Yash aka Rocky Bhai : ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ನ ನಟರೆಲ್ಲ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿರವುದು ಹೊಸ ವಿಚಾರವೇನಲ್ಲ. ಅಜಯ್ ದೇವಗನ್, ಶಾರೂಕ್ ಖಾನ್, ಅಕ್ಷಯ್ ಕುಮಾರ್ ಹೀಗೆ ಪಾನ್ ಮಸಾಲಾ ಆ್ಯಡ್ನಲ್ಲಿ ಗುರುತಿಸಿಕೊಂಡ ನಟರೆಲ್ಲರೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ತೀರಾ ಇತ್ತೀಚಿಗೆ ಪಾನ್ ಮಸಾಲಾ ಜಾಹೀರಾತೊಂದರಲ್ಲಿ ಶಾರೂಕ್ ಖಾನ್ ಹಾಗೂ ಅಜಯ್ ದೇವಗನ್ ಜೊತೆ ಕಾಣಿಸಿಕೊಂಡಿದ್ದ ನಟ ಅಕ್ಷಯ್ ಕುಮಾರ್ಗೆ ನೆಟ್ಟಿಗರು ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಹಾಗೂ ಹಿತೈಷಿಗಳ ಮಾತಿಗೆ ಬೆಲೆ ನೀಡಿದ್ದ ನಟ ಅಕ್ಷಯ್ ಕುಮಾರ್ ಬಹುಕೋಟಿ ಮೌಲ್ಯದ ಪಾನ್ ಮಸಲಾಲಾ ಜಾಹೀರಾತಿನಿಂದ ಹಿಂದೆ ಸರಿಯುವ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಈ ಮೂಲಕ ಅಭಿಮಾನಿಗಳ ಬಳಿ ಕ್ಷಂಎ ಕೂಡ ಕೇಳಿದ್ದರು.
ಸ್ಯಾಂಡಲ್ವುಡ್ ನಟ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಿಂದಾಗಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸದ್ಯ ಎಲ್ಲಿ ಕೇಳಿದರೂ ಕೆಜಿಎಫ್ 2 ಸಿನಿಮಾದ್ದೇ ಮಾತು. ಹೀಗಿರುವಾಗ ಈ ಪಾನ್ ಮಸಾಲಾ ಕಂಪನಿಯು ನಟ ಯಶ್ಗೂ ತಮ್ಮ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಬಹುಕೋಟಿ ಮೌಲ್ಯದ ಡೀಲ್ ನೀಡಿತ್ತು ಎಂಬ ಸುದ್ದಿ ಇದೀಗ ಬಹಿರಂಗವಾಗಿದೆ. ಕೋಟಿ ಕೋಟಿ ರೂಪಾಯಿ ಮೌಲ್ಯದ ಭರ್ಜರಿ ಡೀಲ್ನ್ನು ಪಾನ್ ಮಸಾಲಾ ಕಂಪನಿಯು ರಾಕಿ ಭಾಯ್ ಮುಂದಿಟ್ಟಿತ್ತು. ಆದರೆ ನನ್ನ ವೈಯಕ್ತಿಕ ಲಾಭಕ್ಕಾಗಿ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯಲಾರೆ ಎಂದು ಹೇಳಿದ ನಟ ಯಶ್ ಇಂತಹ ಜಾಹೀರಾತಿನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಬಹುಕೋಟಿ ಮೌಲ್ಯದ ಡೀಲ್ನ್ನು ನಿರಾಕರಿಸಿದ್ದಾರೆ. ನಟ ಯಶ್ರ ಈ ನಡೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಪಾನ್ ಮಸಾಲಾದ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಪಾನ್ ಮಸಾಲಾಗಳ ಸೇವನೆಯು ಜನರ ಜೀವವನ್ನೇ ತೆಗೆಯಬಹುದು. ಹೀಗಾಗಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಬಹುಕೋಟಿ ಮೌಲ್ಯದ ಡೀಲ್ ಆಗಿದ್ದರೂ ಸಹ ನಟ ಯಶ್ ವೈಯಕ್ತಿಕ ಲಾಭವನ್ನು ಬದಿಗಿಟ್ಟು ಈ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ಎನಿಸಿದ್ದಾರೆ ಎಂದು ಟ್ಯಾಲೆಂಟ್ & ನ್ಯೂ ವೆಂಚರ್ @ಎಕ್ಸೀಡ್ ಏಜೆನ್ಸಿ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನು ಓದಿ : yash starrer kgf 2 : 3ನೇ ವಾರವೂ ಥಿಯೇಟರ್ನಲ್ಲಿ ಕೆಜಿಎಫ್ 2 ಹವಾ: ಮಕಾಡೆ ಮಲಗಿದ ಸ್ಟಾರ್ ನಟರ ಸಿನಿಮಾ
ಇದನ್ನೂ ಓದಿ : Sanjana Galrani Baby Bump : ಸಖತ್ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!
Yash aka Rocky Bhai turns down lucrative deal with paan masala brand after Akshay Kumar’s apology for Vimal ad