ವೀಕೆಂಡ್​ ವಿತ್​ ರಮೇಶ್ ಸೀಸನ್‌ 5 : ಈ ವಾರದ ಗೆಸ್ಟ್‌ ಯಾರು ಗೊತ್ತಾ ?

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಒಂದು ರೀತಿಯ ಮೈಲುಗಲ್ಲು ಸೃಷ್ಟಿಸಿದ್ದರೆ, ಇನ್ನೊಂದೆಡೆ ರಿಯಾಲಿಟಿ ಶೋಗಳು ಇತಿಹಾಸ ಸೃಷ್ಟಿಸಿದ್ದವರನ್ನು ಪರಿಚಯಿಸುವ ಪ್ರಯತ್ನ ನಡೆಸಿ, ಜನಮನ್ನಣೆ ಪಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​, ರಾಜಾ ರಾಣಿ, ಜೋಡಿ ನಂ.1, ಸೂಪರ್‌ ಕ್ವೀನ್‌, ಇಸ್ಮಾರ್ಟ್ ಜೋಡಿ, ಸರಿಗಮಪ ಹೀಗೆ ಎಲ್ಲಾ ಚಾನೆಲ್‌ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರ ನಡುವೆ ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್​ ವಿತ್​ ರಮೇಶ್ (Weekend With Ramesh) ಅಂದರೆ ವೀಕ್ಷಕರಿಗೆ ಹೆಚ್ಚು ಇಷ್ಟಪಟ್ಟು ನೋಡುತ್ತಾರೆ. ಈಗಾಗಲೇ ಹೊಸ ಸೀಸನ್‌ ಶುರುವಾಗಿದ್ದು, ನಾಲ್ಕು ಎಪಿಸೋಡ್‌ ಮುಗಿದಿದೆ. ಸದ್ಯ ಐದನೇ ಎಪಿಸೋಡ್‌ ಗೆಸ್ಟ್‌ ಯಾರು ಎಂದು ಕೂಡ ರೀವಿಲ್‌ ಮಾಡಿದ್ದಾರೆ.

ಈ ಸೀಸನ್‌ನಲ್ಲಿ ಮೊದಲ ಗೆಸ್ಟ್‌ ಆಗಿ ಮೋಹಕತಾರೆ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂದಿದ್ದಾರೆ. ಇನ್ನೂ ಎರಡನೇ ಗೆಸ್ಟ್‌ ಆಗಿ ಭಾರತದ ಮೈಕಲ್‌ ಜಾಕ್ಸನ್‌ ಎಂದೇ ಪ್ರಖ್ಯಾತಿ ಪಡೆದಿರುವ ಡ್ಯಾನ್ಸರ್‌ ಪ್ರಭುದೇವ್‌ ಬಂದಿದ್ದು, ಮೂರನೇ ವಾರದಲ್ಲಿ ಶನಿವಾರ ಲಕ್ಷಾಂತರ ಹೃದಯಗಳನ್ನು ಗೆದ್ದ ಹಿರಿಯ ನಟ ದತ್ತಣ್ಣ ಗೆಸ್ಟ್‌ ಆಗಿ ಬಂದರೆ, ಭಾನುವಾರ ಲಕ್ಷಾಂತರ ಹೃದಯಗಳಿಗೆ ಮಿಡಿದ ಡಾ.ಸಿ.ಎನ್‌ ಮಂಜುನಾಥ್‌ ಅವರು ಗೆಸ್ಟ್‌ ಆಗಿ ಕರುನಾಡ ಜನರ ಎದುರು ಕಾಣಿಸಿಕೊಂಡಿದ್ದಾರೆ.

ಇನ್ನೂ ಈ ವಾರದ ಗೆಸ್ಟ್‌ ಆಗಿ ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಎಂದೇ ಪ್ರಖ್ಯಾತಿ ಪಡೆದಿರುವ ಡಾಲಿ ಧನಂಜಯ್‌ ಬರಲಿದ್ದಾರೆ. ಹೀಗಾಗಿ ಈ ವೀಕೆಂಡ್‌ನಲ್ಲಿ ತಮ್ಮ ಮೆಚ್ಚಿನ ನಟ ಬೆಳೆದು ಬಂದ ಹಾದಿಯಲ್ಲಿ ಪ್ರೇಕ್ಷಕರು ತಮ್ಮ ಮನೆಯಲ್ಲೇ ವೀಕ್ಷಿಸಬಹುದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್​ ಇದೀಗ ಮತ್ತೊಮ್ಮೆ ವೀಕೆಂಟ್​ ಟೆಂಟ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ : ತುಳು‌ಭಾಷೆಯಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ ಕಾಂತಾರ ಸಿನಿಮಾ

ಇದನ್ನೂ ಓದಿ : ನಂದಿನಿ – ಅಮುಲ್‌ ವಿವಾದ : ಬಿಜೆಪಿ ವಿರೋಧ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌ ಕುಮಾರ್‌

2019ರ ಜುಲೈ ತಿಂಗಳಲ್ಲಿ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಕೊನೆಗೊಂಡಿತ್ತು. ಇದಾದ ಬಳಿಕ 3 ವರ್ಷಗಳೇ ಕಳೆದರೂ ಹೊಸ ಸೀಸನ್​ ಮಾತ್ರ ಆರಂಭಗೊಂಡಿರಲಿಲ್ಲ. ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಬಳಿಯಲ್ಲಿ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರು ಕೂಡ. ಇದೀಗ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಮತ್ತೊಮ್ಮೆ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ.

Weekend with Ramesh Season 5: Who is this week’s guest?

Comments are closed.