Yash : ಜಪಾನಿ ಭಾಷೆಯಲ್ಲಿ ಮಾತನಾಡಿದ ರಾಕಿಂಗ್‌ ಸ್ಟಾರ್‌ ಯಶ್‌ ಕಾರಣವೇನು ಗೊತ್ತಾ ?

ಕನ್ನಡ ಸಿನಿರಂಗದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ನಟ ಯಶ್‌ ಅಭಿನಯದ ಕೆಜಿಎಫ್‌ ಸರಣಿ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲದೇ ವಿವಿಧ ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ಕೆಜಿಎಫ್‌ ಹಾಗೂ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಜಪಾನ್‌ನಲ್ಲಿ ತೆರೆ ಕಾಣಲಿದೆ. ಈ ಖುಷಿಯನ್ನು ನಟ ಯಶ್‌ ವಿಡಿಯೋ ಮೂಲಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಂತಸಗೊಂಡಿದ್ದು, ಮುಂದಿನ ಸಿನಿಮಾ ಯಾವಾಗ ಎಂದು ಎಂದಿನಂತೆ ಕೇಳಿದ್ದಾರೆ.

ನಟ ಯಶ್‌ ಜಪಾನಿ ಭಾಷೆಯಲ್ಲಿ ಮಾತನಾಡುವುದರ ಮೂಲಕ ಜಪಾನ್‌ನಲ್ಲಿ ಇರುವ ಅಭಿಮಾನಿಗಳಲ್ಲಿ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ, “ನಮಸ್ತೆ ಜಪಾನ್.‌ ನನ್ನ ಕೆಜಿಎಫ್‌ 1 ಹಾಗೂ ಕೆಜಿಎಫ್‌ 2 ಸಿನಿಮಾ ಜಪಾನ್‌ನಲ್ಲಿ ತೆರೆ ಕಾಣಲಿದೆ. ಕೆಜಿಎಫ್‌ ಸಿನಿಮಾದಲ್ಲಿ ಸಾಕಷ್ಟು ಮನರಂಜನೆ ಹಾಗೂ ಮಾಸ್‌ ದೃಶ್ಯಗಳನ್ನು ಒಳಗೊಂಡಿದೆ.ಅಷ್ಟೇ ಅಲ್ಲದೇ ಒಂದಷ್ಟು ಮ್ಯಾಡ್‌ನೆಸ್‌ ಕೂಡ ಇದೆ. ತಪ್ಪದೇ ಸಿನಿಮಾ ನೋಡಿ” ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ಅಭಿಮಾನಿಗಳು ವೈರಲ್‌ ಮಾಡಿದ್ದಾರೆ.

ನಟ ಯಶ್‌ ವೃತ್ತಿ ಜೀವನದಲ್ಲಿ ಅತೀ ದೊಡ್ಡ ಮೈಲುಗಲ್ಲು ಸೃಷ್ಟಿಸಿದ ಸಿನಿಮಾವೆಂದರೆ ಕೆಜಿಎಫ್‌ ಹಾಗೂ ಕೆಜಿಎಫ್‌ 2 ಎಂದರೆ ತಪ್ಪಾಗಲ್ಲ. ಈ ಎರಡು ಸಿನಿಮಾಗಳು ಅವರಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಎನ್ನುವ ಪಟ್ಟ ತಂದುಕೊಟ್ಟಿದೆ. ಇಂತದರಲ್ಲಿ ಕೆಜಿಎಫ್‌ ಸರಣಿ ಸಿನಿಮಾಗಳು ಜಪಾನಿ ಭಾಷೆಗೆ ಡಬ್‌ ಆಗಿ ಅಲ್ಲಿನ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣುತ್ತಿರುವುದು ನಿಜಕ್ಕೂ ವಿಶೇಷ. ಇದ್ದರಿಂದ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ.

ಇದನ್ನೂ ಓದಿ : Project K : ಅಮೇರಿಕಾದಲ್ಲಿ ನಟ ಪ್ರಭಾಸ್‌ ಅಭಿನಯದ ಪ್ರಾಜೆಕ್ಟ್ ಕೆ ಟ್ರೇಲರ್‌ ರಿಲೀಸ್‌

ಇದನ್ನೂ ಓದಿ : Genie Movie : ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ : ಚೆನ್ನೈನಲ್ಲಿ ಜೀನಿ ಅದ್ಧೂರಿ ಮುಹೂರ್ತ

ಕೆಜಿಎಫ್‌ ಸರಣಿ ಸಿನಿಮಾಗಳಲ್ಲಿ ಯಶ್‌ ಅವರೊಂದಿಗೆ ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌ ಮೊದಲಾದ ದಿಗ್ಗಜರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್‌ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ತೆರೆ ಕಂಡು ಒಂದು ವರ್ಷ ಕಳೆದರೂ ನಟ ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಡದೇ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಾಗಿ ನಟ ಯಶ್‌ ಅವರ ಮುಂದಿನ ನಡೆ ಎನ್ನುವುದು ಅಭಿಮಾನಿಗಳ ಕೂತುಹಲವಾಗಿದೆ.

Yash: Do you know the reason why the rocking star Yash spoke in Japanese?

Comments are closed.