ಮುಂಬೈ : ಬಾಲಿವುಡ್ ಖ್ಯಾತ ಸಂಗೀತ ಸಂಯೋಜಕ ಸಾಜಿದ್ –ವಾಜಿದ್ ಅಂತನೇ ಖ್ಯಾತಿ ಪಡೆಸಿರುವ ವಾಜಿದ್ ಖಾನ್ (42) ಮುಂಬೈ ಆಸ್ಪತ್ರೆಯಲ್ಲಿ ಬೆಳಗಿನ ಜಾವ ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ.

ಸಾಜಿದ್ – ವಾಜಿದ್ ಖಾನ್ ಅವರ ಸಹೋದ್ಯೋಗಿ ಮತ್ತು ಸಂಗೀತ ನಿರ್ದೇಶಕ ಸಲೀಮ್ ಮರ್ಚೆಂಟ್ ಅವರ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಸಾಜಿದ್-ವಾಜಿದ್ ಖ್ಯಾತಿಯ ನನ್ನ ಸಹೋದರ ವಾಜಿದ್ ನಿಧನರಾದ ಸುದ್ದಿ ನಂಬಲು ಅಸಾಧ್ಯವಾಗಿದೆ. ಅಲ್ಲಾಹನು ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.


ಇನ್ನು ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಹಲವಾರು ನಟ, ನಟಿಯರು, ಹಿನ್ನಲೆ ಗಾಯಕರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಾಜಿದ್ ನಿಧನಕ್ಕೆ ಕಂಬನಿಮಿಡಿದಿದ್ದಾರೆ.
ಹಲವು ಸಮಯಗಳಿಂದಲೂ ವಾಜಿದ್ ಖಾತ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೇ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಆದರೆ ಕಿಡ್ನಿ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ವಾಜಿದ್ ಖಾನ್ ಅವರಿಗೆ ಕೊರೊನಾ ಸೋಂಕು ಕೂಡ ಬಾಧಿಸಿದೆ ಎಂದು ಪರಿಘೂನ್ ಹೇಳಿದ್ದಾರೆ.