new COVID-19 cases: ದೇಶದಲ್ಲಿ ಮತ್ತೆ 16,764 ಮಂದಿಗೆ ಕೊರೊನಾ

new COVID-19 cases:ಸಂಭಾವ್ಯ ಕೊರೊನಾ ಮೂರನೆ ಅಲೆಯ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಕಳೆದ 64 ದಿನಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣದ ಮಿತಿಯು 16 ಸಾವಿರ ದಾಟಿದೆ..! ಈ ಮೂಲಕ ದೇಶದಲ್ಲಿ ಒಟ್ಟು ಕೋವಿಡ್​ ಪ್ರಕರಣಗಳು 3,48,38,804 ಆಗಿದೆ. ದೇಶದಲ್ಲಿ ಪ್ರಸ್ತುತ 91,361 ಸಕ್ರಿಯ ಪ್ರಕರಣಗಳು ಇವೆ.


ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 16,764 ಕೊರೊನಾ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 220 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದು ಈ ಮೂಲಕ ದೇಶದಲ್ಲಿ ಕೊರೊನಾ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆಯು 4,81,080 ಆಗಿದೆ.


ಕಳೆದ ಒಂದು ದಿನದಲ್ಲಿ 7585 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೊರೊನಾದಿಂದ ಗುಣಮುಖರಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ 3,42,66,363 ಆಗಿದೆ.

ನಿನ್ನೆ ದೇಶದಲ್ಲಿ 12,50,837 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 24 ಗಂಟೆಯಲ್ಲಿ 66,65,290 ಜನರು ಲಸಿಕೆ ಸ್ವೀಕರಿಸಿದ್ದಾರೆ.. ದೇಶದಲ್ಲಿ ಈವರೆಗೆ ಒಟ್ಟು 1,44,54,16,714 ಜನರಿಗೆ ಲಸಿಕೆ ನೀಡಲಾಗಿದೆ.


ಇತ್ತ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ. ದೆಹಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಮಹಾರಾಷ್ಟ್ರ 450ಓಮಿಕ್ರಾನ್​ ಪ್ರಕರಣಗಳನ್ನು ವರದಿ ಮಾಡಿದೆ. ದೆಹಲಿಯಲ್ಲಿ 320 ,ಗುಜರಾತ್ ನಲ್ಲಿ 97 ತೆಲಂಗಾಣ 62 ಆಂಧ್ರ 16, ಹರಿಯಾಣ ಒಡಿಶಾ ತಲಾ 14 ಪಶ್ಚಿಮ ಬಂಗಾಳ 11 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿದೆ.

India reports 16,764 new COVID-19 cases, Omicron tally rises to 1,270

ಇದನ್ನು ಓದಿ : Karnataka Corona Rise Again : ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಮಾಣ ಏರಿಕೆ : ಆಘಾತಕಾರಿ ಮಾಹಿತಿ ಕೊಟ್ಟ ಕೇಂದ್ರ

ಇದನ್ನೂ ಓದಿ : Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

Comments are closed.