Tomato Price : ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ : ಈ ರಾಜ್ಯದಲ್ಲಿ ಒಂದು ಕೆಜಿ ಟೊಮೆಟೊಗೆ 250 ರೂ.

ನವದೆಹಲಿ : Tomato Price :ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆ ಜೊತೆಗೆ, ತರಕಾರಿ ಬೆಲೆಗಳು ಕೂಡ ಗಗನಕ್ಕೇರುತ್ತಿದೆ. ಅದರಲ್ಲೂ ಕೆಂಪಗೆ ಇರುವ ಟೊಮೆಟೊ ಎಲ್ಲರ ಮುಖದಲ್ಲೂ ಕೆಂಪಾಗುವಷ್ಟು ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಸಂದರ್ಭದಲ್ಲಿ ಈರುಳ್ಳಿ ದರ ಏರಿಕೆ ಆಗುತ್ತಿತ್ತು. ಸದ್ಯ ಟೊಮೆಟೊ ಬೆಲೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಕಂಡಿದೆ. ಸದ್ಯ ಕರ್ನಾಟಕದಲ್ಲಿ ಒಂದು ಕೆಜಿ ಟೊಮೆಟೋ 120 ರಿಂದ 150 ರೂ.ಗೆ ಸಿಗುತ್ತಿದ್ದರೆ, ಬೇರೆ ರಾಜ್ಯಗಳಲ್ಲಿ 250 ರೂ.ಕ್ಕಿಂತ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಸಾಮಾನ್ಯವಾಗಿ ಮದುವೆ ಸಮಾರಂಭ, ಶ್ರಾವಣ ಮಾಸ, ಹಬ್ಬದಿನಗಳಲ್ಲಿ ತರಕಾರಿ ಬೆಲೆ ಏರಿಕೆ ಕಾಣುತ್ತಿತ್ತು. ಇದೀಗ ಆಷಾಢ ಮಾಸಾರಂಭದಿಂದಲೇ ಎಲ್ಲೆಡೆ ತರಕಾರಿ ಬೆಲೆ ಗಗನಕ್ಕೇರಿದೆ. ಸದ್ಯ ಗಂಗೋತ್ರಿಯಲ್ಲಿ ಒಂದು ಕೆಜಿ ಟೊಮೆಟೋಗೆ 250 ರೂ. ಹಾಗೂ ಉತ್ತರಕಾಶಿ ಪ್ರದೇಶಗಳಲ್ಲಿ ಪ್ರತಿ ಕೆಜಿಗೆ 180 ರಿಂದ 200 ರೂ.ಗೆ ಜನ ಖರೀದಿ ಮಾಡುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ವಾಹಿನಿ ವರದಿ ಮಾಡಿದೆ. ಹೀಗಾಗಿ ಈ ರಾಜ್ಯದ ಜನರು ಟೊಮೆಟೋ ಹೆಚ್ಚು ಬೆಲೆ ಇರುವುದರಿಂದ ಖರೀದಿಸಲು ಮನಸ್ಸು ಮಾಡುತ್ತಿಲ್ಲ.

ಇದನ್ನೂ ಓದಿ : ಕರಾವಳಿಯಲ್ಲಿ ಭಾರೀ ಮಳೆಯಿಂದ ಅಡಿಕೆಗೆ ಕೊಳೆ ರೋಗ, ಚುಕ್ಕೆ ರೋಗ : ಅಧಿಕಾರಿಗಳಿಂದ ರೋಗ ನಿರ್ವಹಣೆಯ ಟಿಪ್ಸ್‌

ಇದನ್ನೂ ಓದಿ : Tomato Prices : ಗಗನಕ್ಕೇರಿದ ಟೊಮ್ಯಾಟೋ ಬೆಲೆ : ತೋಟದಿಂದ 2.5 ಲಕ್ಷ ಮೌಲ್ಯದ ಟೊಮೆಟೋ ಕಳವು

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದೆ. ಇದಕ್ಕೆ ಕಾರಣ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಹವಾಮಾನ ತಾಪಮಾನ ಏರಿಕೆ ಎಂದು ಹೇಳಲಾಗಿದೆ. ಹೀಗಾಗಿ ಹಲವು ಪ್ರದೇಶಗಳಲ್ಲಿ ಟೊಮೆಟೊ ಪೊರೈಕೆಯಲ್ಲಿ ಕೊರತೆ ಉಂಟಾಗಿದೆ.

Tomato Price: Shocking news for consumers: 250 rupees for one kg tomato in this state.

Comments are closed.