Shivamogga : ಹಿಂದೂ ಹರ್ಷ ಹತ್ಯೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ( Hindu Harsha) ಹತ್ಯೆಯ ಬೆನ್ನಲ್ಲೇ ಇದೀಗ ವಾಕಿಂಗ್‌ಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತ ವೆಂಕಟೇಶ್‌ ( BJP Venkatesh) ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗೋಪಾಳದ ಪದ್ಮಾ ಟಾಕೀಸ್‌ ಬಳಿಯಲ್ಲಿ ನಡೆದಿದೆ. ಹಲ್ಲೆಗೆ ಒಳಗಾಗಿರುವ ವೆಂಕಟೇಶ್‌ ( 48 ವರ್ಷ ) ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದು, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Another BJP worker Venkatesh attacked by 4 people after Harsha Murder in Shivamogga 1

ವೆಂಕಟೇಶ್‌ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಸರಕಾರಿ ಶಾಲೆಯ ಬಳಿಯಲ್ಲಿ ಸಾಕು ನಾಯಿಯೊಂದರಿಗ ವಾಕಿಂಗ್‌ಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಶಾಲೆಯ ಗೇಟ್‌ ಬಳಿಯಲ್ಲಿದ್ದ ನಾಲ್ವರು ಯುವಕರು ಕ್ಷುಲಕ ಕಾರಣಕ್ಕೆ ಜಗಳಕ್ಕೆ ಇಳಿದಿದ್ದಾರೆ. ನಂತರ ನಾಲ್ವರು ವ್ಯಕ್ತಿಗಳು ವೆಂಕಟೇಶ್‌ ಅವರ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆಯಲ್ಲಿ ತನ್ನ ಮನೆಯಲ್ಲಿ ಸಿಸಿ ಕ್ಯಾಮರಾ ಇದೆ ಎನ್ನುತ್ತಿದ್ದಂತೆಯೇ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ.‌ ಘಟನೆಯಲ್ಲಿ ವೆಂಕಟೇಶ್‌ ಅವರ ತಲೆಗೆ ಗಂಭೀರವಾದ ಗಾಯವಾಗಿದ್ದು, ಸ್ಥಳೀಯರು ವೆಂಕಟೇಶ್‌ ಅವರನ್ನುಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸಂಸದ ಬಿ.ವೈ.ರಾಘವೇಂದ್ರ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿ, ವೆಂಕಟೇಶ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ವೆಂಕಟೇಶ್‌ ಆರೋಗ್ಯ ವಿಚಾರಿಸಿದ ಶಿವಮೊಗ್ಗ (Shivamogga ) ಸಂಸದ ಬಿ.ವೈ.ರಾಘವೇಂದ್ರ

ಹರ್ಷ ಕೊಲೆ ಪ್ರಕರಣದ ಬೆನ್ನಲ್ಲೇ ಶಿವಮೊಗ್ಗ ಶಾಂತ ಸ್ಥಿತಿಗೆ ಬರುತ್ತಿದೆ. ಈ ನಡುವೆ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ವೆಂಕಟೇಶ್‌ ಅವರ ಅಣ್ಣ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನಾಲ್ವರು ಯುವಕರು ವೆಂಕಟೇಶ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಎಲ್ಲರೂ ಕೂಡ ಉರ್ದುವಿನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಯುವಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.

ಹರ್ಷ ಹತ್ಯೆಯ ಬೆನ್ನಲ್ಲೇ ಶಾಂತವಾಗಿ ಶಿವಮೊಗ್ಗದಲ್ಲಿ ವೆಂಕಟೇಶ್‌ ಮೇಲೆ ಹಲ್ಲೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ತುಂಗಾ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಗಾಂಜಾ ಮತ್ತಲ್ಲಿ ಶಿವಮೊಗ್ಗದಲ್ಲಿ ಸಮಾಜ ಘಾತಕ ಕೃತ್ಯಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭಯ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : Harsha murder case : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ವರದಿ ಕೇಳಿದ ಬಿಜೆಪಿ ಹೈಕಮಾಂಡ್

ಇದನ್ನೂ ಓದಿ : Hindu Harsha : ಬಿಜೆಪಿ ಸೂಚಿಸಿದರೇ ಹರ್ಷನ ಕುಟುಂಬಕ್ಕೆ ಸ್ಥಾನಬಿಡಲು ಸಿದ್ಧ ಎಂದ ಈಶ್ವರಪ್ಪ

(Another BJP worker Venkatesh attacked by 4 people after Harsha Murder in Shivamogga )

Comments are closed.