ಭಾನುವಾರ, ಜೂನ್ 15, 2025
HomeCinemayash radhika daughter ayra : ರಾಧಿಕಾ ಹಂಚಿಕೊಂಡ ಪೋಟೋದಲ್ಲಿ ಅಮ್ಮನನ್ನು ಮೀರಿಸಿದ ಮಗಳು ಆರ್ಯ

yash radhika daughter ayra : ರಾಧಿಕಾ ಹಂಚಿಕೊಂಡ ಪೋಟೋದಲ್ಲಿ ಅಮ್ಮನನ್ನು ಮೀರಿಸಿದ ಮಗಳು ಆರ್ಯ

- Advertisement -

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪುಟ್ಟ ಮಕ್ಕಳೆ ‌ನಟ-ನಟಿಯರಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಜ್ಯೂನಿಯರ್ ಗಳದ್ದೇ ಹವಾ. ಈ ಸಾಲಿಗೆ ಯಶ್-ರಾಧಿಕಾ ಮಕ್ಕಳಾದ ಆಯ್ರಾ, ಯಥರ್ವ್ ಹಾಗೂ ಮೇಘನಾ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಸೇರುತ್ತಾರೆ. ಈ ಪೈಕಿ ಸದ್ಯ ರಾಕಿಂಗ್ ಪುತ್ರಿ ಆಯ್ರಾ ತಾಯಿಗೆ ಕಾಂಪಿಟೇಶನ್ (yash radhika daughter ayra) ಕೊಟ್ಟು ಸುದ್ದಿಯಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ತಾಯ್ತನ ಬ್ರೇಕ್ ನಲ್ಲಿರೋ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಮಾತ್ರವಲ್ಲ ಸದಾ ತಮ್ಮ ಮಕ್ಕಳ ತುಂಟಾಟಗಳ ವಿಡಿಯೋ ಶೇರ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಿರುತ್ತಾರೆ. ಮಾತ್ರವಲ್ಲ ರಾಧಿಕಾ ಯಶ್ ಜೊತೆ ಮಕ್ಕಳ ಅಪ್ಡೇಟ್ ಮಾಹಿತಿಯನ್ನು ನೀಡುತ್ತಿರುತ್ತಾರೆ.

yash radhika daughter Ayra photo shared Social Media in Radhika Pandit

ಈಗ ಆಯ್ರಾಳ ಹೊಸ ಪೋಟೋವೊಂದನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದು, ಪೋಟೋದಲ್ಲಿ ಆಯ್ರಾಳ ಪೋಸ್ ನೋಡಿ ಸ್ವತಃ ರಾಧಿಕಾ ಪಂಡಿತ್ ಹಾಗೂ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮೊನ್ನೆ ನಡೆದ ಕ್ರಿಸ್ಮಸ್ ಹಬ್ಬವನ್ನು ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಆಗಿ ಸೆಲಿಬ್ರೆಟ್ ಮಾಡಿದ್ದಾರೆ. ಈ ವೇಳೆ ರಾಧಿಕಾ ಮನೆಯಲ್ಲಿ ಅಲಂಕರಿಸಿದ ಕ್ರಿಸ್ಮಸ್ ಟ್ರೀ ಇಟ್ಟಿದ್ದು, ಕ್ರಿಸ್ಮಸ್ ಟ್ರೀ ಬಳಿ ರಾಧಿಕಾ ಹಾಗೂ ಯಶ್ ಮಕ್ಕಳಾದ ಅರ್ಯಾ ಹಾಗೂ ಯಥರ್ವ್ ಸಖತ್ ಎಂಜಾಯ್ ಮಾಡಿದ್ದು ಈ ಪೋಟೋಗಳನ್ನು ಹಬ್ಬದ ದಿನವೇ ರಾಧಿಕಾ ಶೇರ್ ಮಾಡಿದ್ದರು.

yash radhika daughter Ayra photo shared Social Media in Radhika Pandit

ಈಗ ಕ್ರಿಸ್ಮಸ್ ಟ್ರೀ ಬಳಿ ರಾಧಿಕಾ ತಮ್ಮ ಪುತ್ರಿಯ ವಿಶೇಷ ಪೋಟೋವನ್ನು ಶೇರ್ ಮಾಡಿದ್ದಾರೆ. ಕ್ರಿಸ್ಮಸ್ ಟ್ರೀ ಬಳಿ ಕೆಂಪು ಶಾರ್ಟ್ ಸ್ಕರ್ಟ್ ತೊಟ್ಟು ರಾಧಿಕಾ ಪೋಸ್ ನೀಡಿದ್ದಾರೆ. ಆದರೆ ಅವರಿಗಿಂತ ಸ್ಟೈಲಿಶ್ ಆಗಿ ಆಯ್ರಾ ಕ್ರಿಸ್ಮಸ್ ಟ್ರೀ ಬಳಿ ಪೋಸ್ ಕೊಟ್ಟಿದ್ದಾರೆ. ಸೊಂಟದ ಮೇಲೆ ಕೈ ಇಟ್ಟು ಒಂದು ಕಣ್ಣು ಮುಚ್ಚಿಕೊಂಡು ತುಂಟತನದಿಂದ ಪೋಸ್ ಕೊಟ್ಟ ಆಯ್ರಾ ಮನಸೆಳೆಯುತ್ತಿದ್ದು, ಈ ಪೋಟೋ ಹಂಚಿಕೊಂಡ ರಾಧಿಕಾ ಬೆಟರ್ ಪೋಸ್ ಕೊಡೋದು ಯಾರು ಅನ್ನೋದನ್ನು ಹೇಳುವ ಅಗತ್ಯವಿಲ್ಲ ಎಂಬರ್ಥದಲ್ಲಿ ಟ್ಯಾಗ್ ಲೈನ್ ನೀಡಿದ್ದಾರೆ.

ಇನ್ನೂ ಜ್ಯೂನಿಯರ್ ಸಿಂಡ್ರೆಲ್ಲಾ ಆಯ್ರಾ ಪೋಸ್ ನೋಡಿದ ರಾಕಿಂಗ್ ದಂಪತಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಸೂಪರ್ ಬೇಬಿ ಎಂದು ಕಮೆಂಟ್ ಮಾಡಿ ಹರಸುತ್ತಿದ್ದಾರೆ.

ಇದನ್ನೂ ಓದಿ :‌ KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?

ಇದನ್ನೂ ಓದಿ : Yash Radhika : ಇದೊಂದು ವಿಚಾರದಲ್ಲಿ ಯಶ್ ಒಳ್ಳೆಯವರಲ್ಲ: ಹೀಗ್ಯಾಕಂದ್ರು ರಾಧಿಕಾ ಪಂಡಿತ್

( yash radhika daughter Ayra photo shared Social Media in Radhika Pandit)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular