ಬಾಲಿವುಡ್ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmir Files) ಭಾಷೆಯ ಗಡಿ ದಾಟಿ ದೇಶದಾದ್ಯಂತ ಮೆಚ್ಚುಗೆ ಗಳಿಸಿದೆ.ಜನರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ಈ ಸಿನಿಮಾದ ಪರ ಹಾಗೂ ವಿರುದ್ಧ ದೊಡ್ಡ ದೊಡ್ಡ ಅಭಿಯಾನಗಳೇ ನಡೆದು ಹೋಗಿವೆ. ಈ ಮಧ್ಯೆ ಸದ್ಯ ಓಟಿಟಿಯಲ್ಲೂ ಪ್ರದರ್ಶನ ಮುಂದುವರೆದಿದೆ. ಹೀಗಿರುವಾಗಲೇ ಸಿನಿಮಾದ ಬಗ್ಗೆ ಸೂಕ್ತ ಮಾಹಿತಿ ನೀಡದ ವಿಕಿಪೀಡಿಯಾ (Wikipedia) ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿ ಕಾಶ್ಮೀರಿ ಫೈಲ್ಸ್ ನೈಜ ಘಟನೆ ಆಧಾರಿತ ಕತೆ. 1990 ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂ ಪಂಡಿತರ್ ಮೇಲೆನಡೆದಿದೆ ಎನ್ನಲಾದ ದೌರ್ಜನ್ಯದ ಕತೆ ಎಂದು ಸಿನಿಮಾ ತಂಡ ಹೇಳಿ ಕೊಂಡಿದೆ. ಈ ಸಿನಿಮಾ ತೆರೆಗೆ ಬಂದ ಬಳಿಕ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಸಂಗತಿಗಳು ದೇಶದಾದ್ಯಂತ ಚರ್ಚೆಗೆ ಬಂದಿದ್ದವು. ಇಷ್ಟೆಲ್ಲ ಇದ್ದರೂ ವೀಕಿಪಿಡಿಯಾ ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ಕತೆಯನ್ನು ಬೇರೆ ರೀತಿಯಲ್ಲಿ ಬಿಂಬಿಸುತ್ತಿದೆ ಎಂದು ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ.
ವಿಕೀಪಿಡಿಯಾ ಈ ಕತೆಯನ್ನು ಕಾಲ್ಪಿನಿಕ ಕತೆ ಎಂದು ಬರೆದಿದೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಕಿಪಿಡಿಯಾವನ್ನು ಜಗತ್ತಿನ ವಿಶ್ವಕೋಶ ಎಂದು ಕರೆಯುತ್ತಾರೆ. ಆದರೆ ಅದು ವಿಶ್ವಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ದಿ ಕಾಶ್ಮೀರಿ ಫೈಲ್ಸ್ ನೈಜ್ ಘಟನೆಗಳನ್ನು ಆಧರಿಸಿದ ಸಿನಿಮಾ ಎಂದು ನಾನು ಹಲವು ಭಾರಿ ಹೇಳಿದ್ದೇನೆ. ಅಲ್ಲದೇ ಅದಕ್ಕೆ ಪೂರಕ ಸಾಕ್ಷ್ಯವನ್ನು ಒದಗಿಸಿದ್ದೇನೆ. ಆದರೂ ಇದನ್ನು ಕಾಲ್ಪನಿಕ ಸಿನಿಮಾ ಎಂದು ಹೇಳಲಾಗಿದೆ.
ಇದು ಉದ್ದೇಶ ಪೂರ್ವಕವಾಗಿ ನಡೆದ ಪ್ರಮಾದ ಎಂದು ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹಂಚಿಕೊಂಡಿರೋ ವಿವೇಕ್, ಇಡಿ ದೇಶವೇ ಸಿನಿಮಾವನ್ನು ಹೊಗಳಿದೆ. ಬಾಕ್ಸಾಫಿಸ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ದಿ ಕಾಶ್ಮೀರಿ ಫೈಲ್ಸ್ ಹಣ ಗಳಿಸಿದೆ. ಆದರೂ ಈ ರೀತಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡ್ತಿರೋದು ಎಷ್ಟು ಸರಿ ? ಇದೇನಾ ಜಾತ್ಯತೀತ ನಿಲುವು ಎಂದು ವಿವೇಕ್ ಅಗ್ನಿಹೋತ್ರಿ ವೀಕಿಪಿಡಿಯಾದ ವಿರುದ್ಧ ಕೆಂಡಕಾರಿದ್ದಾರೆ. ಅಲ್ಲದೇ ವಿದೇಶಿ ಪತ್ರಕರ್ತರು ಕೂಡ ಸಿನಿಮಾವನ್ನು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದು ಇದೆಲ್ಲದರ ಬಗ್ಗೆ ಮೇ 5ರಂದು ಸುದ್ದಿಗೋಷ್ಟಿ ನಡೆಸಿ ಮಾತನಾಡುವುದಾಗಿಯೂ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
IMPORTANT: ALL MEDIA
— Vivek Ranjan Agnihotri (@vivekagnihotri) May 3, 2022
1. Foreign Correspondents Club, New Delhi has cancelled my PC on 5th May in an undemocratic manner as part of a hate-campaign against #TheKashmirFiles.
2. I am holding an open-house PC at the Press Club of India on the 5th at 4 PM.
All media are invited. pic.twitter.com/aDFbS9FteB
ಇದನ್ನೂ ಓದಿ : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ
ಇದನ್ನೂ ಓದಿ : ಸಖತ್ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!
Vivek Agnihotri Outrage against Wikipedia about The Kashmir Files