Karnataka Corona Rise Again : ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಮಾಣ ಏರಿಕೆ : ಆಘಾತಕಾರಿ ಮಾಹಿತಿ ಕೊಟ್ಟ ಕೇಂದ್ರ

ಬೆಂಗಳೂರು : ದೇಶದಲ್ಲಿ ಕೊರೋನಾ ಜೊತೆಗೆ ಜನಕ್ಕೆ ಓಮೈಕ್ರಾನ್ ಆತಂಜ ಹೆಚ್ಚಾಗಿದ್ದು, ವಿದೇಶಗಳಲ್ಲಿ ಓಮೈಕ್ರಾನ್ ಸ್ಪೋಟವಾಗಿದೆ. ಈ ಮಧ್ಯೆ ಕರ್ನಾಟಕದಲ್ಲಿ ನಿಧಾನಕ್ಕೆ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಓಮೈಕ್ರಾನ್ ಪ್ರಕರಣಗಳು ಸಮುದಾಯಕ್ಕೆ ಹರಡಿದೆ (Karnataka Corona Rise Again) ಎಂಬ ಆತಂಕವೂ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಓಮೈಕ್ರಾನ್ ಹಾಗೂ ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸ್ಪಷ್ಟ ಸೂಚನೆಯೊಂದಿಗೆ ಪತ್ರ ಬರೆದಿದೆ.

ದೇಶದಲ್ಲಿ ಇಂದು 13,154 ಕೊರೋನಾ ಪ್ರಕರಣಗಳು ದಾಖಲಾಗಿದ್ದರೇ, ಕರ್ನಾಕಟವೊಂದರಲ್ಲೇ 702 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳು 30 ರ ಗಡಿ ದಾಟಿದೆ. ದೇಶದಲ್ಲಿ 916 ಓಮೈಕ್ರಾನ್ ಕೇಸ್ ಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಸೇರಿದಂತೆ ಒಟ್ಟು 8 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದು ಎಚ್ಚರಿಕೆ‌ನೀಡಿದೆ.

ಮಾತ್ರವಲ್ಲ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ವಿವರಣೆ ನೀಡಿರುವ ಆರೋಗ್ಯ ಸಚಿವಾಲಯ, ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾದ್ಯತೆ ಇರುವ ನಿಟ್ಟಿನಲ್ಲಿ ಕೊರೋನಾ ಮುನ್ನೆಚ್ಚರಿಕೆ ಹಾಗೂ ನಿಯಮಗಳನ್ನು ಸೂಕ್ತವಾಗಿ ಪಾಲಿಸುವಂತೆ ನೋಡಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲ ನೈಟ್ ಕರ್ಪ್ಯೂ ಸೇರಿದಂತೆ ಕಠಿಣ ನಿಯಮಗಳನ್ನು ರೂಪಿಸಿ ಪಾಲಿಸುವಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಓಮೈಕ್ರಾನ್ ಸಮುದಾಯಕ್ಕೆ ಹರಡಿದೆ ಎಂಬ ಸಂಶಯವೂ ವ್ಯಕ್ತವಾಗಿದೆ. ಅಲ್ಲದೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖವಾಗಿ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾಗಿದ್ದು ಇಂದು ಒಂದೇ ದಿನ 500 ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ಮಧ್ಯೆ ಹೊಸ ವರ್ಷಾಚರಣೆ ಸಂಭ್ರಮದಲ್ಲಿರೋ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಕೇಸ್ ಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಡಿಸೆಂಬರ್ 28 ರಿಂದ ಆರಂಭಿಸಿ ಜನವರಿ 7 ರವರೆಗೆ ಪತ್ತೆಯಾಗುವ ಎಲ್ಲಾ ಕೊರೋನಾ ಪ್ರಕರಣಗಳನ್ನು ಓಮೈಕ್ರಾನ್ ಟೆಸ್ಟ್ ಗಾಗಿ ಜಿನೋಮಿಕ್ ಸಿಕ್ವೆನಿಂಗ್ಸ್ ಗೆ ಕಳುಹಿಸುವಂತೆ ಸೂಚಿಸಿದೆ. ಒಟ್ಟಿನಲ್ಲಿ ಮತ್ತೊಮ್ಮೆ ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಮೂರನೇ ಅಲೆ ಜನವರಿ ಅಂತ್ಯ ಹಾಗೂ ಫೆಬ್ರವರಿ ಮಧ್ಯಭಾಗದ ವೇಳೆಗೆ ತೀವ್ರವಾಗೋ ಮುನ್ಸೂಚನೆ ಲಭ್ಯವಾಗುತ್ತಿದೆ.

ಇದನ್ನೂ ಓದಿ : Coronavirus Live Updates : ದೇಶದಲ್ಲಿ ಒಂದೇ ದಿನ ಹೊಸ 13,154 ಕೋವಿಡ್ ಪ್ರಕರಣಗಳು ವರದಿ

ಇದನ್ನೂ ಓದಿ : Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

( Karnataka and Other 5 State Corona Rise Again In State : central Government Warning)

Comments are closed.