Chapter 2 Yash : ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್ : ಮಾರ್ಚ್ 27 ಕ್ಕೆ ಕೆಜಿಎಫ್-2 ಟ್ರೇಲರ್ ರಿಲೀಸ್
ಇದನ್ನೂ ಓದಿ : Disha Madan : ಹೆರಿಗೆ ನೋವಿನಲ್ಲೂ ಕಾರ್ ಡ್ರೈವ್ ಮಾಡಿ ಆಸ್ಪತ್ರೆ ಸೇರಿದ ನಟಿ ದಿಶಾ ಮದನ್
( Vikrant Rona Kichcha Sudeep becomes the first Kannada actor to dub for a film in English )