Yash upcoming Film: ಜ.8ರಂದು ಸಿಹಿಸುದ್ದಿ ಕೊಡ್ತಾರಂತೆ ನಟ ಯಶ್; ಅಭಿಮಾನಿಗಳಿಗೆ ಸಿಗಲಿದ್ಯಾ ಮುಂದಿನ ಸಿನಿಮಾದ ಸುಳಿವು..?

ಬೆಂಗಳೂರು: Yash upcoming Film:ಕಾಂತಾರ ಸಕ್ಸಸ್ ಬಳಿಕ ಸದ್ಯ ಚಂದನವನಲ್ಲಿ ನಟ ಯಶ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೆಜಿಎಫ್- 2 ಬಳಿಕ ಯಶ್ ಯಾವ ಸಿನಿಮಾದಲ್ಲಿ ನಟಿಸಬಹುದು ಅನ್ನೋ ಕುತೂಹಲ ಇಡೀ ಭಾರತೀಯ ಚಿತ್ರರಂಗದಲ್ಲಿದೆ. ಆದರೆ ಯಶ್ ಈ ಬಗ್ಗೆ ಎಲ್ಲೂ ಬಿಟ್ಟುಕೊಟ್ಟಿಲ್ಲ. ಈ ನಡುವೆ 2023ರ ಜನವರಿ 8ರಂದು ಯಶ್ ಕಡೆಯಿಂದ ಗುಡ್ ನ್ಯೂಸ್ ಸಿಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.

ಇಂದು ಕನ್ನಡದ ಖ್ಯಾತ ನಿರ್ದೇಶಕ ನರ್ತನ್ ಅವರ ಜನ್ಮದಿನ. ಈ ಹಿನ್ನೆಲೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನರ್ತನ್ ಅವರಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದೆ. ನಮ್ಮ ಭರವಸೆಯ ನಿರ್ದೇಶಕರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಕೆವಿಎನ್ ಪ್ರೊಡಕ್ಷನ್ ಹೌಸ್ ಬರೆದುಕೊಂಡಿದೆ. ಈ ವಿಚಾರ ಸದ್ಯ ಎಲ್ಲರನ್ನೂ ಕುತೂಹಕ್ಕೀಡುಮಾಡಿದೆ. ಇದು ಯಶ್ ಅವರ ಮುಂದಿನ ಚಿತ್ರ ಯಾವುದು ಅನ್ನೋದರ ಸುಳಿವು ಅಂತಾನೇ ಎಲ್ಲರೂ ಭಾವಿಸಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಇಂದು ಕೆವಿಎನ್ ಪ್ರೊಡಕ್ಷನ್ ಹೌಸ್ ನರ್ತನ್ ಅವರ ಜನ್ಮದಿನಕ್ಕೆ ಶುಭಕೋರಿರುವ ಪೋಸ್ಟ್ ಕೂಡಾ ಇದಕ್ಕೆ ಪುಷ್ಟಿ ನೀಡುವಂತಿದೆ.

ಇದನ್ನೂ ಓದಿ: Shah Rukh Khan Pathaan Movie : ಶಾರುಖ್‌ ಕೈಯಲ್ಲಿ ಬಾಲಿವುಡ್‌ ಭವಿಷ್ಯ : ಪಠಾಣ್‌ಗೆ ಜರ್ಮನಿಯಲ್ಲಿ ಸಖತ್‌ ರೆಸ್ಪಾನ್ಸ್

ಇನ್ನು ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಅವರ ಹುಟ್ಟುಹಬ್ಬ. ಈ ದಿನವೇ ಅಭಿಮಾನಿಗಳಿಗೆ ಯಶ್ ತಮ್ಮ 19ನೇ ಸಿನಿಮಾ ಯಾವುದು ಅನ್ನೋದರ ಮಾಹಿತಿ ನೀಡುತ್ತಾರೆ ಅನ್ನೋ ಸುದ್ದಿ ಕೆಲ ದಿನಗಳಿಂದ ಕೇಳಿಬರುತ್ತಿದೆ. ಸದ್ಯ ಸಿಕ್ಕಿರುವ ಸುಳಿವು ನಿಜವಾಗಿದ್ದರೆ ತಮ್ಮ ಬರ್ತ್ ಡೇಯಂದು ಯಶ್ ಮುಂದಿನ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಶಿವರಾಜ್ ಕುಮಾರ್ ಹಾಗೂ ಶ್ರೀಮರುಳಿ ನಟನೆಯ ಮಫ್ತಿ ಸಿನಿಮಾದ ಮೂಲಕ ನಿರ್ದೇಶಕ ನರ್ತನ್ ಜನಪ್ರಿಯತೆ ಪಡೆದಿದ್ದಾರೆ. ಮುಂದಿನ ಯಶ್ ಸಿನಿಮಾವನ್ನು ನರ್ತನ್ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಅಭಿಮಾನಿಗಳ ಚಿತ್ತ ರಾಕಿಂಗ್ ಸ್ಟಾರ್ ಯಶ್ ಮೇಲೆ ನೆಟ್ಟಿದೆ. ಕೆಜಿಎಫ್- 1 ಮತ್ತು 2 ಸೂಪರ್ ಹಿಟ್ ಎನಿಸಿಕೊಂಡ ಬಳಿಕ ಸಿನಿಮಾ ಆಯ್ಕೆಯಲ್ಲಿ ಯಶ್ ತುಂಬಾ ಸೆಲೆಕ್ಟಿವ್ ಆಗಿದ್ದಾರಂತೆ. ತಡವಾದ್ರೂ ಪರವಾಗಿಲ್ಲ. ಒಳ್ಳೆ ಸಿನಿಮಾದ ಮೂಲಕವೇ ದೊಡ್ಡ ಪರದೆ ಮೇಲೆ ಮಿಂಚಬೇಕು ಅನ್ನೋದೇ ಯಶ್ ಅವರ ಕನಸಾಗಿದೆ.

ಇದನ್ನೂ ಓದಿ: Sandalwood New Heroines : 2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಸಾಧಿಸಿದ ಹೊಸ ನಟಿ ಮಣಿಯರು

Yash upcoming Film: Actor Yash will give good news on January 8th: Did the fans get a hint of the next movie

Comments are closed.