Vikrant Rona Movie : ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾಕ್ಕೆ ಮೊದಲ ವರ್ಷ ಸಂಭ್ರಮ

ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ (Vikrant Rona Movie) ಸಾಕಷ್ಟು ಯಶಸ್ಸನ್ನು ಕಂಡಿದೆ. ವಿಕ್ರಾಂತ್‌ ರೋಣ ಬಿಡುಗಡೆಯಾಗಿ ಆಗಲೇ ಒಂದು ವರ್ಷ (ಜುಲೈ 28) ಕಳೆದಿದ್ದು, ಅಡ್ವೆಂಚರ್ಸ್ ಜೊತೆಗೆ ಮರ್ಡರ್ ಮಿಸ್ಟ್ರೀ ಜಾನರ್ ನ ಈ ಸಿನಿಮಾಕ್ಕೆ ಸಿನಿಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈಗಾಗಲೇ ಕಿಚ್ಚ ಸುದೀಪ್‌ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದು ಚಿತ್ರೀಕರಣವನ್ನು ಶುರು ಮಾಡಿಕೊಂಡಿರುವುದು ಪ್ರೇಕ್ಷಕರಿಗೆ ಸಂತಸ ತಂದಿದೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ,ಪ್ಯಾನ್ ಇಂಡಿಯಾ ಸಿನಿಮಾಗೆ ಅದ್ದೂರಿ ಬಜೆಟ್​ನಲ್ಲಿ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಸಿನಿಮಾದ ಇನ್ನೊಂದು ಆಕರ್ಷಣೆ ಎಂದರೇ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ವಿಶೇಷ ಪಾತ್ರ ಹಾಗೂ ಐಟಂ ಸಾಂಗ್ ವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಬರೋಬ್ಬರಿ ಮೂರು ಕೋಟಿ ವೆಚ್ಚದಲ್ಲಿ ಚಿತ್ರಿಸಲಾಗಿರುವ ಈ ಐಟಂ ಸಾಂಗ್ ನಲ್ಲಿ ಜಾಕ್ವಲಿನ್ ಫರ್ನಾಂಡೀಸ್ ಗಡಂಗ ರುಕ್ಕಮ್ಮ್ ನ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ : Hostel hudugaru bekagiddare : ವಿದೇಶಗಳಿಗೂ ಹಬ್ಬಿದ ಹಾಸ್ಟೆಲ್ ಹುಡುಗರ ಹವಾಳಿ : ಈ ವೀಕೆಂಡ್ ನಿಂದ ವಿದೇಶದಲ್ಲಿ ಸಿನಿಮಾ ಪ್ರದರ್ಶನ

ಇದನ್ನೂ ಓದಿ : Aara movie : ಆರ ಸಿನಿಮಾದ ಮೂಲಕ ಮತ್ತೊಮ್ಮೆ ಖಡಕ್‌ ವಿಲನ್‌ ಆಗಿ ಕಾಣಿಸಿಕೊಂಡ ನಟ ಸತ್ಯರಾಜ್

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​, ಅನೂಪ್​ ಭಂಡಾರಿ, ನೀತಾ ಅಶೋಕ್​, ಮಿಲನಾ ನಾಗರಾಜ್​, ಜಾಕ್ವೆಲಿನ್​ ಫರ್ನಾಂಡಿಸ್​, ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ಸೇರಿದಂತೆ ಬಹು ತಾರಾಂಗಣವ ನಟಿಸಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ “ರಾ ರಾ ರಕ್ಕಮ್ಮ..” ಹಾಡಿಗೆ​ ಅಭಿಮಾನಿಗಳು ಫಿದಾ ಆಗಿದ್ದರು. ಥಿಯೇಟರ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ ಸಿನಿಮಾ, ನಂತರದ ದಿನಗಳಲ್ಲಿ ಜೀ5 ಒಟಿಟಿಯಲ್ಲಿ ಹಂಗಾಮ ಸೃಷ್ಟಿಸುತ್ತಿದೆ.

Vikrant Rona Movie : Vikrant Rona movie starring Kiccha Sudeep celebrates its first year

Comments are closed.