Yashika Anand : ಖ್ಯಾತ ನಟಿ ಯಶಿಕಾ ಆನಂದ ಕಾರು ಅಪಘಾತ : ಗೆಳತಿ ಸಾವು

ಹೈದ್ರಾಬಾದ್‌ : ತೆಲುಗು, ತಮಿಳು ಚಿತ್ರರಂಗದ ಖ್ಯಾತನಟಿ ಯಶಿಕಾ ಆನಂದ್ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ನಟಿ ಯಶಿಕಾ ಆನಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ನೇಹಿತೆ ಸಾವನ್ನಪ್ಪಿದ್ದಾರೆ.

ನಟಿ ಯಶಿಕಾ ಆನಂದ ತನ್ನಿಬ್ಬರು ಸ್ನೇಹಿತರ ಜೊತೆಯಲ್ಲಿ ಮಹಾಬಲಿಪುರಂನಿಂದ ಚೆನ್ನೈಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಮಹಾಬಲಿಪುರಂ ಬಳಿಯ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ನಂತರ ಕಾರು ಪಲ್ಟಿಯಾಗಿದ್ದು, ಯಶಿಕಾ ಗೆಳಗಿ ವಲ್ಲಿಚೆಟ್ಟಿ ಭವಾನಿ (೨೮ ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ನಟಿ ಯಶಿಕಾ ಆನಂದ, ಇನ್ನೋರ್ವ ಸ್ನೇಹಿತೆ ಹಾಗೂ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಮಹಾಬಲಿಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಕವಲೈ ವೆಂಡಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯಶಿಕಾ, ಕಾರ್ತಿಕ್ ನರೇನ್ ಅವರ ಥ್ರಿಲ್ಲರ್ ಧುರುವಾಂಗಲ್ ಪಾಥಿನಾರು ಚಿತ್ರದ ಮೂಲಕ ಬಹುಪ್ರಖ್ಯಾತಿಯನ್ನು ಪಡೆದು ಕೊಂಡಿದ್ದಾರೆ. ಇರುಟ್ಟು ಅರೈಯಿಲ್ ಮುರಟ್ಟು ಕುತು ಮತ್ತು ಜೂಂಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನುಕಮಲ್ ಹಾಸನ್ ಆಯೋಜಿಸಿದ್ದ ಜನಪ್ರಿಯ ದೂರದರ್ಶನ ಕಾರ್ಯಕ್ರಮ ಬಿಗ್ ಬಾಸ್ ತಮಿಳು ಎರಡನೇ ಸೀಸನ್‌ ನಲ್ಲಿಯೂ ಪಾಲ್ಗೊಂಡು ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Comments are closed.