Karnataka Budget 2022 : ರಾಜ್ಯ ಬಜೆಟ್ ನೂರು ನಿರೀಕ್ಷೆ, ಸಿಎಂ ಬೊಮ್ಮಾಯಿಗೆ ಮೊದಲ ಅಗ್ನಿಪರೀಕ್ಷೆ

ಬೆಂಗಳೂರು : ಸಿಎಂ ಸ್ಥಾನದ ಜೊತೆ ಹಣಕಾಸು ಹಾಗೂ ನಗರಾಭಿವೃದ್ಧಿ ಖಾತೆಯನ್ನು ಉಳಿಸಿಕೊಂಡಿರೋ ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ ಶುಕ್ರವಾರ (Karnataka Budget 2022 ) ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ, ರಾಜ್ಯ ರಾಜಧಾನಿ ಬಿಬಿಎಂಪಿ ಚುನಾವಣೆ ಹಾಗೂ ಕೊರೋನೋತ್ತರ ಸಂಘರ್ಷಗಳ ಕಾರಣಕ್ಕೆ 2022-23 ನೇ ಸಾಲಿನ ರಾಜ್ಯ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದು, ಕಾರ್ಮಿಕ ವರ್ಗದಿಂದ ಆರಂಭಿಸಿ ಸರ್ಕಾರಿ ನೌಕರರ ವರೆಗೆ ಎಲ್ಲಾ ವರ್ಗದ ಜನರೂ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಸರ್ಕಾರದತ್ತ ದೃಷ್ಟಿ ನೆಟ್ಟಿದ್ದಾರೆ.

ಬೆಂಗಳೂರು ವಿಚಾರಕ್ಕೆ ಬರೋದಾದರೇ ರಾಜಧಾನಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಹಾಗೂ ಸಬ್ ಅರ್ಬನ್ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ನೀಡುವ ನಿರೀಕ್ಷೆ ಇದೆ. ಇದಲ್ಲದೇ ಬೆಂಗಳೂರಿನ ಒಟ್ಟು 6.16 ಲಕ್ಷ ಬಿ ಖಾತೆ ಪಾಪರ್ಟಿಗಳಿದ್ದು ಇವುಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಪ್ರಸ್ತಾಪ ಸರ್ಕಾರದ ಮುಂದೇ ಇದೆ. ಇದನ್ನು ಸರ್ಕಾರ ಬಜೆಟ್ (Karnataka Budget 2022) ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಇದಲ್ಲದೇ ವೈಟ್ ಟ್ಯಾಪಿಂಗ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಮೂಲಕ ಬೆಂಗಳೂರಿನ ಚುನಾವಣೆಯಲ್ಲಿ ಮತಗಳಿಸುವ ಲೆಕ್ಕಾಚಾರ ಸರ್ಕಾರಕ್ಕಿದೆ.

ಇದನ್ನು ಹೊರತುಪಡಿಸಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಯೋಜನೆ ಘೋಷಿಸುವ ಸಾಧ್ಯತೆ ಇದ್ದು, ಅಂಜನಾದ್ರಿ ಅಭಿವೃದ್ಧಿ ಯೋಜನೆ, ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ,ಹುಬ್ಬಳ್ಳಿ ಗೆ ಜಯದೇವ ಆಸ್ಪತ್ರೆ ಘಟಕ, ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಹಾಗೂ ಕೊಡುಗೆಗಳನ್ನು ಘೋಷಿಸುವ ನಿರೀಕ್ಷೆ ಇದೆ‌. ಇನ್ನು ಈ ಬಜೆಟ್ ನಿಂದ ರಾಜ್ಯದ ಸಾಲವೂ ಹೆಚ್ಚುವ ನಿರೀಕ್ಷೆ ಇದ್ದು, ರಾಜ್ಯದ ಸಾಲ ಪ್ರಸ್ತುತ ವರ್ಷದ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂಪಾಯಿಗಳಷ್ಟಿದ್ದು, ಇದು ಈ ಸಾಲಿನ ಬಜೆಟ್ (Karnataka Budget 2022) ಬಳಿಕ 5 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.

ಕೊರೋನಾ ಕಾರಣಕ್ಕೆ ಜನರು ಆರ್ಥಿಕ ಹೊರೆಯನ್ನು ಈಗಾಗಲೇ ಹೊತ್ತಿದ್ದು, ಹೊಸ ತೆರಿಗೆಗಳಿಂದ ಮುಕ್ತವಾದ ಬಜೆಟ್ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಶಾಸಕರು ಕ್ಷೇತ್ರಕ್ಕಾಗಿ ಭಾರಿ ಮೊತ್ತದ ಅನುದಾನ ಕೇಳಿದ್ದಾರೆ. ಹೀಗಾಗಿ ಬಜೆಟ್ ಮೇಲೆ‌ಬೆಟ್ಟದಷ್ಟು ನಿರೀಕ್ಷೆ ಮೂಡಿದ್ದು, ಸಿಎಂ ಲೆಕ್ಕ ಯಾರ್ಯಾರಿಗೆ ಸಮಾಧಾನ ತರುತ್ತೆ ಅನ್ನೋ ಕುತೂಹಲ ಮೂಡಿದೆ.

ಇದನ್ನೂ ಓದಿ : HDK NEET Tweet War : ನವೀನ್ ಸಾವು ಪ್ರಕರಣ : ನೀಟ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ

ಇದನ್ನೂ ಓದಿ : Eshwarappa vs Hariprasad : ಬಿ.ಕೆ. ಹರಿಪ್ರಸಾದ್‌ಗೆ ತಾಕತ್ತಿದ್ದರೆ ತಾಲೂಕು ಪಂಚಾಯತ್‌ ಚುನಾವಣೆ ಗೆಲ್ಲಲಿ : ಕೆ.ಎಸ್.ಈಶ್ವರಪ್ಪ ಸವಾಲು

( Karnataka Budget 2022 CM Basavaraj Bommai Presenting first Budget)

Comments are closed.