wife gang-raped by relatives : ಸಂಬಂಧಿಗಳಿಂದಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಹಣಕ್ಕಾಗಿ ವಿಡಿಯೋ ಚಿತ್ರೀಕರಿಸಿದ ಪಾಪಿ ಪತಿ

wife gang-raped by relatives : ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳಿಂದ ಮುಕ್ತಿ ನೀಡಬೇಕು ಎಂಬ ಕಾರಣಕ್ಕೆ ದೇಶದಲ್ಲಿ ಈಗಾಗಲೇ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೂ ಸಹ ವರದಕ್ಷಿಣೆ ಎಂಬ ಪಿಡುಗಿಗೆ ಇಂದೂ ಸಂಪೂರ್ಣವಾಗಿ ಅಂತ್ಯ ಹಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಹಲವು ಕಡೆಗಳಲ್ಲಿ ವರದಕ್ಷಿಣೆಗಾಗಿ ಪತ್ನಿಯನ್ನು ಹಾಗೂ ಆಕೆಯ ಕುಟುಂಬಸ್ಥರನ್ನು ಹಿಂಸಿಸುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.

ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ರಾಜಸ್ಥಾನ ರಾಜ್ಯದ ಭರತಪುರ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತವರು ಮನೆಯಿಂದ 1.5 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀಡಲು ಪತ್ನಿಯ ಕುಟುಂಬಸ್ಥರು ಶಕ್ತರಿರಲಿಲ್ಲ. ಹೇಗಾದರೂ ಮಾಡಿ ಪತ್ನಿಯಿಂದ ಹಣ ಗಳಿಸಬೇಕೆಂದುಕೊಂಡ ಪತಿಯು ತನ್ನ ಸಂಬಂಧಿಗಳಿಂದಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವಂತೆ ಮಾಡಿದ್ದಾನೆ..!


ತನ್ನ ಸಂಬಂಧಿಗಳು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದ ವೇಳೆಯಲ್ಲಿ ಈ ದೃಶ್ಯಾವಳಿಗಳನ್ನು ಪತಿಯು ಚಿತ್ರೀಕರಿಸಿದ್ದ ಎನ್ನಲಾಗಿದೆ. ಬಳಿಕ ಸಾಮೂಹಿಕ ಅತ್ಯಾಚಾರದ ಸಂಪೂರ್ಣ ದೃಶ್ಯವನ್ನು ಯುಟ್ಯೂಬ್​ನಲ್ಲಿ ಅಪ್​ಲೋಡ್​ ಕೂಡ ಮಾಡಿದ್ದ. ತವರು ಮನೆಯಿಂದ ಹಣ ತರಲು ಸಾಧ್ಯವಾಗಿಲ್ಲ ಎಂದಾದರೆ ನಿನ್ನದೇ ಅಶ್ಲೀಲ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್ ಮಾಡುವ ಮೂಲಕ ನಾನು 1.5 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತೇನೆಂದು ಪತ್ನಿಯ ಬಳಿ ಈತ ಸವಾಲ್​ ಎಸೆದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಶೇರ್​ ಮಾಡಿದ್ದ.


ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಸರ್ಕಾರವು ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗೆ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.


ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರವು ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಗೆಹ್ಲೋಟ್ ಹೇಳಿದರು: ಪ್ರತಿ ಅಪರಾಧದ ಮೇಲೆ ಎಫ್‌ಐಆರ್‌ನ ಕಡ್ಡಾಯ ನೋಂದಣಿ, ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆಗಾಗಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ಸೆಲ್ ಸ್ಥಾಪನೆ, ಸಂಖ್ಯೆಯಲ್ಲಿ ಹೆಚ್ಚಳ ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಕಾನೂನು ಅಧಿಕಾರಿಗಳ ನೇಮಕಾತಿ ಈ ಕ್ರಮಗಳಲ್ಲಿ ಸೇರಿವೆ ಎಂದು ಹೇಳಿದರು.

ಇದನ್ನು ಓದಿ : Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

ಇದನ್ನೂ ಓದಿ : head constable who committed suicide: ಕರ್ತವ್ಯಕ್ಕೆ ಮರಳಿದ ದಿನವೇ ಹೆಡ್​ಕಾನ್​​ಸ್ಟೇಬಲ್​ ಆತ್ಮಹತ್ಯೆ

Rajasthan man gets wife gang-raped by relatives; films video for dowry

Comments are closed.